ಸುದ್ದಿವಿಜಯ,ಜಗಳೂರು: ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ರಾಜರತ್ನ ಪುನಿತ್ ರಾಜ್ ಕುಮಾರ್ ಪ್ರಶಸ್ತಿಗೆ ತಾಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಭಾಜನರಾಗಿದ್ದಾರೆ.
ಬೆಂಗಳೂರಿನ ಕನ್ನಡ ಭವನದ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಮತ್ತು ಸಾಂಸ್ಕøತಿಕ ಪ್ರತಿಷ್ಠಾನವತಿಯಿಂದ ವಚನಸಂಕಿರಣ ಹಾಗೂ ರಾಜ್ಯದ ವಿವಿಧ ಕ್ಷೆತ್ರಗಳಲ್ಲಿ ಸೇವೆಗೈದವರಿಗೆ ಗುರುತಿಸಿ ರಾಜರತ್ನ ಪುನಿತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಿ.ಮಹೇಶ್ವರಪ್ಪ ದಶಕಗಳಿಂದ ತಾಲೂಕು ಸಮಾಜಕಲ್ಯಾಣ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಸೇವೆಗೆ ಸೇರ್ಪಡೆಗೊಂಡು, ನಂತರ ವ್ಯವಸ್ಥಾಪಕರಾಗಿ ಇದೀಗ ತಾಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಅಂದಿನಿಂದ ಇಂದಿನವರೆಗೂ ನಿಸ್ವಾರ್ಥ ಸೇವೆಯಿಂದ ಬಡವಿದ್ಯಾರ್ಥಿಗಳಿಗೆ ಆರ್ಥಿಕ ಶೈಕ್ಷಣಿಕ ನೆರವು,ಶೋಷಿತ ವರ್ಗದ ಬಡಜನರಿಗೆ ಸರಕಾರಿ ಸೌಲಭ್ಯಗಳನ್ನು ಕಲ್ಪಿಸುವಿಕೆ ಜೊತೆಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಅವರನ್ನು ‘ರಾಜರತ್ನ ಪುನಿತ್ ರಾಜ್ ಕುಮಾರ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತಾಲೂಕಿನ ಹಿತೈಷಿಗಳು ಪಕ್ಷಾತೀತವಾಗಿ ರಾಜಕಾರಣಿಗಳಾದ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ,ಕಾಂಗ್ರೆಸ್ ಮುಖಂಡರಾದ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ, ಸೇರಿದಂತೆ ಹಲವಾರು ಗಣ್ಯರು. ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿಮಾನಿಗಳು ಮಹೇಶ್ವರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.