ಸುದ್ದಿವಿಜಯ,ಜಗಳೂರು: ತಿಂಗಳು ಕಳೆದರೂ ಟಿಸಿ ಕೊಡದಿದ್ದಕ್ಕೆ ಮುತ್ತಿಗೆ ವರದಿ ಸುದ್ದಿವಿಜಯ ವೆಬ್ ನ್ಯೂಸ್‍ನಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಜಗಳೂರು ಬೆಸ್ಕಾಂ ಇಲಾಖೆ ಅಧಿಕಾರಿಗಳು ಶನಿವಾರ ಒಂದೇ ದಿನ 40 ಫಲಾನುಭವಿ ರೈತರಿಗೆ ವಿದ್ಯುತ್ ಪರಿವರ್ತಕ ವಿತರಣೆ ಮಾಡಿದ್ದರೆ.
ಶುಕ್ರವಾರ ವಿದ್ಯುತ್ ಟ್ರ್ಯಾನ್ಸ್ ಫಾರ್ಮರ್ ಘಟಕಕ್ಕೆ ಮುತ್ತಿಗೆ ಹಾಕಿದ್ದ ರೈತರ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ರೈತರಿಗೆ ಟಿಸಿಗಳನ್ನು ವಿತರಣೆ ಮಾಡಿದ್ದಾರೆ. ಬಿಸಿಲಿನಿಂದ ಬಸವಳಿಯುತ್ತಿದ್ದ ಬೆಳೆಗಳಿಗೆ ವಿದ್ಯುತ್ ಇಲ್ಲದೇ ಒಣಗಿದ್ದವು. ಬಿದರಕೆರೆ, ನಿಬಗೂರು, ಮಠದ ದ್ಯಾಮವ್ವನಹಳ್ಳಿ, ಎಚ್.ಎಂ.ಹೊಳೆ, ಪಲ್ಲಾಗಟ್ಟೆ ಸೇರಿದಂತೆ ಅನೇಕ ಗ್ರಾಮಗಳ ನೂರಾರು ರೈತರು ಟಿಸಿ ಕೊಡುವಂತೆ ಒತ್ತಾಯಿಸಿದರೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಖ್ಯಾರೇ ಅಂದಿರಲಿಲ್ಲ.

ಸುದ್ದಿ ಪ್ರಕಟವಾಗುತ್ತಿದ್ದಂತೆ ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಿಯಮಗಳ ಅನುಸಾರ ಟಿಸಿಗಳನ್ನು ವಿತರಣೆ ಮಾಡಲಾಗಿದೆ. ಟಿಸಿಗಳ ವಿತರಣೆಯಿಂದ ಅನೇಕ ರೈತರಿಗೆ ಸಂತೋಷವಾಗಿದ್ದು ಸುದ್ದಿವಿಜಯ ವೆಬ್ ನ್ಯೂಸ್‍ಗೆ ಧನ್ಯವಾದ ಅರ್ಪಿಸಿದ್ದಾರೆ.
ಟಿಸಿಗಳನ್ನು ತುರ್ತಾಗಿ ವಿಲೇವಾರಿ ಮಾಡಿದ್ದೇವೆ:
ಅಗತ್ಯವಿರುವ ಟಿಸಿಗಳನ್ನು ತುರ್ತಾಗಿ ವಿಲೇವಾರಿ ಮಾಡಿದ್ದೇವೆ. ಸುಟ್ಟಿರುವ ಟಿಸಿಗಳನ್ನು ಆದಷ್ಟು ಬೇಗ ರಿಪೇರಿ ಮಾಡಿಸಿ ಉಳಿದ ಗ್ರಾಮಗಳ ರೈತರಿಗೆ ವಿತರಣೆ ಮಾಡಲಾಗುವುದು. ಹೊಸ ಟಿಸಿಗಳನ್ನು ನೀಡಿ ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಟಿಸಿಗಳು ಬಂದ ತಕ್ಷಣವೇ ರೈತರಿಗೆ ವಿತರಣೆ ಮಾಡಲಾಗುವುದು. ಶನಿವಾರ 40 ಟಿಸಿಗಳನ್ನು ವಿತರಣೆ ಮಾಡಿದ್ದೇವೆ ಎಂದು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಮಾಹಿತಿ ನೀಡಿದರು.