ನರೇರಾ ಕಾರ್ಮಿಕರಿಗೆ ಅನ್ಯಾಯ ದಿದ್ದಿಗೆ ಗ್ರಾಪಂ ಮುಂದೆ ಕಾರ್ಮಿಕರ ಪ್ರತಿಭಟನೆ

Suddivijaya
Suddivijaya February 7, 2023
Updated 2023/02/07 at 1:55 PM

ಸುದ್ದಿವಿಜಯ,ಜಗಳೂರು: ತಾಲೂಕಿನ ದಿದ್ದಿಗೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಮನರೇಗಾ ಕಾಮಗಾರಿಗಳಿಗೆ ಪಿಡಿಓ ಹಣ ಹಾಕದೇ ಸತಾಯಿಸುತ್ತಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೋಸ್) ತಾಲೂಕು ಸಂಚಾಲಕಿ ಪಿ.ಎಸ್.ಸುಧಾ ಅವರ ನೇತೃತ್ವದಲ್ಲಿ ಮಂಗಳವಾರ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಚ್ಚಂಗಿಪುರ ಗ್ರಾಮದಲ್ಲಿ ನರೇಗಾ ಅಡಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಈವರೆಗೆ ಕೂಲಿ ಹಣ ಹಾಕಿಲ್ಲ. ಪಿಡಿಓ ಕೇಳಿದರೆ ಕುಂಟುನೆಪ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ.

ಕಳೆದ ಎರಡು ತಿಂಗಳಿಂದ ಪಂಚಾಯಿತಿಗೆ ಅಲೆದು ಸಾಕಾಗಿದೆ. ಪಿಡಿಒ, ನರೇಗಾ ಎಂಜಿನಿಯರ್ ಎನ್‍ಎಂಆರ್ ತೆಗೆಯದೇ ಅಲೆದಾಡಿಸುತ್ತಿದ್ದಾರೆ. ಮೇಟುಗಳಿಗೆ ಗೌರವಧನ  ಕೊಡುವುದಕ್ಕೆ ಕಾಡಿಸುತ್ತಿದ್ದಾರೆ. ಕಾಮಗಾರಿಯ ದೂರ ಐದು ಕಿ.ಮೀ ದೂರ ಇದ್ದರೆ ಕಾನೂನಿನ ಪ್ರಕಾರ 31 ರೂಪಾಯಿ ಪ್ರಯಾಣ ವೆಚ್ಚ ಕೊಡಬೇಕು ಎಂದು ನಿಯಮದಲ್ಲಿ ಉಲ್ಲೇಖವಾಗಿದೆ.

 ಜಗಳೂರು ತಾಲೂಕಿನ ದಿದ್ದಿಗೆ ಗ್ರಾಪಂ ಎದುರು ಗ್ರಾಕೋಸ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
 ಜಗಳೂರು ತಾಲೂಕಿನ ದಿದ್ದಿಗೆ ಗ್ರಾಪಂ ಎದುರು ಗ್ರಾಕೋಸ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಮೂನೆ 6 ಫಾರಂ ಕೊಟ್ಟು 15 ದಿನಗಳ ಒಳಗೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಇಲ್ಲವಾದಲ್ಲಿ ನಿರುದ್ಯೋಗಿ ಭತ್ಯೆ ಕೊಡಬೇಕು. ಕಾನೂನು ಉಲ್ಲಂಗಿಸುತ್ತಿರುವ ಪಿಡಿಓ, ನರೇಗಾ ಎಂಜಿಯರ್ ಟಿಎ.ಷಣ್ಮುಖ ಅವರು ಕಾರ್ಮಿಕರನ್ನು ಸತಾಯಿಸುತ್ತಿದ್ದಾರೆ ಎಂದು ಕಾರ್ಮಿಕ ಹೋರಾಗತಾರ್ತಿ ಸುಧಾ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಗ್ರಾಪಂಗೆ ಪಿಡಿಓ ಇಲ್ಲ:
ಈ ಹಿಂದೆ ಭ್ರಷ್ಟಾಚಾರದಲ್ಲಿ ಸಸ್ಪೆಂಡ್ ಆಗಿದ್ದ ಶಶಿಧರ್ ಪಾಟೀಲ್ ಜಾಗಕ್ಕೆ ತಿಪ್ಪೇಶ್ ಅವರನ್ನು ಪಿಡಿಓ ಆಗಿ ನೇಮಕ ಮಾಡಲಾಗಿತ್ತು. ತಿಮ್ಮೇಶ್ ಅವರು ಸಸ್ಪೆಂಡ್ ಆದರು. ಸತತ ಒಂದು ತಿಂಗಳಿನಿಂದ ಯಾರನ್ನೂ ನೇಮಕ ಮಾಡಲಿಲ್ಲ. ಹೀಗಾಗಿ ಎನ್‍ಎಂಆರ್ ತೆಗೆಯಲು ಆಗಲಿಲ್ಲ. ಹೀಗಾಗಿ ಕಾರ್ಮಿಕರು ಕೂಲಿ ಹಣಕ್ಕೆ ಪರದಾಡಿದರು.

ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಂದ ಪಿಡಿಓಗಳೆಲ್ಲರೂ ಸಸ್ಪೆಂಡ್ ಆಗುತ್ತಿದ್ದಾರೆ. ನಾವು ಪ್ರತಿಭಟನೆ ಮಾಡುತ್ತಿದ್ದಂತೆ ಇಓ ಚಂದ್ರಶೇಖರ್ ಅವರು ಸಸ್ಪೆಂಡ್ ಆಗಿ ಬೇರೆ ಕಡೆ ವರ್ಗಾವಣೆ ಮಾಡಿದ್ದ ಶಶಿಧರ್ ಪಾಟೀಲ್ ಅವರನ್ನು ಮತ್ತೆ ದಿದ್ದಿಗೆ ಪಂಚಾಯಿತಿಗೆ ಇನ್‍ಚಾರ್ಜ್ ಹಾಕಿದ್ದಾರೆ ಎಂದು ವ್ಯವಸ್ಥೆಯ ವಿರುದ್ಧ ಸುಧಾ, ಗ್ರಾಕೋಸ್ ಅಧ್ಯಕ್ಷರಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ನಾಗರತ್ನ, ಕೃಷ್ಣ, ಸಂಜೀವಮ್ಮ, ರೇಣುಕಮ್ಮ, ಹನುಮಕ್ಕ, ಸಾವಿತ್ರಮ್ಮ, ಎಲ್ಲಮ್ಮ, ಕೃಷ್ಣಪ್ಪ ಕರಿಯಪ್ಪ, ಕಾಟಪ್ಪ ಸೇರಿ ಅನೇಕ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!