ಮದುವೆ ನಿಶ್ಚಯವಾಗಿದ್ದ ಯುವತಿಗೆ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆ!

Suddivijaya
Suddivijaya December 22, 2022
Updated 2022/12/22 at 10:40 AM

ಸುದ್ದಿವಿಜಯ, ದಾವಣಗೆರೆ:ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಹಾಡಹಗಲೇ ದುಷ್ಕರ್ಮಿಯೊಬ್ಬ ಹರಿತವಾದ ಆಯುಧದಿಂದ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ನಗರದ ಪಿಜೆ ಬಡಾವಣೆಯಲ್ಲಿ ನಡೆದಿದೆ.

ಚಾಂದ್ ಸುಲ್ತಾನ(28)ಹತ್ಯೆಗೀಡಾದ ಮಹಿಳೆ. ವ್ಯಕ್ತಿಯೊಬ್ಬ ಈಕೆಯನ್ನು ಹರಿತವಾದ ಆಯುಧದಿಂದ ಹತ್ತಾರು ಬಾರಿ ಮನಸೋ ಇಚ್ಛೆ ಇರಿದು ಕೊಲೆ ಮಾಡಿ ಬೈಕಿನಲ್ಲಿ ಪರಾರಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸಂಪೂರ್ಣ ದಾಖಲಾಗಿದೆ.

ಮೃತ ಮಹಿಳೆ ವಿನೋಬನಗರದ ವಾಸಿಯಾಗಿದ್ದು, ನಗರದ ಮುಸ್ಲಿಂ ಹಾಸ್ಟೆಲ್‌ನಲ್ಲಿರುವ ಕಚೇರಿಯೊಂದರಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದರು. ಹರಿಹರದ ಅಯೂಬ್ ಎಂಬ ಯುವಕನ ಜೊತೆ ಇತ್ತೀಗಷ್ಟೇ ಈಕೆಯ ಮದುವೆ ನಿಶ್ಚಯವಾಗಿತ್ತು. ಆದರೆ ಇದ್ದಕ್ಕಿಂದAತೆ ಗುರುವಾರ ಬೆಳಿಗ್ಗೆ ಯುವತಿಯನ್ನು ಕೊಲೆ ಗೈಯಲಾಗಿದೆ.

ಚಾಂದ್ ಸುಲ್ತಾನ್ ಅವರು ತನ್ನ (ಕೆಎ 17 ಈಎಸ್ 2632) ಬಿಳಿ ಬಣ್ಣದ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬಂದಿರುವ ಹಂತಕ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆ ಸ್ವಲ್ಪ ಪ್ರತಿರೋಧ ತೋರುತ್ತಿದ್ದಂತೆಯೆ ಹಂತಕ ಚಾಕುವಿನ ಇರಿತವನ್ನು ಮತ್ತಷ್ಟು ಚುರುಕುಗೊಳಿಸಿ ಮನಬಂದAತೆ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ನರಳುತ್ತಾ ಕೊನೆಯುಸಿರೆಳೆದಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!