ಸುದ್ದಿವಿಜಯ, ಜಗಳೂರು: ಪೂರ್ವ ಮುಂಗಾರು ಮತ್ತು ಪ್ರಸ್ತುತ ಮುಂಗಾರಿನಲ್ಲಿ ಸುರಿದ ಅಧಿಕ ಮಳೆಯಿಂದ ತಾಲೂಕಿನ ಮೆದಿಕೇರನಹಳ್ಳಿ, ಅಜ್ಜಂಪುರ, ಬೋರಾಪುರ, ಪಾಲನಾಯಕನಕೋಟೆ ಕಾಟೇನಹಳ್ಳಿ ಮತ್ತು ಮಿನುಗರಹಳ್ಳಿ ಗ್ರಾಮಗಳ ಬಿತ್ತನೆ ಭೂಮಿ ಜೌಗು ಪ್ರದೇಶವಾಗಿದ್ದು ಅದನ್ನೇ ನಂಬಿದ ರೈತರಿಗೆ ಪರಿಹಾರ ನೀಡಿ ಎಂದು ರೈತರು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪ್ರಕೃತಿ ವಿಕೋಪ ಅಡಿ ಭಾರಿ ಮಳೆಯಿಂದ ಆದ ನಷ್ಟಕ್ಕೆ ಪರಿಹಾರಕ್ಕೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಿಯಮಗಳ ಅನುಸಾರ ಪರಿಹಾರ ನೀಡಬೇಕು.
ಜಮೀನುಗಳನ್ನೇ ನಂಬಿದ ರೈತರು ಈ ಬಾರಿ ಬಿತ್ತನೆ ಮಾಡಲು ಸಾಧ್ಯವಾಗದಷ್ಟು ನೀರು ಜಮೀನುಗಳಲ್ಲಿ ನಿಂತಿದೆ. ತಕ್ಷಣವೇ ತಹಶೀಲ್ದಾರ್ ಅವರು ವೀಕ್ಷಿಸಿ ಸೂಕ್ತ ಪರಿಹಾರ ನೀಡಬೇಕೆಂದು ವಿವಿಧ ಗ್ರಾಮಗಳ ನೂರಾರು ರೈತ ತಾಲೂಕು ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.