ಜಗಳೂರು: ಪಪಂ ಬಜೆಟ್ ಪೂರ್ವಭಾವಿ ಸಭೆ!

Suddivijaya
Suddivijaya January 30, 2023
Updated 2023/01/30 at 1:42 PM

ಸುದ್ದಿವಿಜಯ, ಜಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಒಂದಾಗಿರುವ ಪಪಂ ಬಜೆಟ್‍ಗೆ ಮಂಡನೆಗೆ ಸಂಬಂಧಿಸಿದಂತೆ ಸೋಮವಾರ ಪಪಂ ಸಭಾಂಗಣದಲ್ಲಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಅಧ್ಯಕ್ಷತೆಯಲ್ಲಿ ಬಜೆಟ್ ರಚನೆ ಕುರಿತು ಪೂರ್ವ ಭಾವಿಸಭೆ ನಡೆಸಲಾಯಿತು.

ಪಪಂ ಅನುದಾನ ಕೊರತೆಯಿದ್ದು, ವಾರ್ಡ್ ಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ದಿ ಕುಂಠಿತವಾಗಿವೆ. ಈನಿಟ್ಟಿನಲ್ಲಿ ಅಶ್ವತ್ಥರೆಡ್ಡಿ ನಗರ ಇತರೆ ವಾರ್ಡ್ ಗಳಲ್ಲಿ ಹತ್ತು ವರ್ಷಗಳಿಂದ ಪಾವತಿಸದ ತೆರಿಗೆ ಸಂಗ್ರಹಣೆ, ಇತರೆ ಹಣಕಾಸು ಸಂಪನ್ಮೂಲಗಳನ್ನು ಕ್ರೂಢೀಕರಣ ಮಾಡಬೇಕಿದೆ.

ಎರಡು ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಿದ ತೀರ್ಮಾನಗಳು ಕೇವಲ ಸಭೆಗೆ ಸೀಮಿತವಾಗಿವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ್ ರೆಡ್ಡಿ, ಲುಕ್ಮಾನ್ ಉಲ್ಲಾ ಖಾನ್ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದರು.

ದೇವಡಗೌಡ ಬಡಾವಣೆಯಲ್ಲಿ ರಸ್ತೆ ಅಭಿವೃದ್ದಿ, ಚರಂಡಿ ನಿರ್ವಹಣೆ ಸಾಧ್ಯವಾಗಿಲ್ಲ. ಈ ಬಾರಿ ಹಲವು ಬಾರಿ ಚರ್ಚಿಸಲಾಗಿದೆ ಎಂದು ಸದಸ್ಯೆ ಲಲಿತ ಶಿವಣ್ಣ ತಿಳಿಸಿದರು.

 ಜಗಳೂರು ಪಪಂ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.
 ಜಗಳೂರು ಪಪಂ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.

ಹಿರಿಯ ನಾಗರೀಕರ ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಮಾತನಾಡಿ, ಇರುವ ಕಡಿಮೆ ಅನುದಾನವನ್ನು ಪಟ್ಟಣದ ಅನಾವಶ್ಯಕ ಅಭಿವೃದ್ಧಿ ಕಾಮಗಾರಿಗಳಿಗೆ ಸೀಮಿತಗೊಳಿಸದೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಶೇ.24.10 ರಷ್ಟು ಅನುದಾನವನ್ನು ಬಜೆಟ್ ನಲ್ಲಿ ಸಮರ್ಪಕವಾಗಿ ಮೀಸಲಿಡಬೇಕು ಎಂದು ಅಭಿಪ್ರಾಯ ತಿಳಿಸಿದರು.

ಲೀಡ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಎರ್ರಿಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಡಿಜಿಟಲ್ ಗ್ರಂಥಾಲಯ ಅಭಿವೃದ್ದಿಗೆ ಬಜೆಟ್ ನಲ್ಲಿ ಒತ್ತುನೀಡಬೇಕು. ಅಲ್ಲದೆ ಪಟ್ಟಣದ ವಿವಿದೆಡೆ ಬ್ಯಾನರ್ ಅಳವಡಿಕೆಗೆ ಶುಲ್ಕ ನಿಗದಿಪಡಿಸಬೇಕು.ಇದರಿಂದ ಹಣಕಾಸು ಸಂಪನ್ಮೂಲ ಕ್ರೂಢೀಕರಣ ಸಾಧ್ಯ,ಸಸಿ ನೆಟ್ಟು ಪಟ್ಟಣ ಸುಂದರವನ್ನಾಗಿಸಬೇಕು ಎಂದರು.

ಕೆರೆ ನೀರು ಶುದ್ದೀಕರಣಕ್ಕೆ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಬೇಕು.57 ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳು ಭರ್ತಿಯಾಗಲಿವೆ ಎಂದು ಪ.ಪಂ ಸದಸ್ಯ ಪಾಪಲಿಂಗಪ್ಪ ಹೇಳಿದರು.

ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಸರ್ವ ಸದಸ್ಯರ ವಿವಿಧ ಸಂಘಟನೆಗಳ ಮುಖಂಡರುಗಳ ಅಭಿಪ್ರಾಯ ಪಟ್ಟಣದ ಸೌಂದರ್ಯೀಕರಣಕ್ಕೆ ಪೂರಕವಾಗಿವೆ ಬಜೆಟ್ ತಯಾರಿಸಲು ಸಲಹೆ ಸೂಚನೆಗಳು ಸ್ವಾಗತರ್ಹ ಎಂದು ಮಾಹಿತಿ ನೀಡಿದರು.

ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್,ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ, ಸದಸ್ಯರಾದ ನವೀನ್ ಕುಮಾರ್, ಲೋಲಾಕ್ಷಮ್ಮ, ಓಬಳೇಶ್, ನಾಮನಿರ್ದೇಶಿತ ಸದಸ್ಯ ಗಿರೀಶ್, ಮುಖಂಡರಾದ ಓಬಳೇಶ್, ಗೌರಿಪುರ ಶಿವಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!