ಜಗಳೂರು: ಆಂಜನೇಯ ಇದಿಯಪ್ಪರಿಗೆ ʼಸಾರಥಿ ಪ್ರಶಸ್ತಿʼ

Suddivijaya
Suddivijaya July 27, 2022
Updated 2022/07/27 at 12:04 AM

ಸುದ್ದಿ ವಿಜಯ, ಜಗಳೂರು: ಜಗಳೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ದೇವಿಕೆರೆ ಕ್ಲಸ್ಟರ ನ ಕ್ರಿಯಾಶೀಲ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಇದಿಯಪ್ಪನವರು, ಇವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಕೊಡ ಮಾಡುವ ಶಿಕ್ಷಣ ಸಾರಥಿ ಪ್ರಶಸ್ತಿ ಒಲಿದು ಬಂದಿದೆ.

ಸಿಆರ್‌ಪಿಗಳಾದ ಆಂಜನೇಯ ಇದಿಯಪ್ಪನವರು ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ. ಬಿ. ಅವರು ಹಾಗೂ ಕ್ಷೇತ್ರ ಸಮಾನಾಧಿಕಾರಿಗಳಾದ ಹಾಲಪ್ಪ ಡಿ ಡಿ ರವರ ಮಾರ್ಗದರ್ಶನ ಸಹಕಾರ ಸಲಹೆ ಹಾಗೂ ವಿವಿಧಸಿಆರ್‌ಪಿ ಗಳ ಮಾರ್ಗದರ್ಶನ ಹಾಗೂ ಕ್ಲಸ್ಟರ ನ ಶಿಕ್ಷಕರುಗಳ ಸಹಾಯದಿಂದ ವಿಶಿಷ್ಟವಾದ ಮಾದರಿ ಆಗುವ ರೀತಿಯಲ್ಲಿ ಸಂಪನ್ಮೂಲ ಕೇಂದ್ರ ಅಣಿಗೊಳಿಸಿರುವುದು ಶ್ಲಾಘನೀಯವಾಗಿದೆ.

ಸುಭದ್ರವಾದ ಸಿ ಆರ್ ಸಿ ಕಟ್ಟಡದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಸಜ್ಜಿತವಾದ ಗ್ರಂಥಾಲಯ ಶಿಕ್ಷಣದ ಮಹತ್ವ ಸಾರುವ ಧ್ಯೇಯ ವಾಕ್ಯಗಳ ಗೋಡೆ ಬರಹಗಳು ಹಾಗೂ ಕ್ಲಸ್ಟರ ನ ಎಲ್ಲ ಶಾಲೆಗಳ ಶಿಕ್ಷಕರುಗಳ ಹಾಗೂ ಮಕ್ಕಳ ಮಾಹಿತಿಯನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನ ಕ್ಲಸ್ಟರ್ ಹೊಂದಿರುತ್ತದೆ.

ಸಿ ಆರ್ ಪಿ ಆಂಜನೇಯ ಇದಿಯಪ್ಪನವರು ಶಿಕ್ಷಕರಿಗೆ ಟಿಪಿಡಿ ತರಬೇತಿಯನ್ನು ನೀಡಲು ಜಿಲ್ಲೆಯ ಎಲ್ಲ ತಾಲೂಕಿಗೆ ತೆರಳಿ ಕಾರ್ಯಕ್ರಮಗಳನ್ನು ನೀಡಿರುವುದು ವಿಶೇಷ ಹಾಗೂ ತಾಲೂಕಿನಲ್ಲಿ ಉತ್ತಮವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುವುದರಲ್ಲಿ ಮುಂಚೂಣಿ, ಮತ್ತು ಕೋವಿಡ್ ಸಂದರ್ಭದಲ್ಲಿ ಗೂಗಲ್ ಮೀಟ್ ಹಾಗೂ ಜೂಮ್ ಮೀಟ್ ನಂತಹ ಆಪ್ ಗಳ ಬಳಕೆಯ ಮೂಲಕ ದೇವಿಕೆರೆ ಕ್ಲಸ್ಟರ್ ನಲ್ಲಿ ಎಲ್ಲ ಮಕ್ಕಳಿಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮದ ರೀತಿಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಪಂಚಾಯಿತಿ ವತಿಯಿಂದ ಬಹುಮಾನಗಳನ್ನು ಮಕ್ಕಳಿಗೆ ವಿತರಿಸಿರುವುದು ಬಹಳ ವಿಶೇಷವಾದ ಕಾರ್ಯವಾಗಿದೆ.

ಮತ್ತೊಂದು ವಿಶೇಷವಾದ ಕೆಲಸವೇನೆಂದರೆ, ಕ್ಲಸ್ಟರ್ ಮಟ್ಟದಲ್ಲಿ ನಿವೃತ ಶಿಕ್ಷಕರಿಗೆ ಪ್ರತಿ ವರ್ಷವೂ ಸಹ ಕ್ಲಸ್ಟರ್‌ ನ ಎಲ್ಲ ಶಿಕ್ಷಕರನ್ನು ಒಟ್ಟುಗೂಡಿಸಿ ಸನ್ಮಾನಿಸಿಕೊಂಡು ಬರುತ್ತಿರುವುದು ಅವರ ಕಾರ್ಯಕ್ಕೆ ಕೈಕನ್ನಡಿಯಾಗಿದೆ.

ದೀಕ್ಷಾದಂತಹ ಆಪ್ ಗಳಲ್ಲಿ ಶಿಕ್ಷಕರು ತರಬೇತಿ ಪಡೆಯುವ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಇದ್ದಲ್ಲಿ ಶಿಕ್ಷಕರ ಮನೆ ಬಾಗಿಲಿಗೆ ತೆರಳಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ಹಲವು ಶಿಕ್ಷಕರು ಇವರ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.

ಹೀಗೆ ತಾಲೂಕಿನ ಶಿಕ್ಷಕರೊಂದಿಗೆ ಸೌಜನ್ಯ ತಾಳ್ಮೆಯಿಂದ ಸದಾ ಹಸನ್ಮುಖಿಯಾಗಿ ವರ್ತಿಸಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಎಲ್ಲಾ ಶಿಕ್ಷಕರ ಪ್ರೀತಿಯ ಸಿಆರ್ಪಿಯಾಗಿ ಹೊರಹೊಮ್ಮಿದ್ದಾರೆ. ಈ ರೀತಿಯ ಇವರ ಎಲ್ಲ ಅಂಶಗಳನ್ನು ಗುರುತಿಸುವಲ್ಲಿ ಶಿಕ್ಷಣ ಸಾರಥಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ದಾವಣಗೆರೆ ಜಿಲ್ಲಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕಿ ಸಾಹಿತಿಯಾದ ಮಂಜುಳಾ ಪಾಟೀಲ್ ರವರು ಇವರನ್ನು ಗುರುತಿಸಿ ಆಯ್ಕೆ ಮಾಡಿ ರಾಜ್ಯ ಹಂತಕ್ಕೆ ಶಿಫಾರಸು ಮಾಡಿರುತ್ತಾರೆ.

ಜುಲೈ 24, 2022ರಂದು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯವನ್ನು ಮಠದ ಪೂಜ್ಯ ಗುರುಗಳು ವಹಿಸಿಕೊಂಡಿದ್ದರು. ಕ.ರಾ. ಶಿ.ಪ್ರ. ಫ.ವೇ ಅಧ್ಯಕ್ಷರು ಪಿ. ಮಹೇಶ್ ಕಾರ್ಯದರ್ಶಿಯಾದ ಸಂತೋಷ ಬಂಡೆ, ಉಪಾಧ್ಯಕ್ಷರಾದ ಬಿ.ಜಿ ಅಗ್ರಹಾರ ಚಲನಚಿತ್ರ ನಟ ಹಾಗೂ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ ಗೌರಿಶಂಕರ್ , ಕ,ರಾ ಪ್ರಾಥಮಿಕ,ಶಾಲಾ ಶಿಕ್ಷಕರ ಅಧ್ಯಕ್ಷರು ಶಂಭುನ್ಗೌಡ ಪಾಟೀಲ್, ಹಾಗೂ ಚಲನಚಿತ್ರ ನಟಿ ಇಳ ವಿಟ್ಲ ಹಾಗೂ ಸಾಯಿಪ್ರಕಾಶ್ ಚಲನಚಿತ್ರ ನಟರು ಇನ್ನು ಮುಂತಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ ತಾಲೂಕಿನ ಸುಮಾರು 40 ಜನ ಶಿಕ್ಷಕರು,ಹಾಗೂ ಶಿಕ್ಷಕರ ವಿವಿಧ ಸಂಘಗಳ ನಿರ್ದೇಶಕರು,ಸದಸ್ಯರು,ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಾಕ್ಷಿಯಾಗಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!