ಸುದ್ದಿವಿಜಯ, ಜಗಳೂರು: ಅತ್ಯಂತ ಹಿಂದುಳಿದ ಜಗಳೂರು ತಾಲೂಕಿಗೆ ಜಾರಿಯಾಗಿರುವ ಅಪ್ಪರ್ ಭದ್ರಾ ಕಾಮಗಾರಿ ಶೀಘ್ರವೇ ಚಾಲನೆ ನೀಡುವಂತೆ ಆಗ್ರಹಿಸಿ ಭದ್ರಾಮೇಲ್ದಂಡೆ ಹೊರಾಟ ಸಮಿತಿ ಸದಸ್ಯರುಗಳು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮೂಲಕ ಸೋಮವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹೊರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಓಬಳೇಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಭದ್ರಾಮೇಲ್ದಂಡೆ ನೀರಾವರಿಗಾಗಿ ನಿರಂತರ ಹೊರಾಟ ನಡೆಸುತ್ತಾ ಬಂದಿದ್ದು.
ಹೊರಾಟದ ಫಲವಾಗಿ ಸಕಾರಗೊಂಡು ಜೂನ್ 2021 ರಲ್ಲಿ ಟೆಂಡರ್ ಪ್ರಕ್ರಿಯೆಗೊಂಡಿದ್ದು, ಇದುವರೆಗೂ ತಾಲೂಕಿನಲ್ಲಿ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಆರಂಭವಾಗಿಲ್ಲ.
ಇದರಿಂದ ಈ ಭಾಗದ ಜನರ ಬದುಕು ದುಸ್ತರವಾಗುತ್ತಿರುವುದನ್ನು ಸರಕಾರ ಗಮನಹರಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಎಸ್.ವಿ.ರಾಮಚಂದ್ರ ಅವರು ಸಾರ್ವಜನಿಕ ಹಾಗೂ ಬಹಿರಂಗ ಸಭೆಗಳಲ್ಲಿ ಡಿಸೆಂಬರ್ ಮತ್ತು ಜನವರಿ 2023 ರ ಒಳಗೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಹೇಳಿಕೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ಇದುವರೆಗೆ ಭರವಸೆಗಳು ಹುಸಿಯಾಗಿವೆ.
ತುರ್ತಾಗಿ ಆರಂಭಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನಜಾಗೃತಿಗೊಳಿಸಿ ರಾಷ್ಟೀಯ ಹೆದ್ದಾರಿ 13 ರನ್ನು ಬಂದ್ ಮಾಡಲಾಗುವುದು.ಮುಂದಿನ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಸಂದರ್ಭದಲ್ಲಿ ಹೊರಾಟಸಮಿತಿ ಸದಸ್ಯರಾದ ಅನ್ವರ್ ಸಾಹೇಬ್, ಬಿ.ನಾಗಲಿಂಗಪ್ಪ, ಮಾದಿಹಳ್ಳಿ ಮಂಜುನಾಥ್, ಪೂಜಾರ್ ಸಿದ್ದಪ್ಪ, ಕಲ್ಲೇಶಪ್ಪ, ಬಸವರಾಜ್, ಕುಬೇಂದ್ರಪ್ಪ, ಕಾಟಪ್ಪ, ಓಬಪ್ಪ, ರಾಜಪ್ಪ ವ್ಯಾಸಗೊಂಡನಹಳ್ಳಿ, ಅಹಮ್ಮದ ಅಲಿ, ಬಡಪ್ಪ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಗಳೂರು ತಹಶೀಲ್ದಾರ್ ಕಚೇರಿಯ ಮುಂದೆ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.