ಸುದ್ದಿವಿಜಯ, ಜಗಳೂರು: ಮಕ್ಕಳಲ್ಲಿರುವ ಕೌಶಲ ಮತ್ತು ವಿಷಯ ವಸ್ತುಗಳಿಗೆ ತಕ್ಕಂತೆ ಮಕ್ಕಳೊಂದಿಗೆ ಬೆರತು ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ಅದರ ಉದ್ದೇಶ ಈಡೇರಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಉಮಾದೇವಿ ಹೇಳಿದರು.
ತಾಲ್ಲೂಕಿನ ಹಿರೇಮಲ್ಲನಹೊಳೆ ಪ್ರೌಢಶಾಲಾ ಆವರಣದಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಪರಿಸ್ಥಿತಿಯಿಂದಾಗಿ ಎರಡು ವರ್ಷಗಳ ಕಾಲ ಶಿಕ್ಷಣ ಚಟುವಟಿಕೆ ಸ್ಥಗಿತವಾಗಿತ್ತು ಗುಣಾತ್ಮಕ ಶಿಕ್ಷಣಕ್ಕಾಗಿ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವನ್ನಾಗಿ ಮಾಡುವ ಮೂಲಕ ಶಿಕ್ಷಣಾ ಚೇರಿಕೆಗಾಗಿ ಉತ್ತಮ ಅವಕಾಶಗಳನ್ನ ನೀಡಲಾಗಿದೆ ಎಂದರು.
ತಾಲ್ಲೂಕಿನ ಎಲ್ಲಾ ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕಳ್ಳಿಗೆ ಸ್ವಯಂ ಚಟುವಟಿಕೆ ಮೂಲಕ ಇತಿಹಾಸ, ಸಮಾಜ, ಶಾಲೆ, ಪರಿಸರ ಹಾಗು ಇತರ ಕ್ಷೇತ್ರಗಳ ಪರಿಚಯ ಮಾಡಿಕೊಡಲು ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಚಂದ್ರಪ್ಪ ಮಾತನಾಡಿ, ಇಂತಹ ಉತ್ತಮ ಚಟುವಟಿಕೆ ಕಾರ್ಯಕ್ರಮ ಮಾಡಲು ಇಲಾಖೆ ಆರ್ಥಿಕವಾಗಿ ಉತ್ತೇಜನೆ ನೀಡಬೇಕಿದೆ. ಇರುವಂತಹ ಸಂಪನ್ಮೂಲಗಳನ್ನ ಬಳಸಿಕೊಂಡು ಉತ್ತಮ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ಸಂಗತಿ ಕೇವಲ ಸರಕಾರವನ್ನೇ ಅವಲಂಬಿತವಾಗದೆ ಸ್ಥಳೀಯವಾಗಿ ಪ್ರೋಷಕರು ದಾನಿಗಳ ಸಹಕಾರ ಬಯಸಿ ಯಶಸ್ವಿ ಕಾರ್ಯಕ್ರಮಮಾಡಿದ್ದೀರಿ. ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್, ಎಚ್ಚೆತ್ತ ಕರ್ನಾಟಕ ನವನಿರ್ಮಾಣ ಸಂಘದ ರಾಜ್ಯಾಧ್ಯಕ್ಷ ಜೆ.ಮಹಾಲಿಂಗಪ್ಪ ಇಬ್ಬರು ಗ್ರಾಮದಲ್ಲಿ ಕಲಿಕಾ ಉತ್ಸವ ಮೆರವಣಿಗೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಶಾಲಾ ಆವರಣವನ್ನ ಶೃಂಗಾರಗೊಳಿಸಿ ವಿದ್ಯಾರ್ಥಿಗಳು ಎತ್ತಿನಬಂಡಿಯಲ್ಲಿ ಏರಿ ಮೆರವಣಿಗೆ ಹೊರಟು ಗ್ರಾಮ ಸಂಚಾರ ಮಾಡಿದರು. ವಿದ್ಯಾರ್ಥಿನಿಯರು ಕುಂಭ ಮೇಳದಲ್ಲಿ ಭಾಗವಹಿಸಿದ್ದರು. ಈವೇಳೆ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಿ.ಹಾಲೇಶ್ ವೇದಿಕೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಜೀಯಾ ಎಸ್.ಎನ್. ತಿಪ್ಪೇಸ್ವಾಮಿ, ಈರಮ್ಮ ಶಿವಣ್ಣ, ಎಸ್.ಡಿ.ಎಂ ಸಿ.ಅಧ್ಯಕ್ಷ ಬಾಬುರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್ ಕಾರ್ಯದರ್ಶಿ ಅಂಜಿನಿ ನಾಯ್ಕ್, ಮಾಜಿ ಕಾರ್ಯದರ್ಶಿ ಸುರೇಶ್ ಬಿ.ಆರ್.ಸಿ ಹನುಮಂತಪ್ಪ, ಈರಪ್ಪ, ಸಿ.ಆರ್.ಪಿ. ರವಿಪ್ರಸಾದ್, ಮುಖ್ಯ ಶಿಕ್ಷಕ ತೋಟಗಂಟಿ ಪ್ರಕಾಶ್, ಸಹ ಶಿಕ್ಷಕರಾದ ವಾಗೀಶ್ ಸ್ವಾಮಿ, ಕಲ್ಲಿನಾಥ್, ತಾಯಿಟೋಣಿ ದುರುಗಪ್ಪ, ಮಲ್ಲಾಪುರ ಲಕ್ಷ್ಮಿದೇವಿ, ಹೆಚ್.ಎಂ.ಹೊಳೆ ಅಪ್ಪಾಜಿ ಸೇರಿದಂತೆ ಶಾಲಾಭಿವೃದ್ದಿ ಸದಸ್ಯರು ಪೆÇೀಷಕರು ವಿದ್ಯಾರ್ಥಿಗಳು ಇದ್ದರು.