ಜಗಳೂರು: ಜೋಗಪ್ಪನ ಗುಡಿ ನಿರಾಶ್ರಿತರಿಗೆ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ!

Suddivijaya
Suddivijaya November 16, 2022
Updated 2022/11/16 at 11:42 AM

ಸುದ್ದಿವಿಜಯ,ಜಗಳೂರು: ಪಟ್ಟಣದ ಜೋಗಪ್ಪನಗುಡಿ ಹಿಂಭಾಗದ ನಿರಾಶ್ರಿತರಿಗೆ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಬುಧವಾರ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ.ಸಂತೋಷ್‌ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮುಖಂಡ ಬಿ.ಲೋಕೇಶ್ ಮಾತನಾಡಿ, ಹಲವು ವರ್ಷಗಳಿಂದಲೂ ಗುಡಿಸಲು ಹಾಕಿಕೊಂಡು ಬದುಕುವ ಈ ದಲಿತ ಕುಟುಂಬಗಳಿಗೆ ಸರಕಾರ ಒಂದು ನಿವೇಶ, ಮನೆ ನೀಡಲು ಸಾದ್ಯವಾಗಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆರೆಯ ನೀರು ಮನೆಗಳಿಗೆ ನುಗ್ಗಿ ಜಲಾವೃತಗೊಂಡಿದ್ದು, ಎಲ್ಲರು ಬೀದಿಗೆ ಬಿದ್ದಿದ್ದಾರೆ.

ಕೆಲ ದಿನ ತಾಲೂಕು ಆಡಳಿತ ಕಾಳಜಿ ಕೇಂದ್ರ ತೆರೆದಿದೆ. ಹೀಗಿದ್ದರೂ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾದ್ಯವಿಲ್ಲ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿವೇಶನ ಗುರುತಿಸಿ ಹಂಚಿಕೆ ಮಾಡಬೇಕು. ಸರಕಾರದಿಂದ ಮನೆ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸುಮಾರು ೩೦ ವರ್ಷಗಳಿಂದಲೂ ಈ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ಮಳೆ, ಚಳಿ, ಬಿಸಿಲಿನ ಕಾಲದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇವೆ. ಇಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿದ್ದು ಆತಂಕದಲ್ಲಿಯೇ ಬದುಕಲಾಗುತ್ತಿದೆ.

 ಜಗಳೂರಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ಬುಧವಾರ ಬೈಪಾಸ್ ರಸ್ತೆಯ ಜೋಗಪ್ಪನಗುಡಿ ಹಿಂಭಾಗದ ನಿರಾಶ್ರಿತರು ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
 ಜೋಗಪ್ಪನಗುಡಿ ಹಿಂಭಾಗದ ನಿರಾಶ್ರಿತರು ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವರಾಗಿದ್ದು, ಮನುಷ್ಯರಾಗಿ ಹುಟ್ಟಿರುವುದೇ ಪರಮ ಪಾಪ ಎನಿಸುತ್ತದೆ. ಒಂದು ಹೊತ್ತಿನ ಊಟಕ್ಕೂ ಊರು ಊರು ತಿರುಗಾಡಿ ಕೆಲಸ ಮಾಡಿಕೊಂಡು ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ರಾತ್ರಿ ಮಲಗಲು ಒಂದು ಸೂರಿನ ವ್ಯವಸ್ಥೆ ಇಲ್ಲ. ಜನಪ್ರತಿನಿದಿಗಳು, ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.

2015 ರಲ್ಲಿ ಕೆರೆ ಅಂಗಳ ಒತ್ತುವರಿಯಾಗಿದೆ ಎನ್ನುವ ನೆಪದಲ್ಲಿ ಅಧಿಕಾರಿಗಳು ಇವರನ್ನು ಒಕ್ಕೆಲ್ಲಬ್ಬಿಸಿ ನಿವೇಶನ ಮತ್ತು ಮನೆ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗಿನ ಸರಕಾರ ಈವರೆಗೂ ನಿವೇಶನ, ಮನೆ ಒಬ್ಬರಿಗೂ ಮಂಜೂರೂ ಮಾಡಿಲ್ಲ.

ಹಕ್ಕು ಪತ್ರವನ್ನು ನೀಡಿಲ್ಲ. ಆದ್ದರಿಂದ ತಾಲೂಕು ಆಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಬಡವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಎಂದರು. ಮಹಿಳೆಯರು, ಮಕ್ಕಳು ಪುರುಷರೋಪಾದಯಾಗಿ ತಾಲೂಕು ಕಚೇರಿಗೆ ಆಗಮಿಸಿ ಅಧಿಕಾರಿಗಳು ವಿರುದ್ದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹೊನ್ನೂರಸ್ವಾಮಿ, ವೆಂಕಟೇಶ್, ಸಂತೋಷ್, ನಾಗಮ್ಮ, ಸಾಕಮ್ಮ, ಮೀನಾಕ್ಷಿ, ತಿಮ್ಮಕ್ಕ,  ಹುಲಿಗೆಮ್ಮ, ಲಕ್ಷ್ಮೀ, ಮಂಜಮ್ಮ ಸೇರಿದಂತೆ ಸೇರಿದಂತೆ ಮತ್ತಿತರಿದ್ದರು.

ಜಗಳೂರಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ಬುಧವಾರ ಬೈಪಾಸ್ ರಸ್ತೆಯ ಜೋಗಪ್ಪನಗುಡಿ ಹಿಂಭಾಗದ ನಿರಾಶ್ರಿತರು ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!