ಜಗಳೂರು: ವಿಜೃಂಭಣೆಯಿಂದ ಜರುಗಿದ ಹೊಸಕೆರೆ ಆದಿ ಶಕ್ತಿ ಶ್ರೀ ಸತ್ಯಮ್ಮದೇವಿ ರಥೋತ್ಸವ

Suddivijaya
Suddivijaya March 15, 2023
Updated 2023/03/15 at 1:24 PM

ಸುದ್ದಿವಿಜಯ, ಜಗಳೂರು: ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಆದಿ ಶಕ್ತಿ ಶ್ರೀ ಸತ್ಯಮ್ಮ ದೇವಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಸತ್ಯಮ್ಮ ದೇವಿಯ ಮೂರ್ತಿಯನ್ನು ರಥೋತ್ಸವದಲ್ಲಿ ಕೂರಿಸಿದ ನಂತರ ದೇವಿಯ ಪಠ ಹರಾಜು ಪ್ರಕ್ರಿಯೆ ನಡೆಯಿತು. ಹೊಸಕೆರೆ ಗ್ರಾಪಂ ಅಧ್ಯಕ್ಷರಾದ ಎನ್.ಲಕ್ಷ್ಮೀ ಸತೀಶ್ ಅವರಿಗೆ 1,01,101 ರೂಗಳಿಗೆ ನೀಡಿ ತಮ್ಮದಾಗಿಸಿಕೊಂಡರು.

 ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಶ್ರೀ ಆದಿ ಶಕ್ತಿ ಸತ್ಯಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
 ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಶ್ರೀ ಆದಿ ಶಕ್ತಿ ಸತ್ಯಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಆದಿ ಶಕ್ತಿಯ ರಥೋತ್ಸವಕ್ಕೆ ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಯಿತು. ಪಟ ಹರಾಜು ನಂತರ ಭಕ್ತರು ಇಷ್ಟಾರ್ಥಗಳನ್ನು ಈಡೇರಿಸು ದೇವಿ ಎಂದು ಆದಿ ಶಕ್ತಿಯ ತೇರಿಗೆ ಅಣ್ಣು, ಕಾಯಿ ಸಮರ್ಪಿಸಿದರು. ಸಂಜೆ 5.40ಕ್ಕೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನಂತರ ಡೊಳ್ಳು, ಸಮಾಳ, ನಂದಿ ಧ್ವಜ ಕುಣಿತ ಸೇರಿದಂತೆ ವಿವಿಧ ಬಗೆಯ ಕಲಾ ಪ್ರಕಾರಗಳಿಂದ ರಥೋತ್ಸವವನ್ನು ಪಾದಘಟ್ಟದ ವರೆಗೆ ಎಳೆದು ಅಲ್ಲಿ ಪೂಜೆ ನೆರವೇರಿಸಿದರು. ನಂತರ ಅಲ್ಲಿಂದ ತೇರನ್ನು ದೇವಸ್ಥಾನದವರೆಗೆ ಎಳೆದು ಭಕ್ತರು ಆದಿ ಶಕ್ತಿ ಸತ್ಯಮ್ಮ ದೇವಿಗೆ ಭಕ್ತಿ ಸಮರ್ಪಿಸಿದರು. ಜಗಳೂರು ತಾಲೂಕಿನ ಸೊಕ್ಕೆ, ಉಜ್ಜಿನಿ, ಕೊಟ್ಟೂರು, ಗೌರಿಪುರ, ತುಂಬಿನಕಟ್ಟೆ, ಕ್ಯಾಸೇನಹಳ್ಳಿ, ತೂಲಹಳ್ಳಿ, ಕೆಚ್ಚೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!