ಜಗಳೂರು: ಚುನಾವಣಾ ಆಕ್ಷೇಪಣೆಗಳಿಗೆ ಜ.16 ಕೊನೆಯ ದಿನ!

Suddivijaya
Suddivijaya January 5, 2023
Updated 2023/01/05 at 11:51 AM

ಸುದ್ದಿವಿಜಯ,ಜಗಳೂರು: ಜಿಪಂ, ತಾಪಂ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಇದೇ ಜ.16 ಒಳಗೆ ಸಲ್ಲಿಸಲು ರಾಜ್ಯ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ತಿಳಿಸಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಬಸವನಕೋಟೆ, ಗುರುಸಿದ್ದಾಪುರ, ಸೊಕ್ಕೆ, ಹೊಸಕೆರೆ, ಅಣಬೂರು, ಹಿರೇಮಲ್ಲನಹೊಳೆ,

ಹನುಮಂತಾಪುರ, ಕೆಚ್ಚೇನಹಳ್ಳಿ, ಪಲ್ಲಾಗಟ್ಟೆ, ಅಸಗೋಡು, ಬಿಳಿಚೋಡು, ದೇವಿಕೆರೆ, ಗುತ್ತಿದುರ್ಗ, ಬಿದರಕೆರೆ, ತೋರಣಗಟ್ಟೆ, ದೊಣ್ಣೆಹಳ್ಳಿ, ಸೇರಿದಂತೆ 16 ತಾಲೂಕು ಪಂಚಾಯಿತಿ ಕ್ಷೇತ್ರಗಳು ಮತ್ತು ಸೊಕ್ಕೆ, ಅಣಬೂರು, ಬಿಳಿಚೋಡು, ದೊಣ್ಣೆಹಳ್ಳಿ ಜಿಪಂ ಕ್ಷೇತ್ರಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಿದರು.

 ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
 ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಕ್ಷೇಪಣಾ ಅರ್ಜಿಯನ್ನು ಆನ್ ಲೈನ್ ವೆಬ್ ಸೈಟ್ ವಿಳಾಸ  http://rdpr.Karnataka.gov.in./rdc/public/” ಅಥವಾ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್,2 ನೇ ಮಹಡಿ,ಕೊಠಡಿ ಸಂಖ್ಯೆ 222/ಂ ಬಹುಮಡಿ ಕಟ್ಟಡ ಅಂಬೇಡ್ಕರ್ ವೀಧಿ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬಹುದು ಎಂದರು.

ಮತದಾರರ ಪಟ್ಟಿಗೆ ಹೊಸ ಸೇರ್ಪಡೆಗೆ ಅವಕಾಶ: ಅರಸೀಕೆರೆ ವಿಧಾನ ಸಭಾ ಕ್ಷೇತ್ರದ 262 ಬೂತ್ ಗಳಲ್ಲಿ ಒಟ್ಟು 189209 ಮತದಾರರಿದ್ದು, ಗಂಡು 95928 ಜನ ಹೆಣ್ಣು 93269, ಜನ ಇತರೆ 12 ಜನ, ಒಟ್ಟು 189209 ಜನ ಮತದಾರರನ್ನೊಳಗೊಂಡಿದೆ. ದಿನಾಂಕ: 9/11/2022ರಿಂದ 5/1/2023 ರವರೆಗೆ ಒಟ್ಟು 3476 ಮತದಾರರು ಹೊಸಸೇರ್ಪಡೆಗೊಂಡಿದ್ದಾರೆ.

ಉಳಿದ ಅರ್ಹರು ಅರ್ಜಿಸಲ್ಲಿಸಿ ಮತದಾರರ ಪಟ್ಟಿಗೆ ಹೊಸಸೇರ್ಪಡೆ ಹಾಗೂ ಪರಿಷ್ಕರಣೆಗೆ ಅವಕಾಶವಿದೆ ಕ್ಷೇತ್ರದ ಜನರು ಸದುಪಯೋಗಪಡೆದುಕೊಳ್ಳಬೇಕು ಎಂದರು.

ಕ್ಷೇತ್ರದಲ್ಲಿ ವಿಶೇಷ ವಿಕಲಚೇತನರು ಒಟ್ಟು 2329 ಮತದಾರರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ವಾಹನ ಇತರೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಶಿರಸ್ತೆದಾರ ಚಂದ್ರಪ್ಪ, ಗ್ರಾಮಲೆಕ್ಕಾಧಿಕಾರಿ ಲಂಕೇಶ್, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!