ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ದಾಂತದ ಹಾದಿಯಲ್ಲಿ ಬಿಜೆಪಿ ಕಾರ್ಯ: ಶಾಸಕ ಎಸ್.ವಿ.ರಾಮಚಂದ್ರ

Suddivijaya
Suddivijaya January 26, 2023
Updated 2023/01/26 at 11:00 AM

ಸುದ್ದಿವಿಜಯ, ಜಗಳೂರು: ಸಂವಿಧಾನ ಶಿಲ್ಪ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ಬಿಜೆಪಿ ಸರಕಾರ ಸರ್ವರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

74ನೇ ಗಣರಾಜ್ಯೋತ್ಸವ ಹಿನ್ನೆಲೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತದ ಸರ್ವ ಪ್ರಜೆಗೂ ಸಮಾನತೆ, ಶಿಕ್ಷಣ ಇತರೆ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲ ನಾಯಕರನ್ನು, ಅವರ ಸಾಧನೆಯನ್ನು ನೆನೆಯುವ ದಿನವಾಗಿದೆ.

ಗಣರಾಜ್ಯೋತ್ಸವ ದಿನ, ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವ ದಿನವಾಗಿದೆ. ನೀರು, ಸೂರು, ರಸ್ತೆ, ದಲಿತದ ಅಭಿವೃದ್ಧಿ, ಬಲಹೀನರ ಏಳ್ಗೆಗೆ ಬಿಜೆಪಿ ಟೊಂಕಕಟ್ಟಿ ನಿಂತಿದೆ. ಅಂದರಂತೆ ಹಿಂದುಳಿದ ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ 57 ಕೆರೆ ನೀರು ತುಂಬಿಸಲು 665 ಕೋಟಿ ಹಣವನ್ನು ಸರಕಾರ ನೀಡಿದೆ.

ಜತೆಗೆ ಅಪ್ಪರ್ ಭದ್ರಾ ಯೋಜನೆಗೆ 1336 ಕೋಟಿ ಹಣ ನೀಡಿದೆ. ಮನೆ ಮನೆಗೆ ಶುದ್ಧ ಕುಡಿಯುವ ನೀರು ಹರಿಸಲು 426 ಕೋಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಮ್ಮ ಸರಕಾರದ ಸಾಧನೆ. ಚುನಾವಣೆ ಎಂದರೆ ಅದು ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ಅಭಿವೃದ್ಧಿ ಆಧಾರಿತ ಮತದಾನ ಮಾಡಿ ಎಂದು ಮನವಿ ಮಾಡಿದರು.

ಫೆ.10ಕ್ಕೆ ಭೂಮಿ ಪೂಜೆ:
ಭದ್ರಾ ಮೇಲ್ದಂಡೆ ಯೋಜನೆ ಜಗಳೂರಿನ ಕನಸ್ಸಿನ ಕೂಸಾಗಿದೆ. ಇದನ್ನು ಜಾರಿಗೆ ತರುವುದು ತಾಲೂಕಿನ ಹೋರಾಟಗಾರರ ಗುರಿಯಾಗಿತ್ತು. ಅದರಂತೆ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿಯವರ ಕಾಳಜಿಯಿಂದ ಯೋಜನೆ ಮಂಜೂರಾಗಿದ್ದು. ಫೆ.10ಕ್ಕೆ ಅದ್ದೂರಿಯಾಗಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಪರಿಶ್ರಮದ ಫಲವಾಗಿ ಭಾರತ ಸಂವಿಧಾನ ಜಾರಿಗೆ ಬಂದಿದೆ. ಇದರ ಮೂಲಕ ಎಲ್ಲಾ ಸಮುದಾಯಗಳಿಗೂ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣವನ್ನು ಕಲ್ಪಿಸಿದ್ದಾರೆ ಅವರ ಆದರ್ಶಗುಣಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಬಿ.ಮಹೇಶ್ವರಪ್ಪಗೆ ಸನ್ಮಾನ

ಸುಧೀರ್ಘ 25 ವರ್ಷಗಳ ಕಾಲ ಸಮಾಜ ಕಲ್ಯಾಣ ಇಲಾಖೆಲ್ಲಿ ಸೇವೆಸಲ್ಲಿಸಿದ ಬಿ.ಮಹೇಶ್ವರಪ್ಪ ಅವರನ್ನು ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಇಲಾಖೆ, ತಾಲೂಕು ಆಡಳಿತ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಶಾಸಕ ಎಸ್.ವಿ.ರಾಮಚಂದ್ರ ಸೇರಿ ಎಲ್ಲರೂ ಸನ್ಮಾನಿಸಿದರು.

ನವಚೇತನ, ಇಮಾಂ ಶಾಲೆ, ಡಾ.ಬಿ.ಆರ್ ಅಂಬೇಡ್ಕರ್ ಶಾಲೆ, ಬೇಡರಕಣ್ಣಪ್ಪ, ಸರಕಾರಿ ಪ್ರೌಢ ಶಾಲೆ, ಉಜ್ಜಯಿನಿ ಶಾಲೆ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಥ ಸಂಚಲ ಭಾಜ ಮೇಳ ಹಾಗೂ ಪಿರಮಿಡ್ ಪ್ರದರ್ಶನ, ರೈತ ಗೀತೆ, ಗಮನ ಸೆಳೆದವು. 2021-22 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಅಂಕಿತ, ಅಶ್ವಿನಿ, ಆರತಿ ವಿದ್ಯಾರ್ಥಿನಿಯರಿಗೆ ಲ್ಯಾಪ್‍ಟ್ಯಾಪ್ ವಿತರಣೆ ಮಾಡಲಾಯಿತು.

ಜಗಳೂರಿನ ಬಯಲು ರಂಗ ಮಂದಿರದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಹಾಡಿಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು.
ಜಗಳೂರಿನ ಬಯಲು ರಂಗ ಮಂದಿರದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಹಾಡಿಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲ ಕುಮಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ, ತಾ.ಪಂ ಇಒ ಚಂದ್ರಶೇಖರ್, ಬಿಇಒ ಉಮಾದೇವಿ, ಜಿ.ಪಂ ಎಇಇ ತಿಪ್ಪೇಶಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಸಿಪಿಐ ಶ್ರಿನಿವಾಸ್, ಸದಸ್ಯರಾದ ಆರ್.ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ರಮೇಶ್, ನವೀನ್‍ಕುಮಾರ್, ಶಕೀಲ್ ಅಹಮದ್, ಲುಕ್ಮಾನ್, ಬಿ.ಪಿ ಸುಭಾನ್, ಲಲೀತ, ಮಂಜಮ್ಮ, ದಸಂಸ ಮುಖಂಡ ಜಿ.ಎಚ್ ಶಂಭುಲಿಂಗಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್ ಚಿದಾನಂದ, ಸ.ನೌ.ಸಂಘದ ಅಧ್ಯಕ್ಷ ಬಿ.ಆರ್ ಚಂದ್ರಪ್ಪ, ಮಾಜಿ ಗ್ರಾ.ಪಂ ಉಪಾಧ್ಯಕ್ಷ ನಜೀರ್ ಅಹಮದ್ ಸೇರಿದಂತೆ ಮತ್ತಿತರಿದ್ದರು.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!