ಸುದ್ದಿವಿಜಯ, ಜಗಳೂರು: ಮತದಾನ ಮಾಡುವ ಮುನ್ನ ಯಾವ ಪಕ್ಷದ ಅಭ್ಯರ್ಥಿ ಕೊಡುವ ಹಣ ಅಥವಾ ಉಡುಗೊರೆಗೆ ಆಸೆಗೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಹೊಸ ಯುವ ಮತದಾರಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಮತದಾನದ ದಿನವಾದ ಬುಧವಾರ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಅರಿವು ಮೂಡಿಸಿ ಪ್ರತಿಜ್ಞಾವಿಧಿ ಬೊಧಿಸಿ ಮಾತನಾಡಿದರು.
2011 ರಿಂದ ರಾಷ್ಟ್ರೀಯ ಮತದಾನದ ದಿನ ಎಂದು ಆಚರಿಸುತ್ತಾ ಬಂದಿದೇವೆ. ಜಗಳೂರು ತಾಲೂಕಿನಲ್ಲಿ ಒಟ್ಟು 2100 ಜನರು ಹೊಸ ಮತದಾರಾಗಿ ಸೇರ್ಪಡೆಯಾಗಿದ್ದಾರೆ. ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಕರೆನೀಡಿದರು.
ನ್ಯಾಯಸಮ್ಮತ ಚುನಾವಣೆ ನಡೆಯಲು ಭಾರತದ ಚುನಾವಣಾ ಆಯೋಗ ಜಾಗೃತಿ ಮೂಡಿಸುತ್ತಾ ಬಂದಿದೆ. ಈ ವರ್ಷದಿಂದ 1/1/2023 ರಿಂದ ಹೊಸ ಸೇರ್ಪಡೆಗೆ 18 ವರ್ಷ ತುಂಬಿದವರಿಗೆ ಅವಕಾಶ ಕಲ್ಪಿಸಿದೆ. 17 ವರ್ಷ ತುಂಬಿ 18 ವರ್ಷಕ್ಕೆ ಕಾಲಿಡುವ ಯುವ ಜನರಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅದು 18 ವರ್ಷ ತುಂಬಿದ ನಂತರ ನಿಮ್ಮ ಮನೆಗೆ ಮತದಾನ ಗುರುತಿನ ಚೀಟಿ ತಲುಪುತ್ತದೆ.
ಈ ವರ್ಷ ಮತದಾನ ಘೋಷವಾಖ್ಯವೆಂದರೆ ‘ಮತದಾನಕ್ಕಿಂತ ಇನ್ನೋಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬುದಾಗಿದೆ. ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ನೀಡಿದ್ದು, ಪ್ರತಿಯೊಬ್ಬರೂ ಮತದಾನ ಮಾಡಿ ಎಂದು ಅರಿವು ಮೂಡಿಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಶಕ್ತಿ ಶಾಲಿ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರರ ಬಲಯುತ ಹಾಗೂ ಪರಿಪೂರ್ಣ ಪಾಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕ ಸಂಗತಿಯಾಗಿದೆ.
ಉಜ್ವಲ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅತ್ಯಂತ ಮುಕ್ತವಾಗಿ, ನ್ಯಾಯೋಚಿತವಾಗಿ, ನಿಯಮಿತವಾಗಿ ಹಾಗೂ ವಿಶ್ವಾಸಾರ್ಹವಾಗಿರಬೇಕು. ಪ್ರಜಾಪ್ರಭುತ್ವದಲ್ಲಿ ಮತದಾರರು ತಾವು ಮತ ಹಾಕಲಿರುವ ಅಭ್ಯರ್ಥಿಯ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದು ಮತದಾರರು ಅರ್ಥಮಾಡಿಕೊಂಡು ಮತದಾನ ಮಾಡಿ ಎಂದರು.
ಬಿಒಓ ಉಮಾದೇವಿ ಮಾತನಾಡಿ, ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಪ್ರಭುತ್ವದ ಬೇರುಗಳು ಘಟ್ಟಿಗೊಳ್ಳಬೇಕಾದರೆ ಮೊದಲು ಯುವಕರು ಲ್ಯಾಪ್‍ಟಾಪ್, ಮೊಬೈಲ್ ಸೇರಿ ವಿವಿಧ ಆಮಿಷಗಳಿಗೆ ಒಳಗಾಗದೇ ನಿಮಗೆ ತೊಚಿದ ಅಭ್ಯರ್ಥಿಗೆ ನೀವು ಮತದಾನ ಮಾಡಿ. ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದರು.
ಸರಿಕಾರಿ ಅಭಿಯೋಜಕರಾದ ರೂಪಾ ಮತನಾಡಿ, ಯುವಕರು ಈ ದೇಶದ ಆಸ್ತಿ. ದೇಶ, ರಾಜ್ಯ ಕಟ್ಟುವ ಶಕ್ತಿ ಯುವಜನರಿಗಿದೆ. ಕಡ್ಡಾಯವಾಗಿ ಮತದಾನ ಮಾಡಿ ಎಂದು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಕಂದಾಯ ಇಲಾಖೆ ಆರ್‍ಐ ಕುಬೇರ್ ನಾಯ್ಕ್ ಸೇರಿದಂತೆ ಅನೇಕರು ಇದ್ದರು.
ಜಗಳೂರು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆ ಯುವ ಮತದಾರರಿಗೆ ಅರಿವು ಮೂಡಿಸಿ