ಜಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಥಮ ಸ್ಥಾನಕ್ಕೆ ಶ್ರಮಿಸಿ, ಬಿಇಓ ಉಮಾದೇವಿ ಶಿಕ್ಷಕರಿಗೆ ಕರೆ!

Suddivijaya
Suddivijaya January 13, 2023
Updated 2023/01/13 at 2:10 PM

ಸುದ್ದಿವಿಜಯ, ಜಗಳೂರು:  ಶೈಕ್ಷಣಿಕ ಕ್ಷೇತ್ರದಲ್ಲಿ ಜಗಳೂರು ಉತ್ತಮ ಸಾಧನೆ ಮಾಡುತ್ತಿದ್ದು, ಈ ಬಾರಿಯೂ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಹೇಳಿದರು.

ತಾಲೂಕಿನ ಹಿರೆಮಲ್ಲನಹೊಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ವಿಜ್ಞಾನ ಕ್ಲಬ್ ವತಿಯಿಂದ ಆಯೋಜಿಸಿದ್ದ ಸಮಾಜ- ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಕಳೆದ ನಾಲ್ಕು ವರ್ಷಗಳಿಂದಲೂ ಸತತವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಮಾರ್ಚ್‍ನಲ್ಲಿ ನಡೆಯುವ ಪರೀಕ್ಷೆಯೂ ಉತ್ತಮ ಫಲಿತಾಂಶದೊಂದಿಗೆ ಜಗಳೂರು ಮತ್ತೊಮ್ಮೆ ಕೀರ್ತಿ ಪತಾಕಿ ಹಾರಿಸಬೇಕು ಎಂದು ಕರೆ ನೀಡಿದರು.

ತಾಲೂಕು ಬರಪೀಡಿತ ಪ್ರದೇಶವೆಂದು ಕರೆಸಿಕೊಂಡರೂ ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ಪ್ರಗತಿಯತ್ತಾ ಸಾಗುತ್ತಿದೆ. ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದು ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದರೆ ಸಾಧನೆ ಶಿಖರ ಏರಲಿದ್ದಾರೆ ಎಂದರು.

 ಜಗಳೂರು ತಾಲೂಕಿನ ಹಿರೆಮಲ್ಲನಹೊಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಸಮಾಜ- ವಿಜ್ಞಾನ ಕಾರ್ಯಾಗಾರವನ್ನು ಬಿಇಒ ಉಮಾದೇವಿ ಉದ್ಘಾಟಿಸಿದರು
 ಜಗಳೂರು ತಾಲೂಕಿನ ಹಿರೆಮಲ್ಲನಹೊಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಸಮಾಜ- ವಿಜ್ಞಾನ ಕಾರ್ಯಾಗಾರವನ್ನು ಬಿಇಒ ಉಮಾದೇವಿ ಉದ್ಘಾಟಿಸಿದರು

ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಿ .ಆರ್.ಚಂದ್ರಪ್ಪ ಮಾತನಾಡಿ, ವಿಶೇಷ ತರಗತಿ, ಗುಂಪು ಅಧ್ಯಯನ, ಪ್ರಶ್ನೋತ್ತರಗಳ ಬರವಣಿಗೆ, ನಿರಂತರ ಓದುವಿಕೆ, ಸರಣಿ ಪರೀಕ್ಷೆ, ಶಾಲಾ ಹಂತದ ಪರೀಕ್ಷೆ ಸೇರಿದಂತೆ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ನೆಡಸುವ ಮೂಲಕ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಶಿಕ್ಷಕರು ಉತ್ತಮವಾಗಿ ತರಬೇತಿಗೊಳಿಸುವಂತೆ ಕಿವಿಮಾತು ತಿಳಿಸಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್ ಬಾಬುರೆಡ್ಡಿ, ಕಾರ್ಯದರ್ಶಿ ಡಿ. ಮಂಜಪ್ಪ, ಸಮಾಜ ವಿಜ್ಞಾನ ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್ ಎನ್ ಪ್ರದೀಪ್, ಇಸಿಒ ಹನುಮಂತಪ್ಪ. ಎಚ್‍ಎಂ.ಹೊಳೆ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಕಾಶ್ ತೋಟಗಂಟಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎ.ಎಸ್.ಕಲ್ಲಿನಾಥ್. ಪ್ರೌಢಶಾಲಾ ಸ.ಶಿ.ಸಂಘದ ತಾಲೂಕು ಉಪಾಧ್ಯಕ್ಷ ಜಿ.ವೆಂಕಟೇಶ್, ಸಮಾಜ ವಿಜ್ಞಾನ ಕ್ಲಬ್ ಅಧ್ಯಕ್ಷ ಮಂಜಪ್ಪ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!