ಜಗಳೂರು: ಎನ್‍ಪಿಎಸ್ ರದ್ಧತಿಗೆ ಸದನದಲ್ಲಿ ಚರ್ಚಿಸಲು ಶಾಸಕರಿಗೆ ನೌಕರರಿಂದ ಮನವಿ!

Suddivijaya
Suddivijaya June 22, 2023
Updated 2023/06/22 at 5:08 PM

ಸುದ್ದಿವಿಜಯ, ಜಗಳೂರು: ರಾಜ್ಯ ಸರಕಾರಿ ನೌಕರರಿಗೆ ಮಾರಕವಾಗಿರುವ ಎನ್‍ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೆ ಸದನದಲ್ಲಿ ಚರ್ಚೆ ನಡೆಸಿ ಕೊಟ್ಟ ಮಾತಿನಂತೆ ನಮ್ಮ ಭರವಸೆಯನ್ನು ಈಡೇರಿಸಿ ಎಂದು ತಾಲೂಕು ಎನ್‍ಪಿಎಸ್ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಎನ್‍ಪಿಎಸ್ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಡಿ.ಎಸ್.ಬಣಕಾರ್, ರಾಜ್ಯ ಸರಕಾರ ಎನ್‍ಪಿಎಸ್ ನೌಕರರ ಸಂಘ ಬೆಂಗಳೂರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ ಎನ್‍ಪಿಎಸ್ ರದ್ದು ಪಡಿಸಲು ನಮ್ಮ ಕಾಂಗ್ರೆಸ್‍ಗೆ ಮತಹಾಕಿ ಎಂದು ಕೇಳಿಕೊಂಡಿದ್ದರು.

ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಸಹ ಎನ್‍ಪಿಎಸ್ ರದ್ದು ಮಾಡುವುದಾಗಿ ಭರವಸೆ ನೀಡಲಾಗಿತ್ತು. ವೋಟ್ ಫಾರ್ ಒಪಿಎಸ್ ಅಭಿಯಾನದಲ್ಲಿ ಕಾಂಗ್ರೆಸ್ ನಾಯಕರು ಮಾತುಕೊಟ್ಟಂತೆ ನಡೆದುಕೊಳ್ಳುವ ಭರವಸೆ ನೀಡಿದ್ದರಿಂದ ನಾವೆಲ್ಲ ಕಾಂಗ್ರೆಸ್‍ಗೆ ಮತಹಾಕಿದ್ದೇವೆ.

2006ರ ನಂತರ ನೇಮಕವಾದ ನೌಕರರಿಗೆ ಜಾರಿಗೊಳಿಸಿರುವ ಎನ್‍ಪಿಎಸ್ ಯೋಜನೆಯನ್ನು ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಾಂಡ್, ಛತ್ತೀಸ್‍ಗಡ, ಪಂಜಾಬ್ ರಾಜ್ಯಗಳು ರದ್ದುಪಡಿಸಿರುವಂತೆ ನಮ್ಮ ರಾಜ್ಯದಲ್ಲೂ ರದ್ದುಗೊಳಿಸಬೇಕು. ಇದರಿಂದ ತಾಲೂಕಿನ 639 ಜನ ನೌಕರರು ಸೇರಿದಂತೆ ರಾಜ್ಯದಾದ್ಯಂತ ಇರುವ ಎನ್‍ಪಿಎಸ್ ನೌಕರರಿಗೆ ಅನುಕೂಲವಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ.ದೇವೇಂದ್ರಪ್ಪ, ನಮ್ಮ ಸರಕಾರದ ಭರವಸೆಯನ್ನು ಈಡೇರಿಸುತ್ತದೆ. ನಿಮ್ಮ ಪರವಾಗಿ ನಾನು ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ರಾಜ್ಯ ಸರಕಾರದ ಯಾವುದೇ ನೌಕರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹಳೆಯ ಪಿಂಚಿಣಿ ವ್ಯವಸ್ಥೆಯನ್ನು ರದ್ದು ಪಡಿಸಿದ್ದರಿಂದ ನಿಮಗೆ ಏನೂ ಲಾಭವಿಲ್ಲ.

ಅದು ಬಲ್ಬ್ ಇಲ್ಲದ ಕಂಬಗಳು ಎಂಬಂತಾಗಿದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ನಮ್ಮ ಸಿಎಂ ಮತ್ತು ಡಿಸಿಎಂ ಭರವಸೆಯನ್ನು ಈಡೇರಿಸುತ್ತಾರೆ. ಜುಲೈನಲ್ಲಿ ಸಂಭ್ರಮ ಆಚರಿಸಿ ಎಂದು ಹೇಳಿದ್ದರು. ನಿಮ್ಮ ಭರವಸೆಯನ್ನು ನಮ್ಮ ಸರಕಾರ ಈಡೇರಿಸುತ್ತದೆ. ನಮ್ಮ ಮಂತ್ರಿಗಳು, ನಾಯಕರು ಸದನದಲ್ಲಿ ಸುಧೀರ್ಘ ಚರ್ಚೆ ನಡೆಸುತ್ತಾರೆ. ನಾನು ಸಹ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ನೂತನ ಶಾಸಕರಿಗೆ ನೌಕರರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಮೋಹನ್, ಬಿಎಂ ದೊಡ್ಡಪ್ಪ, ಲೋಕೇಶ್, ಸುನಿಲ್, ನವೀನ, ನಯಾಜ್ ಪ್ರಕಾಶ, ಆಂಜನೇಯ ಸಿ, ಆರ್ ಪಿ. ಉಮೇಶ್, ರಾಜು, ಮೇಟಿ ನಾಗರಾಜ, ಲಿಂಗರಾಜ, ವೆಂಕಟೇಶ, ಕಿಫಾಯತ್ ಅಹ್ಮದ್, ಸುನೈನಾ, ರೂಪ, ರಾಣಿ, ಆರ್.ಶಿವಪುತ್ರ, ಎನ್‍ಪಿಎಸ್ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!