ಸುದ್ದಿ ವಿಜಯ.ಜಗಳೂರು: ತಾಲೂಕಿನ ಸೊಕ್ಕೆ ಹೋಬಳಿಯ ಕ್ಯಾಸೇನಹಳ್ಳಿ ಗ್ರಾಮದಲ್ಲಿ ಶನಿವಾರ ಜಗಳೂರು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಗ್ರಾಮವಾಸ್ಥವ್ಯ ಹಮ್ಮಿಕೊಂಡಿದ್ದಾರೆ.
ಸರಕಾರ ಸುತ್ತೊಲೆಯಂತೆ ಗ್ರಾಮದಲ್ಲಿ ತಂಗಲಿರುವ ಅವರು. ‘ಸರಕಾರದ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ.
ವಸತಿ, ನೈರ್ಮಲ್ಯ, ಕುಡಿಯುವ ನೀರು, ಸಾರಿಗೆ, ರಸ್ತೆ ಸಮಸ್ಯೆ, ವೃದ್ಧಾಪ್ಯ ವೇತನ, ವಿದಾವಾ ವೇತನ, ಅಂಗವಿಕಲ ಮಾಶಾಸನ ಸೇರಿದಂತೆ ಸಾರ್ವಜನಿಕರಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ತಾಲೂಕು ಆಡಳಿತ ಸಜ್ಜಾಗಿದ್ದು. ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಅರ್ಜಿಸಲ್ಲಿಸಬಹುದು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.