ಸುದ್ದಿವಿಜಯ,ವಿಶೇಷ: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನೇಕ ರೈತರಿಗೆ ವರದಾನವಾಗಲಿವೆ. ಆದ್ರೆ ಇನ್ನು ಕೆಲವು ರೈತರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದಿಲ್ಲ. ಅದಕ್ಕೆ ಕಾರಣ ಕೆವೈಸಿ ಅಪ್‌ಡೇಟ್ ಮಾಡದೇ ಇರೋದು. ಇನ್ನು ಕೆಲವರು ಕೆವೈಸಿ ಅಪ್‌ಡೇಟ್ ಮಾಡಿದ್ರೂ ಇನ್ನೂ ಬಂದಿಲ್ಲ ಎಂಬ ಚಿಂತೆಯಲ್ಲಿದ್ದಾರೆ. ಹಾಗದ್ರೆ ನಾವು ಹೇಳಿದಂತೆ ಹೀಗೆ ಮಾಡಿದ್ರೆ ಹಣ ಬರುತ್ತದೆ.
ಕೇಂದ್ರ ಸರ್ಕಾರವು ಮೇ 31 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರ ಖಾತೆಗಳಿಗೆ ಪ್ರತಿ ರೈತರಿಗೆ 2,000 ರೂ ಜಮೆ ಮಾಡಿದೆ. 10 ಕೋಟಿಗೂ ಹೆಚ್ಚು ರೈತರಿಗೆ ರೂ.21,000 ಕೋಟಿ ಬಿಡುಗಡೆ ಮಾಡಿದೆ. ಇದು ಪಿಎಂ ಕಿಸಾನ್ ಯೋಜನೆಯ 11 ನೇ ಕಂತು. ಆದರೆ ಇನ್ನೂ ಹಲವು ರೈತರ ಖಾತೆಗೆ ಹಣ ಜಮಾ ಆಗಿಲ್ಲ.

ಸಾಂದರ್ಭಿಕ ಚಿತ್ರ
ನಗದು ರಹಿತ ರೈತರು ಪಿಎಂ ಕಿಸಾನ್ ಹಣಕ್ಕಾಗಿ ಕಾಯುತ್ತಿದ್ದಾರೆ. ಅಧಿಕೃತ ವೆಬ್‌ಸೈಟ್ ಪ್ರಕಾರ PM ಕಿಸಾನ್ ನಿಧಿಗಳನ್ನು ಪಡೆಯಲು KYC ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಪಿಎಂ ಕಿಸಾನ್ ರೈತರು ಕೆವೈಸಿ ಪೂರ್ಣಗೊಳಿಸಿದ್ದರೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಇದರ ಬಗ್ಗೆ ಯಾರು ದೂರು ನೀಡಬೇಕು? ಪಾಲಿಸುವುದು ಹೇಗೆ? ಎಂಬ ಅನುಮಾನ ರೈತರಲ್ಲಿ ಮೂಡಿದೆ.
ರೈತರು ತಮ್ಮ ಖಾತೆಗೆ ಹಣ ಜಮಾ ಆಗದಿದ್ದರೆ ದೂರು ನೀಡಬಹುದು. ನೀವು ಇಮೇಲ್ ಮೂಲಕ ದೂರು ನೀಡಲು ಬಯಸಿದರೆ, ನೀವು pmkisan-ict@gov.in ಅಥವಾ pmkisan-funds@gov.in ಇಮೇಲ್ ಐಡಿಗಳಲ್ಲಿ ದೂರು ನೀಡಬಹುದು. ಅಥವಾ ಸಹಾಯವಾಣಿ ಸಂಖ್ಯೆಗಳಾದ 011-24300606, 155261ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 1800-115-526 ಗೆ ಕರೆ ಮಾಡಿ ದೂರು ನೀಡಬಹುದು.