ಜಗಳೂರಿನಲ್ಲಿ ಮಾ.10 ರಂದು ಪ್ರಜಾಧ್ವನಿ ಕಾರ್ಯಕ್ರಮ: ಮಾಜಿ ಶಾಸಕ ಎಚ್.ಪಿ.ರಾಜೇಶ್

Suddivijaya
Suddivijaya March 5, 2023
Updated 2023/03/05 at 2:34 PM

ಸುದ್ದಿವಿಜಯ, ಜಗಳೂರು: ಬರುವ ಮಾ.10 ರಂದು ಪಟ್ಟಣದ ಬಯಲು ರಂಗಮಂದಿರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದು. ಕ್ಷೇತ್ರದಿಂದ ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಕರೆ ನೀಡಿದರು.

ವಿಧಾನಸಭಾ ಕ್ಷೇತ್ರದ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಭಾನುವಾರ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಕಾರ್ಡ್ ವಿತರಣೆ ಹಾಗೂ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನ ಸಭಾ ಕ್ಷೇತ್ರದಲ್ಲಿ ಅರಸೀಕೆರೆ ಹೋಬಳಿ 7 ಗ್ರಾಮಪಂಚಾಯಿತಿ ವ್ಯಾಪ್ತಿ ಬದ್ದತೆಯ ಕಾರ್ಯಕರ್ತರಿದ್ದು. ತಮ್ಮ ಮೇಲೆ ವಿಶ್ವಾಸವಿದೆ ವೈಮನಸ್ಸು ತೊರೆದು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆಕೈಜೋಡಿಸಬೇಕು. ವಿಧಾನಸಭಾ ಚುನಾವಣೆ ಮುಕ್ತಾಯದವರೆಗೆ ಕಮ್ಮತ್ತಹಳ್ಳಿಯಲ್ಲಿ ಕಾಂಗ್ರೆಸ್ ಕಚೇರಿಯನ್ನು ತೆರೆಯಲಾಗುವುದು ಎಂದರು.

ಬಿಜೆಪಿ ಪಕ್ಷದ ಆಡಳಿತಾವಧಿಯಲ್ಲಿ ಗ್ರಾಪಂಗಳಲ್ಲಿ 15 ನೇ ಹಣಕಾಸು ಯೋಜನೆಯ ಭ್ರಷ್ಟಾಚಾರ, ಅವ್ಯವಹಾರಗಳನ್ನು ಕಳಪೆ ಕಾಮಗಾರಿ, ಬೋಗಸ್ ಬಿಲ್ ಗಳನ್ನು ಪ್ರಚಾರಪಡಿಸಿ ಮತದಾರರನ್ನು ಜಾಗೃತಗೊಳಿಸಬೇಕು ಎಂದು ತಿಳಿಸಿದರು.

ಜಗಳೂರು ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಎಚ್,ಪಿ.ರಾಜೇಶ್ ಮಾತನಾಡಿದರು.
ಜಗಳೂರು ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಎಚ್,ಪಿ.ರಾಜೇಶ್ ಮಾತನಾಡಿದರು.

ನೀರಾವರಿ ಯೋಜನೆ ಸಕಾರ:

ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಸಕಾರಗೊಂಡಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕೆರೆಗಳು ಭರ್ತಿಯಾಗಲು ವಿಳಂವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ನಿಶ್ಚಿತ. ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುವುದು ಅಲ್ಲದೆ 7 ಗ್ರಾಮಪಂಚಾಯಿತಿ ವ್ಯಾಪ್ತಿ ಭಾಗದ 4 ಕೆರೆಗಳು ಭರ್ತಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ, 200 ಯೂನಿಟ್ ಉಚಿತ ವಿದ್ಯುತ್,ಪ್ರತಿ ಕುಟುಂಬದ ಮಹಿಳೆಗೆ2000 ರೂ, ಬಿಪಿಎಲ್ ಕಾರ್ಡ್ ಗೆ 10 ಕೆಜಿ ಅಕ್ಕಿ ವಿತರಣೆಗಳ ಗ್ಯಾರಂಟಿ ಕಾರ್ಡ್ ಗಳನ್ನು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಚಾರ ಪಡಿಸಬೇಕು ಎಂದು ಕರೆನೀಡಿದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ರಾಜ್ಯದಲ್ಲಿ ಡಿಕೆ ಶಿವಕುಮಾರ್ ದಕ್ಷಿಣ ಕರ್ನಾಟಕದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕರ್ನಾಟಕದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಪ್ರವಾಸ ಕೈಗೊಳ್ಳಲಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸೋಣ ರಾಜ್ಯದಲ್ಲಿ ಮುಂದಿನ ವಿಧಾನ ಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 150 ಸ್ಥಾನಗಳು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.

ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ ಮಾತನಾಡಿ,ಕಾರ್ಯಕರ್ತರು ಮಾರಾಟವಾಗದೆ ಪಕ್ಷ ನಿಷ್ಠೆ,ಪ್ರಾಮಾಣಿಕತೆಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಂದರ್ಭದಲ್ಲಿ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ್,ಮರಿಯಪ್ಪ,ಆನಂದಪ್ಪ,ಶಿವಕುಮಾರ್ ಸ್ವಾಮಿ, ಮಂಜಪ್ಪ,ಯರಬಳ್ಳಿ ಉಮಾಪತಿ,ಪಲ್ಲಾಗಟ್ಟೆ ಶೇಖರಪ್ಪ, ಕವಲಹಳ್ಳಿ ರವಿಕುಮಾರ್, ಸಲಾಂಸಾಹೇಬ್, ಮಾಂತೇಶ್ ನಾಯ್ಕ, ತೌಡೂರು ಕೆಂಚಪ್ಪ, ಬಸವಾಪುರ ರವಿಚಂದ್ರ, ರಾಮಪ್ಪ, ಕಬ್ಬಳ್ಳಿ ಬಸವರಾಜ್, ವಿಜಯ್ ಕೆಂಚೋಳ್, ಗುಡ್ಡದಲಿಂಗನಹಳ್ಳಿ ನಾಗರಾಜ್, ದಾದಪೀರ್, ರುದ್ರೇಶ್, ಹನುಮಂತಪ್ಪ, ಮಂಜುನಾಥ್, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!