ಸುದ್ದಿವಿಜಯ,ಜಗಳೂರು: ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಹುಚ್ಚವ್ವನಹಳ್ಳಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಲಾರಿಯಲ್ಲಿದ್ದ ಕಬ್ಬಿಣದ ರಾಡ್‍ಗಳನ್ನು ಇಳಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ದಾವಣಗೆರೆ ಗ್ರಾಮಾಂತರ ಮತ್ತು ಜಗಳೂರು ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯವಿವರ:
ಕೊಪ್ಪಳದಿಂದ ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ (ಕೆ.ಎ.01/ಎಎಂ-4629)ಕಬ್ಬಿಣ ತುಂಬಿದ ಲಾರಿಯಲ್ಲಿ ಚಾಲಕ, ಕ್ಲೀನರ್ ಸೇರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ನಾಲ್ವರು ಲಾರಿಯಲ್ಲಿದ್ದ 12 ಕಬ್ಬಿಣದ ರಾಡ್‍ಗಳನ್ನು ಲಾರಿಯ ಲೈಟ್ ಬೆಳಕಿನಲ್ಲಿ ಇಳಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ವಿಶೇಷ ಗಸ್ತಿನಲ್ಲಿದ್ದ ಜಿಲ್ಲಾ ಎಎಸ್‍ಪಿ ಕನ್ನಿಕಾ ಸಕ್ರಿವಾಲ್ ಲಾರಿಯ ಹತ್ತಿರ ಹೋಗಿ ವಿಚಾರಿಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಬಂಧಿತರನ್ನು ಕೂಡ್ಲಿಗಿ ತಾಲೂಕಿನ ಬೀರಲಗುಡ್ಡ ಗ್ರಾಮದ ಪಿ.ಬೊಮಪ್ಪ(26), ತಿಪಟೂರು ತಾಲೂಕಿನ ವನ್ನಹಳ್ಳಿ ಗ್ರಾಮದ ಶಂಕರ್ ರಾವ್ (26), ಶಿವಮೊಗ್ಗ ಪಟ್ಟಣದ ಎಸ್.ಅಭಿಷೇಕ್(23), ಜಗಳೂರಿನ ಕಾಕನಕಟ್ಟೆ ಗ್ರಾಮದ ಜಿ.ಆರ್.ರಘು ಎಂದು ತಿಳಿದು ಬಂದಿದೆ.
ಗಸ್ತಿನಲ್ಲಿದ್ದ ಎಎಸ್‍ಪಿ ಕನ್ನಿಕಾ ಸಕ್ರಿವಾಲ್ ಅವರು ಲಾರಿಯಲ್ಲಿದ್ದ ಕಬ್ಬಿಣದ ರಾಡ್‍ಗಳನ್ನು ಅನ್‍ಲೋಡ್ ಮಾಡುತ್ತಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಕೊಪ್ಪಳದ ಹೆಚ್‍ಆರ್‍ಜಿ ಕಂಪನಿಗೆ ಸೇರಿದ ಕಬ್ಬಿಣದ ರಾಡ್‍ಗಳನ್ನು ಸೂಕ್ತ ದಾಖಲೆಗಳಿಲ್ಲದೇ 12 ಬೃಹತ್ ರಾಡ್‍ಗಳನ್ನು ಅಕ್ರಮವಾಗಿ ಇಳಿಸುತ್ತಿದ್ದರಿಂದ ವಿಚಾರಿಸಿ ಆರೋಪಿಗಳನ್ನು ಬಂಧಿಸಿ ಕೇಸ್‍ದಾಖಲಿಸಿದ್ದಾರೆ. ಆರೋಪಿಗಳನ್ನು ಜಗಳೂರು ಪಟ್ಟಣದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿವಿಚಾರಣೆ ಮಾಡುತ್ತಿದ್ದಾರೆ.
ಕಾರ್ಯಚರಣೆ ವೇಳೆ ಪೊಲೀಸ್ ಸಿಬ್ಬಂದಿಗಳಾದ ಕರಿಬಸಪ್ಪ, ತಿಮ್ಮೇಶ್, ಸೈಫುಲ್ಲಾ, ನೂರುಲ್ಲಾ, ಎಚ್.ಆಂದಪ್ಪ, ನಾಗಭೂಷಣ್, ಹನುಮಂತಪ್ಪ ಕವಾಡು, ಬಸವರಾಜ್, ನಾಗಣ್ಣ ಇದ್ದರು.