ಸುದ್ದಿವಿಜಯ,ಜಗಳೂರು: ಕೋವಿಡ್ ಹಿನ್ನೆಲೆ ಎರಡುವರ್ಷಗಳ ಮುಂಬಡ್ತಿಯಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕಾಚೇತರಿಕೆ ವಿನೂತನ ಕಾರ್ಯಕ್ರಮವನ್ನು ಸರಕಾರಿ ರಾಜ್ಯವ್ಯಾಪಿ ಅನುಷ್ಠಾನಗೊಳಿಸಿರುವುದು ಸ್ವಾಗತರ್ಹ.ಶಿಕ್ಷಕ ವರ್ಗ ಸಮರ್ಪಕವಾಗಿ ಶ್ರಮವಹಿಸಬೇಕು ಸಾಗಾಣಿಕ ವೆಚ್ಚವನ್ನು ಶೀಘ್ರದಲ್ಲಿ ರಾಜ್ಯದ ಪ್ರತಿ ತಾಲೂಕಿನ ಬಿಇಓ ಕಛೇರಿಗಳಿಗೆ ಸರಕಾರ ಸಾಗಾಣಿಕ ವೆಚ್ಚ ಭರಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಮನವಿ ಮಾಡಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಹಿನ್ನೆಲೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶೇ.25 ರಷ್ಟು ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಕೃಪಾಂಕವಿರುವ ಶಿಕ್ಷಕರನ್ನು, ಉಳಿದಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಹಾಗೂ ಶೇ.25 ರಿಂದ ಶೇ. 40 ಕ್ಕೆ ಪದವೀಧರ ಶಿಕ್ಷಕರ ನಿಯೋಜಿಸಲು ಮನವಿ ಮಾಡಲಾಗಿತ್ತು ಇದಕ್ಕೆ ಪ್ರತಿಯಾಗಿ ಮಾನ್ಯ ಶಿಕ್ಷಣ ಸಚಿವರಾದ ನಾಗೇಶ್ ಹಾಗೂ ಆಯುಕ್ತರು ಅನುಮೋದನೆ ನೀಡಿದ್ದಾರೆ.
ಅಲ್ಲದೆ ಕೋವಿಡ್ ನಿಂತ ಮೃತರಾದ ಶಿಕ್ಷಕರ ಕುಟುಂಬದಲ್ಲಿ ಅನುಕಂಪದಡಿ ನೇಮಕಾತಿ ಮಾಡಲಾಗಿದೆ.ಕೆಲವರಿಗೆ ತಲಾ 30 ಲಕ್ಷ ಪರಿಹಾರಕ್ಕೆ ಕ್ರಮಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
1998 ರಲ್ಲಿ ಆಯ್ಕೆಯಾಗಿರುವ ಗ್ರಾಮೀಣ ಕೃಪಾಂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಧ್ವನಿಯಾಗಿ ಸದಾ ಕಾರ್ಯನಿರತನಾಗಿರುವೆ.ಎನ್ ಪಿಎಸ್ ರದ್ದತಿ , 2005 ರಲ್ಲಿ ಆಯ್ಕೆಯಾಗಿರುವ ಎನ್ ಪಿಎಸ್ ಶಿಕ್ಷಕ ಓಪಿಎಸ್ ಆಯ್ಕೆಬಗ್ಗೆ ಚರ್ಚಿಸಲಾಗಿದೆ ಎಂದರು.
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಆರ್ ಡಿ ಪಿಆರ್ ಇಲಾಖೆ ಅನುದಾನದಡಿ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಮಾಡಲಾಗಿದೆ.ಶೀಘ್ರ ಬಗೆಹರಿಸದಿದ್ದರೆ ಕಾರ್ಯಕಾರಿಣಿ ಸಮಿತಿಯೊಂದಿಗೆ ನಿಯೋಗ ತೆರಳಲಾಗುವುದು ಎಂದು ಹೇಳಿದರು.
ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದಪ್ಪ,ತಾಲೂಕು ಅಧ್ಯಕ್ಷ ಉಲ್ಲೆಪ್ಪ,ಕಾರ್ಯದರ್ಶಿ ಪ್ರಕಾಶ್,ಉಪಾಧ್ಯಕ್ಷ ದೊಡ್ಡಪ್ಪ,ಸಹಕಾರ್ಯದರ್ಶಿ ಹನುಮಂತೇಶ್,
ಸಂಘಟನಾ ಕಾರ್ಯದರ್ಶಿ ಮೂರ್ತಿ, ಪದಾಧಿಕಾರಿಗಳಾದ ರೂಪ, ತಿಪ್ಪಮ್ಮ ,ಕೃಷ್ಣಪ್ಪ,ಶಕುಂತಲಮ್ಮ,ಮುಖ್ಯೋಪಾಧ್ಯಾಯಚಿಕ್ಕರಂಗಪ್ಪ,ಸೇರಿದಂತೆ ಭಾಗವಹಿಸಿದ್ದರು.