ಮರೇನಹಳ್ಳಿಯಲ್ಲಿ ವೀರಾಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆ

Suddivijaya
Suddivijaya November 5, 2022
Updated 2022/11/05 at 11:57 AM

ಸುದ್ದಿವಿಜಯ ಜಗಳೂರು.ಪ್ರತಿಯೊಂದು ಕ್ಷೇತ್ರದಲ್ಲೂ ತನಗೆ ಮೆಟ್ಟಿಲಾದ, ಬೆಳವಣಿಗೆಗೆ ಕಾರಣನಾದ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಮರೆಯದೇ ಆತನನ್ನು ದೈವತ್ವದೊಳಗೆ  ಗುರುವಿನ ಸ್ಥಾನದಲ್ಲಿಟ್ಟುಕೊಂಡರೇ ಆತನ ಪ್ರಗತಿ ಸಾದ್ಯವಾಗುತ್ತದೆ ಎಂದು  ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ  ಶಿವಾಚರ‍್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಶನಿವಾರ  ವೀರಾಂಜನೇಯಸ್ವಾಮಿ ದೇವಸ್ಥಾನ ಲೋಕರ‍್ಪಣೆ, ನೂತನ ವಿಗ್ರಹ ಪುನರ್‌ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ  ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಅಭಿಷೇಕ  ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾತಿ, ಜನಾಂಗ, ರ‍್ಮದವರು  ಅನ್ನುವ ಬದಲಾಗಿ  ನಾವೆಲ್ಲರೂ ಈ ಭಾರತಾಂಭೆಯ ಸತ್ಪ್ರಜೆಗಳು ಎಂಬ ಸಮನ್ವಯ ಭಾವ  ಎಲ್ಲರಲ್ಲೂ ಒಡಮೂಡುವಂತಾಗಲೀ ಎಂದು ಹಾರೈಸಿದರು.
ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಐಕ್ಯತೆಯನ್ನು ಕಾಣುವ ದೇಶ ಭಾರತದಲ್ಲಿ ೩೩ ಕೋಟಿ ದೇವರುಗಳಿರುವುದಾಗಿ ಶಾಸ್ತ್ರದಲ್ಲಿದೆ. ಒಂದೊಂದು ದೇವರನ್ನು ಒಂದೊಂದು ರ‍್ಗದವರು ಪೂಜಿಸುತ್ತಾರೆ. ಆದರೆ ಗಣೇಶ ಮತ್ತು ಆಂಜನೇಯ ಇಬ್ಬರು ದೇವರುಗಳಿಗೆ ಯಾವುದೇ ಜಾತಿ, ಭೇದವಿಲ್ಲ, ಜನಾಂಗ, ಶಾಸ್ತ್ರ, ರ‍್ಮ ಭೇದವಿಲ್ಲ. ಎಲ್ಲರ ಈ ದೇವರನ್ನು ಪೂಜಿಸುತ್ತಾರೆ ಎಂದರು.

ಭಕ್ತಿ ನಿಷ್ಠೆಯನ್ನು ಒಂದು ಪೀಠಕ್ಕೆ ಕೊಟ್ಟು, ಪೀಠವನ್ನು ಆಪತ್ತಿನಿಂದ  ಪಾರು ಮಾಡಿ ಸೈನಿಕರಂತೆ ಪ್ರಾಣ ತ್ಯಾಗ ಮಾಡಿದ  ಜನಾಂಗ  ವಾಲ್ಮೀಕಿ ಸಮಾಜವಾಗಿದೆ. ಉಜ್ಜಯಿನಿ ಪೀಠದ ಪರಮ ಶಿಷ್ಯರು ವಾಲ್ಮೀಕಿ ಬಂಧುಗಳು, ಚಿತ್ರದರ‍್ಗದ ನಾಯಕರು,  ಪಾಳೆಗಾರರು, ಹರಪನಹಳ್ಳಿ ಪಾಳೆಗಾರರು ಇವರೆಲ್ಲರಿಗೂ ರಾಜ ಗುರುಗಳು ಉಜ್ಜಯಿನಿ ಪೀಠದ ಜಗದ್ಗುರುಗಳಾಗಿದ್ದರು. ರಾಮಯಾಣ ಮೊಟ್ಟಮೊದಲು ರಚನೆಯಾಗಿದ್ದು ಮರ‍್ಷಿ ವಾಲ್ಮಕಿ ಅವರಿಂದ ಸಾಮಾನ್ಯ ವ್ಯಕ್ತಿಯಾಗಿ ನಾರದರ ರ‍್ಶನದಿಂದ ಬದಲಾಗಿ ಹುತ್ತದಲ್ಲಿ ತಪ್ಪಸ್ಸು ಮಾಡಿ ಜ್ಞಾನೋದಯ ಪಡೆದುಕೊಂಡು ರಾಮಾಯಣ ಮಹಾಕಾವ್ಯ ಬರೆದು ಶ್ರೆಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ರಾಮನ ಭಕ್ತ ಹನುಮಂತ ಲೋಕ ಪೂಜ್ಯನಾದ:
ರಾಮಮಂದಿರ ಕಟ್ಟಲು ಇಷ್ಟೊಂದು ರ‍್ಷಗಳು ಬೇಕಾಯಿತು. ರಾಮನನ್ನು ನಿಷ್ಕಲ್ಮಷವಾಗಿ ಸೇವೆ ಮಾಡಿದ ಹನುಮಂತ ಇಂದು ಲೋಕ ಪೂಜ್ಯನಾಗಿದ್ದಾನೆ. ದೇಶದಲ್ಲಿ ರಾಮ ಮಂದಿರ ಎಷ್ಟಿದೆ ಎಂಬುವುದು ಗೊತ್ತಿಲ್ಲ ಆದರೆ ಆಂಜನೇಸ್ವಾಮಿ ದೇವಸ್ಥಾನಗಳಿಲ್ಲದ ಊರುಗಳಿಲ್ಲ.  
ಆಂಜನೇಯಸ್ವಾಮೀ ಮೂತಃ ದೇವರಲ್ಲಾ, ಸಾಮಾನ್ಯ ಒಬ್ಬ ನರ ವಾನರ, ಸಣ್ಣ ಸೇನೆಯ ದಂಡನಾಯಕ, ರಾಜ್ಯಕ್ಕೆ ರಾಮನ ಪ್ರವೇಶ ಆದಾಗ ರಾಮ ಸೇವೆಗಾಗಿ ಹನುಮಂತನನ್ನು ನೇಮಕ ಮಾಡಲಾಗುತ್ತದೆ. ರಾಮನ ರ‍್ಶನದ ನಂತರ ಹನುಮಂತನ ಬಾಳಿನೊಳಗೆ ದೊಡ್ಡ ಸಾಕ್ಷಾತ್ಕಾರವಾಗುತ್ತದೆ. ರಾಮನಲ್ಲಿ ಭಗವಂತನನ್ನು ಕಾಣುತ್ತಾನೆ. ಆಕ್ಷಣದಿಂದಲೇ ಬದಲಾಗಿ ಶ್ರೇಷ್ಠ ಭಕ್ತನಾಗುತ್ತಾನೆ. ಯಾವ ವ್ಯಕ್ತಿ ತಳಮಟ್ಟದಿಂದ ನರ‍್ಮಲ ಭಾವನೆ, ನಿರಾಕಾರ ಗುಣದಿಂದ , ಅಹಂಕಾರವನ್ನು ದೂರ ಮಾಡಿ ಪರಮಾತ್ಮನಿಂದಲೇ ನಾನು ಎಂಬ ಭಾವದೊಳಗೆ ಭಕ್ತಿಯಲ್ಲಿ ತಲ್ಲೀನನಾಗುತ್ತೇನೆಯೋ ಅವನ್ನು ಭಗವಂತನು  ಕೈ ಎತ್ತಿ ಹಿಡಿಯುತ್ತಾನೆ ಎನ್ನುವುದಕ್ಕೆ ಆಂಜನೇಯನೇ ಸಾಕ್ಷಿಯಾಗಿದ್ದಾನೆ”   

ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ  ಶಿವಾಚರ‍್ಯ ಮಹಾಸ್ವಾಮಿ

ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ದೇವಸ್ಥಾನಗಳ ನರ‍್ಮಾಣದಿಂದ ಭಕ್ತಿ, ಭಾವೈಕ್ಯತೆ ಮೂಡಿಸುತ್ತದೆ. ಕಳೆದ

೧೦ ರ‍್ಷಗಳ  ಪ್ರಯತ್ನ ಫಲವಾಗಿ ದೇವಸ್ಥಾನ ಇಂದು ಲೋಕರ‍್ಪಣೆಯಾಗಿದೆ. ದೇವಸ್ಥಾನ ಕಾಂಪೌಂಡ್‌ಅಭಿವೃದ್ದಿಗೆ ೧೦ ಲಕ್ಷ ಅನುದಾನ ನೀಡಲಾಗುವುದು ಎಂದರು.

ಮಾಜಿ ಶಾಸಕ ಎಚ್.ಪಿ ರಾಜೇಶ್‌ಮಾತನಾಡಿ, ಮರೇನಹಳ್ಳಿ ಮೈಸೂರು ರಾಜರ ಕಾಲದಲ್ಲಿ ­ ದಿವಾನರಾಗಿದ್ದ ಇಮಾಂ ಸಾಹೇಬರು ಜನಿಸಿದ ಊರಾಗಿದ್ದು, ರಾಜಕೀಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಗ್ರಾಮಗಳ ಅಭಿವೃದ್ದಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾದ್ಯ. ಈ ಗ್ರಾಮದಲ್ಲಿ ಅನೇಕಾರು ಹುದ್ದೆಗಳನ್ನು ಹೊಂದಿದ್ದರೂ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ ಎಂದರು.

ಕಾಂಗ್ರೆಸ್‌ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ  ಮಾತನಾಡಿ, ರಾಜಕೀಯವಾಗಿ ಮರೇನಹಳ್ಳಿ ಗ್ರಾಮ ಗಮನ ಸೆಳೆದಿದೆ. ಇಮಾಂ ಸಾಹೇಬರು, ಎಂ. ಬಸಪ್ಪ, ಕೆ.ಪಿ ಪಾಲಯ್ಯ ಸೇರಿದಂತೆ ಅನೇಕರು ಕೊಟ್ಟಿದೆ. ಜಗಳೂರಿನ ಇಮ್ಮಣ್ಣನೆಂದೆ ಖ್ಯಾತಿ ಪಡೆದ ಇಮಾಂ ಸಾಹೇಬರು ಹುಟ್ಟಿದ ಊರಾಗಿದೆ ಎಂದರು.

ಅಡ್ಡಪಲ್ಲಕ್ಕಿ ಉತ್ಸವ:
ಗ್ರಾಮದಲ್ಲಿ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ  ಶಿವಾಚರ‍್ಯ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ  ಸಡಗರ ಸಂಭ್ರಮದಿಂದ  ನೆರವೇರಿತು.
ಪ್ರತಿಯೊಂದು ಬೀದಿ ಬೀದಿಗಳಲ್ಲೂ ಸಂಚರಿಸಿದ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರು ಶಿರಷ್ಠಾಂಗ ಪ್ರಣಾಮಗಳನ್ನು  ರ‍್ಪಿಸುತ್ತಾ ಶ್ರೀಗಳ ಆಶರ‍್ವಾದ ಪಡೆದುಕೊಂಡರು. ಇದೇ ಮೊದಲ ಬಾರಿಗೆ ಅಡ್ಡ ಪಲ್ಲಕ್ಕಿ ಉತ್ಸವ  ನಡೆದಿದ್ದು ವಿಶೇಷವಾಗಿತ್ತು. ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳು ಗಮನ ಸೆಳೆದವು.

ಈ ವೇಳೆ ಮುಸ್ಟೂರು ಓಂಕಾರೇಶ್ವರ ಮಠದ  ರುದ್ರಮುನಿ ಶಿವಾಚರ‍್ಯ ಮಹಾಸ್ವಾಮಿ,ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚರ‍್ಯ ಮಹಾಸ್ವಾಮಿ, ಕಾನಮಡಗು ದಾಸೋಹ ಮಠದ  ಐಮಡಿ  ಶರಣರ‍್ಯರು,ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಮಾಜಿ ತಾ.ಪಂ ಅಧ್ಯಕ್ಷ ಯು.ಜಿ ಶಿವಕುಮಾರ್‌, ಮಾಜಿ ಸದಸ್ಯ ಟಿ. ಬಸವರಾಜ್‌, ಜಿ.ಪಂ ಮಾಜಿ ಅಧ್ಯಕ್ಷೆ ನಾಗರತ್ನ, ಮಾಜಿ  ಸದಸ್ಯರಾದ ಎಸ್.ಕೆ ರಾಮರೆಡ್ಡಿ,  ಜಿ.ಪಂ ಸದಸ್ಯ ಸಿ. ಲಕ್ಷ್ಮಣ್‌, ಬ್ಲಾಕ್‌ಕಾಂಗ್ರೆಸ್‌ಮಾಜಿ ಅಧ್ಯಕ್ಷರಾದ ಸುರೇಶ್‌ಗೌಡ,  ತಿಪ್ಪೇಸ್ವಾಮಿಗೌಡ, ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಶಿವಕುಮಾರ್‌ಸ್ವಾಮಿ, ಮಾಜಿ ಗ್ರಾ.ಪಂ ಉಪಾಧ್ಯಕ್ಷ ನಜೀರ್‌ಅಹಮದ್‌ಸೇರಿದಂತೆ ಮತ್ತಿತರಿದ್ದರು.

(

Share this Article
Leave a comment

Leave a Reply

Your email address will not be published. Required fields are marked *

error: Content is protected !!