ಸುದ್ದಿವಿಜಯ ಜಗಳೂರು.ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಬೇಕು, ಬಡವರಿಗೆ, ನಿರ್ಗತಿಕರಿಗೆ ಸಹಾಯವಾಗಬೇಕೆನ್ನುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಬ್ಬರಿಂದ ಮತ್ತೊಬ್ಬರ ಜೀವ ಉಳಿಸಬೇಕು ಎಂದು ಪ್ರಾಂಶುಪಾಲ ಗಂಗಾಧರಪ್ಪ ಹೇಳಿದರು.
ಇಲ್ಲಿನ ಹೋ.ಚಿ. ಬೋರಯ್ಯ ಕಾಲೇಜಿನಲ್ಲಿ ಮಂಗಳವಾರ ತಾಲೂಕು ನಾಯಕರ ಸಂಘ, ಎನ್‌ಎಸ್ ಎಸ್ ಘಟಕ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯುವಕರ ಸಂಖ್ಯೆ ಸಾಕಷ್ಟಿದೆ ಆದರೆ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಕೆಡಿಸಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ ನೀಡಿದ ರಕ್ತದಿಂದ ಒಬ್ಬಿಬ್ಬರ ಜೀವ ಉಳಿಯುತ್ತದೆ. ರಕ್ತದಾನ ಮಾಡುವ ಕೆಲಸ ನಿರಂತವಾಗಿ ನಡೆಯಬೇಕು ಕಷ್ಟದಲ್ಲಿರುವ ಬಡವರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಎಲ್ಲಾ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೊದಲು ಅರ್ಜಿಗಳನ್ನು ಭರ್ತಿ ಮಾಡಿದರು. ಅದರ ನಂತರ, ಕಾರ್ಯಕ್ರಮವು ೧೧ ಗಂಟೆಗೆ ಪ್ರಾರಂಭವಾಯಿತು. ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕಾಲೇಜು ಬೋಧಕ ಸಿಬ್ಬಂದಿ/ಬೋಧಕೇತರ ಸಿಬ್ಬಂದಿ ರಕ್ತದಾನ ಮಾಡಿ ಕಾರ್ಯಕ್ರಮದ ಭಾಗವಾದರು.
ಕಾರ್ಯಕ್ರಮದಲ್ಲಿ ಹಲವಾರು ಸ್ಥಳೀಯರು ಭಾಗವಹಿಸಿದ್ದರು. ರಕ್ತದಾನ ಮಾಡುವ ಮೊದಲು, ವೈದ್ಯರಿಂದ ಎಲ್ಲರಿಗೂ ಕೌನ್ಸಿಲ್ ಮಾಡಲಾಯಿತು, ನಂತರ ರಕ್ತದಾನದ ಪ್ರಯೋಜನಗಳ ಕುರಿತು ಉನ್ನತ ಭಾಷಣವನ್ನು ಪ್ರಾರಂಭಿಸಲಾಯಿತು. ಟಿಟಿಎಲ್ ಕ್ಯಾಂಪಸ್‌ನಲ್ಲಿ ಸಂಜೆ ೪ ಗಂಟೆಗೆ ಮುಕ್ತಾಯಗೊಂಡ ದಿನದಂದು ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ, ಉಪನ್ಯಾಸಕರಾದ ನಾರಾಯಣ, ಸೀತಾರಾಂ,ನಾಗರಾಜ್, ಸರ್ಕಾರಿ ಆಸ್ಪತ್ರೆಯ ಉಮೇಶ್ ಸೇರಿದಂತೆ ಇತರರಿದ್ದರು.