ಜಗಳೂರು: ನ್ಯಾ.ಸದಾಶಿವ ಆಯೋಗ ಜಾರಿಗಾಗಿ ತಮಟೆ ಚಳವಳಿ!

Suddivijaya
Suddivijaya January 10, 2023
Updated 2023/01/10 at 1:22 PM

ಸುದ್ದಿವಿಜಯ, ಜಗಳೂರು: ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಅತ್ಯಂತ ಹಿಂದುಳಿದ ಮಾದಿಗ ಮತ್ತು ಛಲವಾದ ಸಮಿದಾಯಗಳಿಗೆ ಒಳ ಮೀಸಲಾತಿಗಾಗಿ ರಚನೆ ಮಾಡಿದ್ದ ನ್ಯಾ.ಎ.ಜೆ.ಸದಾಶಿವ ಆಯೊಗ ವರದಿಯನ್ನು ಯತಾವತ್ತಾಗಿ ಜಾರಿಗಾಗಿ ಒತ್ತಾಯಿಸಿ ತಾಲೂಕು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೊರಾಟ ಸಮಿತಿ ಮಂಗಳವಾರ ತಮಟೆ ಚಳುವಳಿ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಮಾದಿಗ ಹಾಗೂ ಛಲವಾದಿ ಸಮಾಜದ ಪ್ರತಿಭಟನಾ ಕಾರರು ಒಳಮೀಸಲಾತಿಗೆ ಆಗ್ರಹಿಸಿ ಘೋಷಣೆ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

ದಲಿತ ಸಂಘಟನೆ ಹಿರಿಯ ಮುಖಂಡ ಶಂಭುಲಿಂಗಪ್ಪ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಲು ಸುಮಾರು 2 ದಶಕಗಳಿಂದ ಸತತವಾಗಿ ಹೊರಾಟ ನಡೆಸುತ್ತಾ ಬಂದಿದ್ದೇವೆ.

ಇದುವರೆಗೂ ಅಧಿಕಾರ ನಡೆಸಿದ ಯಾವುದೇ ಸರಕಾರಗಳು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಲ್ಲಿ ನಿರ್ಲಕ್ಷಿಸಿವೆ. ಮಾಜಿ ಮುಖ್ಯಮಂತ್ರಿ ಎಸ್ .ಎಂ.ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ಆಯೋಗ ರಚನೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ಜಗಳೂರು ತಾಲೂಕು ಕಚೇರಿಯ ಮುಂದೆ ನ್ಯಾ.ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಜಗಳೂರು ತಾಲೂಕು ಕಚೇರಿಯ ಮುಂದೆ ನ್ಯಾ.ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ನಂತರ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರ ಅಧಿಕಾರ ಅವಧಿಯಲ್ಲಿ ವರದಿ ಮಾಡಲಾಗಿತ್ತು. ಮಾದಿಗ ಹಾಗೂ ಚಲವಾದಿ ಸಮುದಾಯಗಳು ನಿರಂತರ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವರದಿಯನ್ನು ಕೇಂದ್ರ ಸರಕಾರಕ್ಕೆ ರವಾನಿಸಿ ಅಸ್ಪøಶ್ಯತೆ ಅನುಭವಿಸುತ್ತಿರುವ ಮಾದಿಗ ಛಲವಾದಿ ಸಮುದಾಗಳಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಛಲವಾದಿ ಸಮಾಜದ ಹಿರಿಯ ಮುಖಂಡ ನಿವೃತ್ತ ಅಧಿಕಾರಿ, ಸಿ.ತಿಪ್ಪೇಸ್ವಾಮಿ ಮಾತನಾಡಿ, ಸಂವಿಧಾನ ಬದ್ದ ಹಕ್ಕುಗಳಿಗೆ ಹೊರಾಟ ಅನಿವಾರ್ಯವಾಗಿದೆ. ಹೊಲೆಯಮಾದಿಗ ಸಮಾಜದವರು ಸಾಮಾಜಿಕ, ಆರ್ಥಿಕ,ಶೈಕ್ಷಣಿಕ,ರಾಜಕೀಯವಾಗಿ ಶೋಷಣೆಗೆ ಒಳಗಾಗಿವೆ. ನಾವು ಸ್ಪøಶ್ಯ ಜಾತಿಗಳಾದ ಕೊರಚ, ಲಂಬಾಣಿ, ಭೋವಿ ಸಮುದಾಯಗಳ ಮೀಸಲಾತಿ ಕಸಿದುಕೊಳ್ಳುವುದಿಲ್ಲ. ನಾವೂ ಅವರಂತೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅನ್ಯ ರಾಜ್ಯದಲ್ಲಿರುವಂತೆ ಭೋವಿ,ಲಂಬಾಣಿ,ಕೊರಚ ಸಮುದಾಯಗಳು ಮೀಸಲಾತಿ ಅನುಭವಿಸಬೇಕು.ನಿಜವಾದ ಅಸ್ಪøಶ್ಯರಿಗೆ ಒಳಮೀಸಲಾತಿ ಸಿಗಬೇಕು. 1932 ರಲ್ಲಿ ಮೀಸಲಾತಿ ಎಂದರೆ ವಕ್ರದೃಷ್ಟಿಯಿಂದ ಕಾಣುವವರು ಇದೀಗ ಮೀಸಲಾತಿ ಕೇಳುತ್ತಿರುವುದು ನಾಚಿಕೆಗೇಡಿತನ ಎಂದರು.

ಸಂದರ್ಭದಲ್ಲಿ ಒಳಮೀಸಲಾತಿ ಹೊರಾಟಸಮಿತಿಯ ತಾಲೂಕು ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಸಿ.ಲಕ್ಷ್ಮಣ, ನಾಗಲಿಂಗಪ್ಪ, ಓಬಣ್ಣ, ಕುಬೇರಪ್ಪ, ಸಿದ್ದಮ್ಮನಹಳ್ಳಿ ವೆಂಕಟೇಶ್, ಕುಬೇಂದ್ರಪ್ಪ, ಹೊನ್ನೂರಪ್ಪ, ನಿಜಲಿಂಗಪ್ಪ, ಪೂಜಾರ್ ಸಿದ್ದಪ್ಪ, ಮಲ್ಲೇಶ್ ಪೂಜಾರ್, ವೀರಸ್ವಾಮಿ, ಸತೀಶ್ ಮಲೆಮಾಚಿಕೆರೆ, ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ್, ತಿಮ್ಮೇಶ್, ಮಹಾಂತೇಶ್, ಚೌಡಪ್ಪ, ಜೀವನ್,ನಾಗರಾಜ್, ಹನುಮಂತಪ್ಪ, ರೇಣುಕೇಶ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!