ಸುದ್ದಿವಿಜಯ, ಜಗಳೂರು: ಭೂಮಿಯಲ್ಲಿ ಜೀವಿಸುವ ಪ್ರತಿ ಜೀವಿಗೂ ನೀರೇ ಆಧಾರ. ಒಂದೇ ಒಂದು ಹನಿ ನೀರನ್ನು ವ್ಯರ್ಥ ಮಾಡಿದರೆ ಭವಿಷ್ಯಕ್ಕೆ ಸಂಚಕಾರವಾಗಲಿದೆ ಹೀಗಾಗಿ ನೀರಿನ ಮಿತ ಬಳಕೆ, ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕರಾದ ತಿಪ್ಪೆಸ್ವಾಮಿ ನೀರಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ತಾಲೂಕಿನ ತೋರಣಗಟ್ಟೆ ಗ್ರಾಮದ ಸರಕಾರಿ ಶಾಲೆಯಲ್ಲಿ ಶುಕ್ರವಾರ ಜಲಾನಯನ ಅಭಿವೃದ್ದಿ ಇಲಾಖೆಯ ಡಬ್ಯೂಡಿಸಿ2.0 ಯೋಜನೆ ಮತ್ತು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಅಂಗವಾಗಿ ಕೃಷಿ ಇಲಾಖೆ, ಕೆವಿಕೆ ವಿದ್ಯಾರ್ಥಿಗಳಿಗೆ ಸರಪ್ರಶ್ನೆ ಕ್ರಾರ್ಯಕ್ರಮ ಉದ್ಘಾಟಿಸಿದ ಅವರು ಮಾನಾಡಿದರು.
ಜಗಳೂರು ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಲ್ಲಿನ ಹವಾಗುಣ ಸಮಸೀತೋಷ್ಣವಾಗಿದೆ. ಉತ್ತಮ ಮಳೆ ಬಿದ್ದರೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ವಿಫುಲ ಅವಕಾಶ ಇಲ್ಲಿದೆ. ಆದರೆ ನೀರಿನ ಮಹತ್ವವನ್ನು ಅರಿತಾಗ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ ಎಂದರು.
ಕೃಷಿಗಾಗಿ ನೀರು ಬಳಕೆ ಮಾಡುವ ವಿಧಾನ ಅತ್ಯಂತ ಮುಖ್ಯವಾದುದು. ಹನಿ ನೀರಾವರಿ, ತುಂತುರು ನೀರಾವರಿ ಬಳಸುವುದರಿಂದ ಮಣ್ಣನಿ ಫಲವತ್ತತೆ ನಾಶವಾಗುವುದಿಲ್ಲ.
ತೋರಣಗಟ್ಟೆ ಗ್ರಾಪಂ ವ್ಯಾಫ್ತಿಯಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾಮಗಾರಿಗಳ ನಿರ್ಮಾಣಕ್ಕೆ ಅವಕಾಶವಿದೆ. ಸ್ಯಾಟಲೈಟ್ ತಂತ್ರಜ್ಞಾನ ಆಧಾರದ ಮೇಲೆ ನೀರು ವ್ಯರ್ಥವಾಗಿ ಹರಿಯದಂತೆ ಅಡ್ಡಲಾಗಿ ಬದು ನಿರ್ಮಾಣ ಮತ್ತು ಒಡ್ಡುಗಳ ನಿರ್ಮಾಣಕ್ಕೆ ಅವಕಾಶವಿದ್ದು ತೋರಣಗಟ್ಟೆ, ಜಮ್ಮಾಪುರ, ಅರಿಶಿಣಗುಂಡಿ ಸೇರಿದಂತೆ ವಾಟರ್ ಶೆಡ್ ಪ್ರಾಜ್ಟಕ್ಟ್ ಅಡಿ ಬರುವ ಗ್ರಾಮಗಳ ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ್ ಮಾತನಾಡಿ, ಮಣ್ಣಿನ ಸಂರಕ್ಷಣೆ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಬೇಕು. ನೀರನ್ನು ಮಿತವಾಗಿ ಬಳಸುವುದರಿಂದ ಭವಿಷ್ಯದ ಪೀಳಿಗೆಗೆ ಉಳಿತಾಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಗಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಯಚಿಸಿದ್ದಾರೆ. ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ವಿಧಾನದ ಬಗ್ಗೆ ಅವರು ಮಾಹಿತಿ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕೀಮಾವತ್ ಮಾತನಾಡಿ, ಸಿರಿದಾನ್ಯಗಳ ಮಹತ್ವ, ಸಿರಿದಾನ್ಯಗಳಲ್ಲಿ ಸಿಗುವ ಪೆÇಷಕಾಂಶಗಳು, ರೈತ ಸಿರಿ ಯೋಜನೆಯಡಿ ಸಿರಿದಾನ್ಯ ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್ 6000 ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗೆ ಜಮೆ, ಸಿರಿದಾನ್ಯದಿಂದ ಮೌಲ್ಯವರ್ದನೆ ಮಾಡಿ ಬಿಸ್ಕೆಟ್, ಬ್ರಡ್, ಮಾಡಿ ಅದಿಕ ಲಾಭ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೂರು ಜನ ವಿದ್ಯಾರ್ಥಿಗಳಿಗೆ ಭಾಗವಹಿಸಿದ 200 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರೈತರಿಗೆ ಜಲಾನಯನ ಇಲಾಖೆಯ ತೋಟಗಾರಿಕೆ ಘಟಕದಿಂದ ಹಿತ್ತಲ ತೋಟ ಮಾಡಲು ಮಾವು, ಬಿಕ್ಕೆ, ನಿಂಬೆ ಹಾಗು ತೆಂಗು ಸಸಿಗಳನ್ನು ರೈತರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ದುರುಗಮ್ಮ ವೆಂಕಟೇಶ್, ಕೃಷಿ ಅಧಿಕಾರಿ ಭೀರಪ್ಪ ಶಿಕ್ಷಕರಾದ ವೀರೇಶ್, ಸತೀಶ, ಶಿವಕುಮಾರ್, ಶಾಲೆಯ ಎಸ್ಡಿಎಂಸಿ ಅದ್ಯಕ್ಷರಾದ ತಿಪ್ಪೇಸ್ವಾಮಿ ಸದಸ್ಯರುಗಳಾದ ಸಿದ್ದಲಿಂಗಮ್ಮ ಬಾಲಕೃಷ್ಣ, ಬಸವರಾಜಪ್ಪ ಸೇರಿದಂತೆ ಅನೇಕರು ಇದ್ದರು.