ಸುದ್ದಿ ವಿಜಯ, ಜಗಳೂರು:ತಾಲೂಕಿನ ಮೆದಗಿನಕೆರೆ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಯಿತು.
ಈ ಶಾಲೆಯಲ್ಲಿ 150 ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿದ್ದರು. ಬೆಳಗ್ಗೆ 10 ಗಂಟೆಯಿಂದ ಶಾಲಾ ಕೊಠಡಿಯೊಂದರಲ್ಲಿ ಲಸಿಕೆ ಆರಂಭಿಸಲಾಯಿತು. ಪ್ರತಿ ವಿದ್ಯಾರ್ಥಿಗಳು ಸಾಲಾಗಿ ನಿಂತುಕೊಂಡು ಒಬೊಬ್ಬರಾಗಿಯೇ ಲಸಿಕೆ ಪಡೆದುಕೊಂಡರು. ಶುಕ್ರವಾರ ಒಟ್ಟು 80 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು.
ಮಕ್ಕಳಿಗೆ ಲಸಿಕೆ ಹಾಕುವ ಹಿನ್ನೆಲೆ ಪಾಲಕರು ಶಾಲಾ ಆವರಣದಲ್ಲಿ ದೌಡಾಯಿಸಿದ್ದರು, ಲಸಿಕೆ ಪಡೆದವರಿಗೆ ಜ್ವರ, ತಲೆ ನೋವು ಬರುವ ಸಾದ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಿದ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು. ಇನ್ನು ಕೆಲವು ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿಯೇ ವಿಶ್ರಾಂತಿ ಪಡೆದುಕೊಂಡರು.
ಪ್ರಾಂಶುಪಾಲ ಜಿ. ರೂಪಕಲಾ ಮಾತನಾಡಿ, ಕರೊನಾ ವೈರಸ್‍ನಿಂದ ತಪ್ಪಿಸಲು 12ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕೋವಿಸ್ ಲಸಿಕೆ ಹಾಕಲು ಸರ್ಕಾರ ಸೂಚನೆ ನೀಡಿದೆ, ಆದ್ದರಿಂದ ನಮ್ಮ ಶಾಲೆಯಲ್ಲಿರುವ 150 ಮಕ್ಕಳಿಗೆ ಲಸಿಕೆ ಹಾಕಿಸಲಾಗುವುದು, ಈಗಾಗಲೇ ಶೇ.50 ರಷ್ಟು ಕೊಡಲಾಗಿದೆ. ಇನ್ನುಳಿದ ಮಕ್ಕಳಿಗೆ ಶನಿವಾರ ನೀಡಲಾಗುವುದು ಎಂದರು.
ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಎಲ್ಲರು ಆರೋಗ್ಯವನ್ನು ವಿಚಾರಿಸಿ ಜ್ವರ ಕಾಣಿಸಿಕೊಂಡವರಿಗೆ ಬೇಕಾದ ಔಷಧಿಗಳನ್ನು ನೀಡಲಾಗಿದೆ. ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಕರೆದೊಯ್ದಿದ್ದಾರೆ. ಒಂದೆರಡು ದಿನಗಳು ಬಿಟ್ಟು ಶಾಲೆಗೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತೇಶ್ವರಸ್ವಾಮಿ, ಸಮುದಾಯ ಆರೋಗ್ಯ ಅಧಿಕಾರಿ ಮರ್ಸಿ ಆಲ್ಯೂವ್, ಶುಶ್ರೂಷಕಿ ರೇಷ್ಮೇ ಸೇರಿದಂತೆ ಮತ್ತಿತರಿದ್ದರು.