ಜಗಳೂರು: ಶ್ರೀ ಕೃಷ್ಣೋತ್ಸವದಲ್ಲಿ ರಾಜಕೀಯ ಕುಣಿತ!

Suddivijaya
Suddivijaya August 26, 2022
Updated 2022/08/26 at 1:45 PM

ಸುದ್ದಿವಿಜಯ,ಜಗಳೂರು: ಪಟ್ಟಣದಲ್ಲಿ ಯಾದವ ಸಮುದಾಯದ ಜನಾಂಗದವರಿಂದ ಶುಕ್ರವಾರ ಅದ್ಧೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಪಟ್ಟಣದ ಮಾರಿಕಾಂಬ ದೇವಸ್ಥಾನದಿಂದ ಗಾಂಧಿ ವೃತ್ತದವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದು ಗಾಂಧಿ ವೃತ್ತದಲ್ಲಿ ಕಟ್ಟಿದ್ದ ಮೊಸರು ಗಡಿಗೆ ಒಡೆಯಲು ನಾಮುಂದು ತಾಮುಂದು ಎಂದು ಪೈಪೋಟಿಗೆ ಬಿದ್ದವರಂತೆ ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿತ್ತು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕರೆತಂದಿದ್ದ ವಿವಿಧ ಜಾನಪದ ಕಲಾಪ್ರಾಕಾರಗಳ ಕಲಾವಿಧರು ತಮ್ಮ ತಮ್ಮ ವೇಷಗಳನ್ನು ಧರಿಸಿ ಕುಣಿದು ಕುಪ್ಪಳಿಸಿ ಜನರನ್ನು ರಂಜಿಸುತ್ತಿದ್ದರೆ ಇತ್ತ ಕಾಂಗ್ರೆಸ್ ಮುಖಂಡರು ಯಾದವ ಸಮುದಾಯದ ಮತ ಸೆಳೆಯಲು ಜಾನಪದ ಕಲಾಪ್ರಕಾರಗಳ ಕಲಾವಿದರ ಜೊತೆ ಹೆಜ್ಜೆಹಾಕಿದರು.

:ಶ್ರೀಕೃಷ್ಣಜನ್ಮೋತ್ಸವದಲ್ಲಿ ಮೊಸರು ಗಡಿಗೆ ಒಡೆಯಲು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮುಗಿಬಿದ್ದ ಚಿತ್ರ
ಶ್ರೀಕೃಷ್ಣಜನ್ಮೋತ್ಸವದಲ್ಲಿ ಮೊಸರು ಗಡಿಗೆ ಒಡೆಯಲು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮುಗಿಬಿದ್ದ ಚಿತ್ರ

ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರನ್ನು ಗೊಲ್ಲ ಸಮುದಾಯದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದರು.

ಸ್ವಲ್ಪ ತಡವಾಗಿ ಬಂದ ಶಾಸಕ ಶಾಸಕ ಎಸ್.ವಿ.ರಾಮಚಂದ್ರ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಮೆರವಣಿಗೆ ಮಾಡಿದರು. ಇತ್ತ ಕಾಂಗ್ರೆಸ್ ಅತ್ತ ಬಿಜೆಪಿ ಕಾರ್ಯಕರ್ತರು ಅವರವರ ನಾಯಕರನ್ನು ಎತ್ತಿ ಕುಣಿಸಿ ಸಂಭ್ರಮಿಸಿದರು.

ಜಗಳೂರು ಪಟ್ಟಣದ ಗಾಂಧಿವೃತ್ತದಲ್ಲಿ ಶ್ರೀಕೃಷ್ಣಜನ್ಮೋತ್ಸವದಲ್ಲಿ ಸೇರಿದ ಜನಸ್ಥೋಮದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಹಾಗೂ ಕಾಂಗ್ರೆಸ್ ಮುಖಂಡರು ಭಾಗಿ
ಜಗಳೂರು ಪಟ್ಟಣದ ಗಾಂಧಿವೃತ್ತದಲ್ಲಿ ಶ್ರೀಕೃಷ್ಣಜನ್ಮೋತ್ಸವದಲ್ಲಿ ಸೇರಿದ ಜನಸ್ಥೋಮದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಹಾಗೂ ಕಾಂಗ್ರೆಸ್ ಮುಖಂಡರು ಭಾಗಿ

ಒಟ್ಟಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾಲೂಕಿನ ಯಾದವ ಸಮುದಾಯದ ಮತ ಸೆಳೆಯಲು ಕೃಷ್ಣ ಜನ್ಮಾಷ್ಠಮಿ ಪ್ರತಿಷ್ಠೆಯ ಉತ್ಸವದಂತೆ ಕಂಡು ಬಂತು.

ಶಾಸಕ ಎಸ್.ವಿ.ರಾಮಚಂದ್ರ ಸಮುದಾಯಕ್ಕೆ ತಾವು ಕೊಟ್ಟ ಕೊಡುಗೆಗಳನ್ನು ಹೇಳುತ್ತಿದ್ದರೆ ಇತ್ತ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರನ್ನು ಹೆಗಲ ಮೇಲೆ ಕುಳ್ಳಿರಿಸಿ ಕೇಕೆ ಹಾಕುತ್ತಿದ್ದುದ್ದನ್ನು ನೋಡಿದ ಜನರಿಗೆ ಅದು ಕೃಷ್ಣೋತ್ಸವೋ ಅಥವಾ ರಾಜಕೀಯ ಕುಣಿತವೋ ಎಂದು ಪಿಸು ಪಿಸು ಮಾತುಗಳು ಹೊರಬರುತ್ತಿದ್ದವು. ನಂತರ ಒಂದೇ ಬೆಳ್ಳಿರಥದಲ್ಲಿ ಶಾಸಕ ರಾಮಚಂದ್ರ ಮತ್ತು ಕಾಂಗ್ರೆಸ್ ಮುಖಂಡರು ಮೆರವಣಿಗೆಯಲ್ಲಿ ಕಾಣಿಸಿಕೊಂಡರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!