ಜಗಳೂರು: ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಸಭೆ

Suddivijaya
Suddivijaya January 19, 2023
Updated 2023/01/19 at 1:02 PM

ಸುದ್ದಿವಿಜಯ, ಜಗಳೂರು: ಈ ಬಾರಿ ಯಾವುದೇ ಲೋಪವಾಗದಂತೆ ಗಣರಾಜ್ಯೋತ್ಸವ ಆಚರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಈ ಬಾರಿ ಅದ್ಧೂರಿಯಾಗಿ ಗಣ ರಾಜ್ಯೋತ್ಸವ ಆಚರಿಸೋಣ. ನಿಮ್ಮ ಇಲಾಖೆಗಳ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಬೇಕು.

ಜ.26 ರಂದು ಬಯಲು ರಂಗ ಮಂದಿರದಲ್ಲಿ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ಶಾಸಕ ಎಸ್.ವಿ.ರಾಮಚಂದ್ರ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಪೊಲೀಸ್ ಇಲಾಖೆಯು ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಆಹ್ವಾನ ಪತ್ರಿಕೆ ಮತ್ತು ಅತಿಥಿಗಳ ಆಹ್ವಾನವನ್ನು ತಹಶೀಲ್ದಾರ್ ಕಚೇರಿಯ ಜವಾಬ್ದಾರಿಯಾಗಿದೆ. ಉಳಿದಂತೆ ವೇದಿಕೆ ನಿರ್ಮಾಣ ಪಪಂ ಅಧಿಕಾರಿಗಳದ್ದಾಗಿದೆ. ಧ್ವಜ ಸ್ತಂಭ ನಿರ್ಮಾಣ ಶಿಕ್ಷಣ ಇಲಾಖೆ ಮತ್ತು ಪಿಡ್ಲ್ಯೂಡಿ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು.

ಈ ಬಾರಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಹೆಚ್ಚು ಸಾಂಸ್ಕøತಿಕ ಕಲಾಪ್ರಕಾರಗಳಿಗೆ ಅವಕಾಶವಿಲ್ಲ. ಕೇವಲ ಮೂರು ಕಲಾಪ್ರಲಾರಗಳಿಗೆ ಸೀಮಿತಗೊಳಿಸಲಾಗಿದೆ. ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮಿತಿ ಹೇರಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಹಾರ, ನೀರಿನ ವ್ಯವಸ್ಥೆ ಮಾಡಬೇಕು.

ಸಾಧಕರಿಗೆ ನೆನಪಿನ ಕಾಣಿಕೆ ತರುವ ವ್ಯವಸ್ಥೆ ಜಿಪಂ ಮತ್ತು ಪಿಡ್ಲ್ಯೂಡಿ ಇಲಾಖೆಯದ್ದಾಗಿದೆ. ಮಕ್ಕಳಿಗೆ ಬಿಸ್ಕೇಟ್ ಅಥವಾ ಸಿಹಿ ತಿಂಡಿಗಳನ್ನು ಸಬ್ ರಿಚಿಸ್ಟ್ರಾರ್ ಕಚೇರಿ ನಿರ್ವಹಣೆ ಮಾಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಈ ಬಾರಿ ಸಮಾಜ ಸೇವೆ, ಶೌರ್ಯ ಪ್ರಶಸ್ತಿ, ಸಾಂಸ್ಕøತಿಕ ಮತ್ತು ಜಾನಪದ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಹೊಸ ಮುಖಗಳಿಗೆ ಪ್ರಶಸ್ತಿ ನೀಡುವ ಕೆಲಸವಾಗಬೇಕು. ಸಾಧಕರು ಎಲೆ ಮರೆಯ ಕಾಯಿಗಳಂತಿದ್ದರೆ ಅವರ ಹೆಸರನ್ನು ಆದಷ್ಟು ಬೇಗ ಸಲ್ಲಿಸಿ ಎಂದರು.

ಸಭೆಯಲ್ಲಿ ಬಿಇಓ ಉಮಾದೇವಿ, ಸುರೇಶ್ ರೆಡ್ಡಿ, ಆಸ್ಮಾಬಾನು, ವೆಂಕಟೇಶ್ ಮೂರ್ತಿ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!