ಜಗಳೂರು: ಸಾಹಿತ್ಯದಲ್ಲಿ ವೈಚಾರಿಕತೆಗೆ ಭದ್ರಬುನಾದಿ ಹಾಕಿದವರು ಕುವೆಂಪು!

Suddivijaya
Suddivijaya December 29, 2022
Updated 2022/12/29 at 12:37 PM

ಸುದ್ದಿವಿಜಯ, ಜಗಳೂರು: ರಸಋಷಿ ಕುವೆಂಪು ಸಾಹಿತ್ಯದ ಮೂಲಕ ವೈಚಾರಿಕತೆಗೆ ಭದ್ರ ಬುನಾದಿ ಹಾಕಿದ ರಾಷ್ಟ್ರಕವಿ ಎಂದು ನಿವೃತ್ತ ಕನ್ನಡ ಶಿಕ್ಷಕ ಡಿ.ಸಿ.ಮಲ್ಲಿಕಾರ್ಜುನ ಸ್ಮರಿಸಿದರು.

ತಾಲೂಕು ಕಚೇರಿಯಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಹಿನ್ನೆಲೆ ವಿಶ್ವಮಾನವ ದಿಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುಟ್ಟಪ್ಪನವರ ಕವಿತೆ ಮತ್ತು ಬರಹಗಳಲ್ಲಿ ಸಮಾಜ ಶುದ್ಧತೆಯ ಸಂದೇಶವಿದೆ. ಹೀಗಾಗಿ ಸಾಮರಸ್ಯದ ಸಂಕೇತದ ಅವರ ಬರಹಗಳು ಬಹುತ್ವದ ಭಾರತ್ಕೆ ಮಾರ್ಗದರ್ಶನವಾಗಿದೆ ಎಂದರು.

ವಿಶ್ವವೇ ಒಂದು ಕುಟುಂಬ ಎಂಬ ಸಂದೇಶ ನೀಡಿದವರು ಅವರು. ರಾಮಕೃಷ್ಣ ಪರಮ ಹಂಸ ಮತ್ತು ವಿವೇಕಾನಂದರ ವಿಚಾರಧಾರೆಗಳಿಂದ ಪ್ರಭಾವಿತರಾದ ಅವರು ವಿಶ್ವಮಾನವ ಸಂದೇಶ ಸಾರಿದರು. ಶಿಕ್ಷಣದಲ್ಲಿ ಕ್ರಾಂತಿ ಮೂಡಿಸಿದರು. ಹೀಗಾಗಿ ಸರಕಾರ ಅವರ ಜನ್ಮದಿನವನ್ನು ವಿಶ್ವಮಾನ ದಿನಾಚರಣೆ ಮಾಡಿರುವುದು ಸಂತೋಷದ ವಿಷಯ. ಅವರ ಬರಹದಲ್ಲಿ ಪ್ರಕೃತಿ ಪ್ರೇಮ, ಅಘಾದವಾದ ಕನ್ನಡ ಪ್ರೇಮ ಕಳೆಗಟ್ಟಿದೆ.

ಜಗಳೂರು ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು.
ಜಗಳೂರು ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕುಲಪತಿಯಾಗಿ ಶಿಕ್ಷಣ ಕ್ರಾಂತಿ ಮೊಳಗಿಸಿದವರು ಕುವೆಂಪು. ಕನ್ನಡದಷ್ಟೇ ಇಂಗ್ಲಿಷ್‍ನಲ್ಲೂ ಅಪಾರ ಜ್ಞಾನ ಹೊಂದಿದ್ದ ಅವರು ನಾಡು ನುಡಿ ಕಟ್ಟಲು ಆಯ್ಕೆ ಮಾಡಿಕೊಂಡಿದ್ದು ಕನ್ನಡ ಸಾಹಿತ್ಯವನ್ನು. ಅವರ ಮಲೆಗಳಲ್ಲಿ ಮದುಮಗಳು ಬರಹದಲ್ಲಿ ದಟ್ಟ ಕಾಡಿನ ಪರಿಸರದಲ್ಲಿ ಸಂಸ್ಕøತಿಯನ್ನು ಮೇಳೈಸಿದ್ದಾರೆ.

ಸನಾತನ ಧರ್ಮದ ಅಂಕುಟೊಂಕುಗಳನ್ನು ಸರಿಪಡಿಸಲು ಅವರ ಕಾವ್ಯ, ಬರಹಗಳು ವೈಚಾರಿಕತೆಗೆ ವೇದಿಕೆಯಾಗಿವೆ. ಸರ್ವರಿಗೂ ಸಮಪಾಲು, ಸಮಬಾಳು ಎಂದು ಸಾರಿದರು. ಡಂಬಾಚಾರ, ಅಸ್ಪøಶ್ಯತೆಯನ್ನು ತೊಡೆದುಹಾಕಲು ಬರಹಗಳಿಂದ ಸಾಧ್ಯ ಎಂದು ತೋರಿಸಿಕೊಟ್ಟವರು ಕುವೆಂಪು ಎಂದು ಬಣ್ಣಿಸಿದರು.

ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಕುವಂಪು ಅವರು ಬರೆದತೆ ಬದುಕಿದರು. ಬದುಕಿದಂತೆ ಬರೆದರು. ಅವರ ಆದರ್ಶದ ಜೀವನ ಇಡೀ ಯುವ ಜನತೆಗೆ ಮಾರ್ಗದರ್ಶನ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಸಾಮರಸ್ಯದ ಬದುಕು. ಕನ್ನಡ ಭಾಷೆಗೆ ಅವರು ಕೊಟ್ಟ ಬರಹಗಳಾದ ಅಮಲನ ಕಥೆ, ಶ್ರೀರಾಮಾಯಣ ದರ್ಶನಂ, ಕೊರಳಿಗೆ ಬೆರಳ್, ಅನಿಕೇತನ ಇವು ವಿಶ್ವಮಾನವ ಕವಿ ಪುಟ್ಟಪ್ಪನವರ ಹೃದಯದ ಶ್ರೀಮಂತಿಕೆಯ ಬರಹಗಳು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷೆ ಸುಜಾತಮ್ಮ ನಿವೃತ್ತ ಉಪನ್ಯಾಸಕ ರಾಜಪ್ಪ, ರೈತಸಂಘದ ತಿಪ್ಪೇಸ್ವಾಮಿ, ಗ್ರೇಡ್ 2 ತಹಶೀಲ್ದಾರ್ ಮಂಜಾನಂದ, ಡಿಎಸ್‍ಎಸ್ ಸಂಚಾಲಕ ಕುಬೇಂದ್ರಪ್ಪ, ದಲಿತ ಮುಖಂಡರಾದ ಪೂಜಾರ್ ಸಿದ್ದಪ್ಪ, ಹಿರಿಯನಾಗರೀಕರ ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!