ಸರಕಾರಿ ಪ.ಪೂರ್ವ ಕಾಲೇಜಿಗೆ ಶಾಸಕ ದೇವೇಂದ್ರಪ್ಪ ದಿಢೀರ್ ಭೇಟಿ, ತಬ್ಬಿಬ್ಬಾದ ಸಿಬ್ಬಂದಿ!

Suddivijaya
Suddivijaya June 21, 2023
Updated 2023/06/21 at 11:13 AM

ಸುದ್ದಿವಿಜಯ, ಜಗಳೂರು: ಪಟ್ಟಣದ ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಆಗಮಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಬಿ.ದೇವೇಂದ್ರಪ್ಪ ದಿಢೀರ್ ಭೇಟಿ ನೀಡಿ ಶಿಕ್ಷಕರಿಗೆ ಉಪನ್ಯಾಸಕರಿಗೆ ತರಾಟೆ ತೆಗೆದುಕೊಂಡರು.

ಶಾಲಾ ಸಮಯದಂತೆ 10 ಗಂಟೆಗೆ ಪ್ರಾರ್ಥನೆ ಆರಂಭವಾಗಬೇಕು. ಆದರೆ 10.20 ಸಮಯವಾದರೂ ಆರಂಭವಾಗಿರಲಿಲ್ಲ. ಆಗ ಶಾಸಕರು ಇದೇನಾ ಪ್ರಾರ್ಥನೆ ಸಮಯ. ಹೇಳೋರು ಕೇಳೋರು ಯಾರು ಇಲ್ವಾ. ಸಂಬಳತೆಗೆದುಕೊಳ್ಳುತ್ತೀರಿ ಅದಕ್ಕೆ ಸರಿಯಾಗಿ ಕೆಲಸ ಮಾಡಬೇಕು.

ವಿದ್ಯಾರ್ಥಿಗಳು ರಾಗವಾಗಿ ನಾಡಗೀತೆ, ರಾಷ್ಟ್ರಗೀತೆ ಹಾಡುವುದಿಲ್ಲ. ಶಿಸ್ತುಬದ್ಧವಾಗಿ ಕ್ರಮಬದ್ಧವಾಗಿ ಹಾಡಿಸಿ. ದೈಹಿಕ ಶಿಕ್ಷಣ ಶಿಕ್ಷಕ ರಾಜಣ್ಣ ಅವರು ಸರಿಯಾಗಿ ವೃತ್ತಿ ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಎಲ್ಲಿ ಹೋಗಿದ್ದಾರೆ ಅವರನ್ನು ಕರೆಯಿರಿ ಎಂದು ಕೇಳಿದಾಗ ಅವರು ರಜೆ ತೆಗೆದುಕೊಂಡಿದ್ದಾರೆ ಆರೋಗ್ಯ ಸರಿಯಿಲ್ಲ ಎಂದು ಮತ್ತೊಬ್ಬ ಶಿಕ್ಷಕರು ಉತ್ತರಿಸಿದರು.

ರಜೆ ಚೀಟಿ ಎಲ್ಲಿ ಎಂದು ಶಾಸಕರು ಪ್ರಶ್ನಿಸಿದರು. ಇಂದು ಅಂತಾರಾಷ್ಟ್ರೀಯ ಯೋಗದಿನಾಚರಣೆ. ಮಕ್ಕಳಿಗೆ ಯೋಗ ಹೇಳಿಕೊಡುವವರು ಯಾರೂ ಇಲ್ಲ. ಏಕಾ ಏಕೆ ಮನಸ್ಸಿಗೆ ಬಂದಂತೆ ರಜೆ ತೆಗೆದುಕೊಂಡರೆ ಹೇಗೆ? ಎಲ್ಲಿ ಅವರ ಹಾಜರಾತಿ ತೋರಿಸಿ ಎಂದು ಹಾಜರಾತಿ ಪುಸ್ತಕ ವೀಕ್ಷಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಿಗೆ ಮೆಮೋ ಕೊಡಿ ಎಂದು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ನಾಲ್ಕು ವರ್ಷಗಳಾದರೂ ವಿದ್ಯಾರ್ಥಿಗಳಿಗೆ ಮುಕ್ತವಾದ ಒಂದು ಕೋಟಿ ರೂ ವೆಚ್ಚದ ಎರಡು ಲ್ಯಾಬ್ ಮತ್ತು ಮೂರು ಕೊಠಡಿಗಳ ಬಗ್ಗೆ ವಿಚಾರಿಸಿದ ಶಾಸಕರು ಲೋಕೋಪಯೋಗಿ ಇಲಾಖೆ ಎಇಇಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು. ಕೊಠಡಿಗಳ ಕಾಮಗಾರಿ ಕಳಪೆಯಾಗಿದೆ.

ನಾಲ್ಕು ವರ್ಷಗಳಾದರೂ ಕೊಠಡಿಗಳು ಲೋಕಾರ್ಪಣೆಯಾಗಿಲ್ಲ. ನೀವು ಕೆಲಸ ಮಾಡುವುದು ಹೀಗೆನಾ? ಕಾಂಟ್ರ್ಯಾಕ್ಟರ್ ಯಾರು ಅವರನ್ನು ಕರೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮನಸ್ಸು ಮಾಡಿದರೆ ಸಚಿವನಾಗಬಹುದೇನೋ!
ಅರಿಸ್ಟಾಟಲ್ ಅವರು ಸೌಂಡ್ ಮೈಡ್ ಈಸ್ ಎ ಸೌಂಡ್ ಬಾಂಡಿ ಎಂದು ಹೇಳಿದ್ದಾರೆ. ಎಲ್ಲಿ ಆರೋಗ್ಯವಂತ ದೇಹ ಇರತ್ತದೋ ಅವರಲ್ಲಿ ಉತ್ತಮವಾದ ಮನಸ್ಸು ಇರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಬೇಕು. ಇಂದು ದೇಶ ಅಭಿವೃದ್ಧಿಯಾಗಿರುವುದು ನಿಮ್ಮಂತಹ ವಿದ್ಯಾರ್ಥಿಗಳಿಂದ.

ಕೇವಲ ಪಠ್ಯದಿಂದ ಅಸಾಧ್ಯ. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂದು ಚಿಂತಿಸಿ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ದೇಶವನ್ನು ನಾವೆಲ್ಲ ಪ್ರೀತಿಸಬೇಕು. ಸಮಯಕ್ಕೆ ಒತ್ತು ಕೊಡಿ. 1977ರಲ್ಲಿ ಇದೇ ಶಾಲೆಯಲ್ಲಿ ಓದಿದವನು. ಈಗ ಶಾಸಕನಾಗಿದ್ದೇನೆ.

ನಾನು ಮನಸ್ಸು ಮಾಡಿದರೆ ಸಚಿವನಾಗಬಹುದೇನೋ. ನಿಮ್ಮ ಗುರಿ ಗೆಲುವಿ ಕಡೆ ಇರಲಿ. ಯಾವುದೇ ಭೇದ ಭಾವ ಮಾಡದೇ ಓದಿನ ಕಡೆಗಮನ ಹರಿಸಿ. ಶ್ರದ್ಧೆಯಿಂದ ಓದಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!