ಜಗಳೂರು: ರಾಮಕೃಷ್ಣ ಕೊಲೆ ಆರೋಪಿ ಎ.ಟಿ.ನಾಗರಾಜ್ ಸರೆಂಡರ್!

Suddivijaya
Suddivijaya January 12, 2023
Updated 2023/01/12 at 2:01 PM

ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಕೊಲೆ ಆರೋಪಿ ತಲೆಮರೆಸಿಕೊಂಡಿದ್ದ ಅಮಾನತ್ತಾಗಿರುವ ಪಿಡಿಒ ಎ.ಟಿ.ನಾಗರಾಜ್ ದಾವಣಗೆರೆಯ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಕಳೆದ ಶನಿವಾರ ಸಂಜೆ ಹೊಸಕೆರೆ ಗ್ರಾಮದ ಡಾಬಾವೊಂದರಲ್ಲಿ ಊಟ ಮಾಡುತ್ತಿದ್ದ ರಾಮಕೃಷ್ಣನನ್ನು ಪಿಡಿಒ ಎ.ಟಿ.ನಾಗರಾಜ್ ಅವರ ಹಿಂಬಾಲಕರು ಕಲ್ಲಿನಿಂದ ಹಲ್ಲೆ ಮಾಡಿ ಮರ್ಡರ್ ಮಾಡಿದ್ದರು.

ಗೌರಿಪುರ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ
ಗೌರಿಪುರ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ

ಈ ಕೊಲೆ ಸಂಬಂಧ ರಾಮಕೃಷ್ಣ ತಂದೆ ಪ್ರಕಾಶ್ ಎ.ಟಿ.ನಾಗರಾಜ್ ಸೇರಿದಂತೆ 11 ಜನರವಿರುದ್ಧ ಜಗಳೂರು ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದರು. ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಾದ ಅರ್ಜುನ್ ಮತ್ತು ಪ್ರಶಾಂತ್ ಜಗಳೂರು ಪೊಲೀಸರಿಗೆ ಶರಣಾಗಿದ್ದರು.

ಎ1 ಆರೋಪಿ ಎ.ಟಿ.ನಾಗರಾಜ್ ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ. ಗುರುವಾರ ಮಧ್ಯಾಹ್ನ ಖುದ್ದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಳಿದ ಆರೋಪಿಗಳು ಎ.ಟಿ.ಪ್ರಭು, ಕುಮಾರ, ಧನ್ಯಕುಮಾರ್, ಜಿ.ಸಿ.ಬಸವನಗೌಡ, ಯೋಗೇಶ್, ನಾಗಾಚಾರಿ ತಲೆ ಸೇರಿದಂತೆ ಉಳಿದವರು ಮರೆಸಿಕೊಂಡಿದ್ದು ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಲು ತಂಡಗಳನ್ನು ರಚಿಸಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!