ಜಗಳೂರು: ವಿದ್ಯುತ್ ಸಮಸ್ಯೆ ಬಗೆಹರಿಸಲು ರೈತರಿಂದ ಮನವಿ!

Suddivijaya
Suddivijaya January 2, 2023
Updated 2023/01/02 at 1:35 PM

ಸುದ್ದಿವಿಜಯ, ಜಗಳೂರು: ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕಗಳಿಗೆ ಪರಿವರ್ತಕಗಳನ್ನು ನೀಡಬೇಕು ಮತ್ತು ಹಗಲು ಹೊತ್ತಿನಲ್ಲಿ ಕನಿಷ್ಠ 7 ತಾಸು ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತರು ಸೋಮವಾರ  ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಚಿಕ್ಕಮಲ್ಲನ ಹೋಳೆ ಚಿರಂಜೀವಿ ಮಾತನಾಡಿ, ರೈತರು ಈಗಾಗಲೇ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಸಕ್ರಮಗೊಳಿಸಿ ಕೊಂಡಿರುವ ರೈತರಿಗೆ ಇದುವರೆಗೂ ವಿದ್ಯುತ್ ಪರಿವರ್ತಕಗಳು, ಟಿ.ಸಿ., ವಿದ್ಯುತ್ ಕಂಬ, ವೈಯರ್‍ಗಳು ಮತ್ತು ಪಂಪ್‍ಸೆಟ್ಟುಗಳಿಗೆ ವಿದ್ಯುತ್ ನೀಡದಿದ್ದಲ್ಲಿ ರೈತರುಗಳಿಗೆ ತೊಂದರೆಯುಂಟಾಗುತ್ತದೆ. ಆದ್ದರಿಂದ ತಕ್ಷಣವೇ ರೈತರಿಗೆ ಈ ಸೌಲಭ್ಯಗಳನ್ನು ಒದಗಿಸಬೇಕಾಗಿ ಮನವಿ ಮಾಡಿದರು.

ಜಗಳೂರು ತಾಲ್ಲೂಕಿನಲ್ಲಿ ರೈತರ ಕೃಷಿ ಪಂಪಸೆಟ್ಟುಗಳಿಗೆ ರಾತ್ರಿ ವೇಳೆ ಮಾತ್ರ ವಿದ್ಯುತ್ ನೀಡುತ್ತಿದ್ದು ಕರಡಿಗಳ ದಾಳಿಯಿಂದಾಗಿ ರೈತರುಗಳ ಜೀವಕ್ಕೆ ಹಾನಿಯುಂಟಾಗುತ್ತಿದೆ. ಪೈಪುಗಳು ಹಾಳು ಮಾಡುತ್ತಿವೆ. ಆದ್ದರಿಂದ ಹಗಲು ವೇಳೆಯಲ್ಲಿ ಉತ್ತಮ ಗುಣಮಟ್ಟದ ಕನಿಷ್ಟ 7ತಾಸು ವಿದ್ಯುತ್ ನೀಡಬೇಕೆಂದು ಮನವಿ ಮಾಡಿದರು.

  ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಕರ್ನಾಟಕ ರಾಜ್ಯ ರೈತಸಂಘ ಮುಖಂಡರು ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಗೆ ಮನವಿ ಸಲ್ಲಿಸಿದರು.
  ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಕರ್ನಾಟಕ ರಾಜ್ಯ ರೈತಸಂಘ ಮುಖಂಡರು ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಗೆ ಮನವಿ ಸಲ್ಲಿಸಿದರು.

ಕೆಟ್ಟುಹೋದ ಪರಿವರ್ತಕಗಳನ್ನು 24 ಗಂಟೆಗಳ ಒಳಗಾಗಿ ಬದಲಾಯಿಸಿಕೊಡಬೇಕು. ಆದರೆ 8-10 ದಿನಗಳು ಕಳೆದರೂ ಸಹ ಇಲಾಖೆಯು ಪರಿವರ್ತಕಗಳನ್ನು ಬದಲಾಯಿಸಿಕೊಡದೇ ಇರುವುದರಿಂದ ರೈತರ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಗ್ರಾಮಗಳಲ್ಲಿ ಒಂದೆರಡು ತಿಂಗಳು ವಿದ್ಯುತ್ ಪಾವತಿ ಮಾಡದೆ ಇರುವವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದು. ಅವರಿಗೆ ಸಮಯಾಕಾಶ ನೀಡಿ ನಂತರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರನ್ನು ಕೆಲ ಲೈನ್ ಮ್ಯಾನ್ ಗಳು ಅವಚ್ಯಾಶಬ್ದಗಳಿಂದ ನಿಂದಿಸುತ್ತಾರೆ ಎಂದು ಅವರಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಅಧ್ಯಕ್ಷ ಗಂಗಾಧರಪ್ಪ ಒತ್ತಾಯಿಸಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ , ತಾಲ್ಲೂಕು ಗೌರವಾಧ್ಯಕ್ಷರು ಚಿಕ್ಕಬನ್ನಿಹಟ್ಟಿ ವೀರೇಶ್, ಬಿಳಿಚೋಡು ಹೋಬಳಿ ಅಧ್ಯಕ್ಷರು ಪ್ರಹ್ಲಾದಪ್ಪ ,ಸೊಕ್ಕೆ ಹೋಬಳಿ ಅಧ್ಯಕ್ಷ ಯರಲಕಟ್ಟೆ ಕೆಂಚಪ್ಪ, ತಾಲ್ಲೂಕು ಕಾರ್ಯದರ್ಶಿ ಮಡಳ್ಳಿ ತಿಪ್ಪೇಸ್ವಾಮಿ. ಹೊನ್ನೂರ್ ಅಲಿ, ಹನುಮಂತಪ್ಪ, ತಿಪ್ಪೇಸ್ವಾಮಿ, ಸಹದೇವರೆಡ್ಡಿ, ಮಡ್ರಳ್ಳಿ ತಿಪ್ಪೇಸ್ವಾಮಿ, ಪರುಸಪ್ಪ, ಪಾಪಣ್ಣ,ಕ್ಯಾಸೇನಹಳ್ಳಿ ಬಸಣ್ಣ. ಮಲ್ಲೇಶಿ, ಸೂರಪ್ಪ,ಕಸವನಹಳ್ಳಿ ನಾಗರಾಜ, ಏಕಾಂತಪ್ಪ,ತಿಪ್ಪೇಸ್ವಾಮಿ,ರಂಗಪ್ಪ,ದೊಣಿಹಳ್ಳಿ ತಿಪ್ಪೇಸ್ವಾಮಿ, ದೊಡ್ಡಬೊಮ್ಮನಹಳ್ಳಿಬಸಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

 ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಲು  ಬೆಸ್ಕಾಂ ಸನ್ನದ್ಧ!
ಕೆರೆಗಲಲ್ಲಿ ನೀರು ತುಂಬಿದ್ದು ಬತ್ತಿದ ಬೋರ್‍ವೆಲ್‍ಗಳು ರೀಚಾರ್ಜ ಆಗಿರುವುದರಿಂದ ವಿದ್ಯುತ್ ವೋಲ್ಟೇಜ್ ಸಮಸ್ಯೆ. ಲೈನ್ ಸಮಸ್ಯೆ ಹೆಚ್ಚಾಗುತ್ತಿದೆ. ಕರಡಿ ಕಾಟದಿಂದ ಮುಕ್ತಿ ನೀಡಲು ಬೆಳಗಿನ ವೇಳೆ 7 ತಾಸು ವಿದ್ಯುತ್ ಕೊಡಲು ಚರ್ಚೆ ನಡೆಸುತ್ತೇನೆ. ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಲು  ಬೆಸ್ಕಾಂ ಸನ್ನದ್ಧವಾಗಿದೆ ಎಂದು ಎಇಇ ಗಿರೀಸ್ ನಾಯ್ಕ್ ಅಭಯ ನೀಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!