ಸುದ್ದಿವಿಜಯ, ಜಗಳೂರು: ದೇಶದ ಸೇವೆಗಾಗಿ ತಮ್ಮ ಜೀವಿತಾವಧಿಯಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿ ನಿವೃತ್ತರಾದ ಅರೆ ಸೇನಾ ಪಡೆಗಳ ನಿವೃತ್ತ ಸೈನಿಕರಿಗೆ ಹಂತ ಹಂತವಾಗಿ ನಿವೇಶನ ಇಲ್ಲವೇ ಜಮೀನು ಒದಗಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಭರವಸೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಾಜಿ ಅರೆ ಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರ ವಾಸ ಮಾಡಲಿಕ್ಕೆ ಅಥವಾ ಊಳುಮೆ ಮಾಡಲಿಕ್ಕೆ ಜಮೀನು ನೀಡುವ ಸಲುವಾಗಿ ಸರಕಾರಿ ಜಮೀನಿದ್ದರೆ ಪರೀಶಿಲನೆಡೆ ನಡೆಸಿ ಹಂತ ಹಂತವಾಗಿ ಎಲ್ಲರಿಗೂ ವಿತರಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶ ಗಳಲ್ಲಿ ಸರಕಾರಿ ಜಮಿನುಗಳಿದ್ದಾರೆ ಪರೀಶಿಲನೆ ನಡೆಸಿ ಮತ್ತು ಪಟ್ಟಣದ ಸುತ್ತಮುತ್ತ ಜಮೀನು ಇದ್ದರೆ ಹುಡುಕಿ ನಿವೇಶನ ಹಂಚಿಕೆ ಮಾಡುವಾಗ ನಿವೃತ್ತ ಸೈನಿಕರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ತಾಲೂಕಿನ 22 ಗ್ರಾಮ ಪಂಚಾಯಿತಿ ಅಧಿಕಾರಿಗಳ ವ್ಯಾಪ್ತಿಯಲ್ಲಿ ಇರುವ ಸರಕಾರಿ ಜಮೀನು ಇದ್ದರೆ ಅದರ ಬಗ್ಗೆ ವರದಿ ನೀಡಿ ಎಂದು ಪ್ರಭಾರ ಎ.ಡಿ ವಾಸುದೇವ್ ಗೆ ಸೂಚನೆ ನೀಡಿದರು.

ತಾಲೂಕುವ ಮಾಜಿ ಅರೇ ಸೇನಾ ಪಡೆಗಳ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಪ್ರಹ್ಲಾದ್ ರೆಡ್ಡಿ ಮಾತನಾಡಿ, ಸೇವೆಯ ನಂತರ ನಾವು ಸರಕಾರದ ಹಕ್ಕುಗಳಿಗೆ ಹೋರಾಟ ನಡೆಸುತ್ತಿದ್ದೇವೆ. 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರಕಾರ ನಮ್ಮ ಹಕ್ಕುಗಳನ್ನು ಈಡೇರಿಸಿಲ್ಲ. ಜಮೀನು ಇಲ್ಲವೇ ನಿವೇಶನ ನೀಡಿದರೆ ನಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಗೌರವಯುತವಾಗಿ ಬದುಕುತ್ತೇವೆ.
ನೆರೆಯ ಬಳ್ಳಾರಿ, ಚಿತ್ರದುರ್ಗ, ತುಮಕೂರು, ನೆಲ ಮಂಗಲ ಸೇರಿದಂತೆ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ನಿವೃತ್ತ ಸೈನಿಕರಿಗೆ ಜಮೀನು, ನಿವೇಶನ ನೀಡಲಾಗಿದೆ. ನಮ್ಮ ತಾಲೂಕಿನಲ್ಲಿ ಇದುವರೆಗು ನಿವೇಶನ ನೀಡಿಲ್ಲ. ಇನ್ನು ಮುಂದಾದರು ಭೂಮಿ ನೀಡಿದರೆ ಅನುಕೂಲವಾಗಲಿದೆ ಎಂದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ 334 ಎಕರೆ ಸರಕಾರಿ ಜಮೀನು ಇದೆ ಎಂದು ಸಭೆಯ ಗಮನಕ್ಕೆ ತಂದರು.
ತಾಲೂಕಿನ ಐನಳ್ಳಿ ಗ್ರಾಮದಲ್ಲಿ 5 ಎಕರೆ ಜಮೀನಿದ್ದು ಈ ಜಮೀನಿಗೆ ನಕಾಶೆ ರಸ್ತೆ ತೊರಿಸುವಂತೆ ಅರ್ಜಿ ಸಲ್ಲಿಸಿ ವರ್ಷ ಕಳಿದಿವೆ ಇನ್ನೂ ಸಮಸ್ಯೆ ಬಗೆ ಹರಿದಿಲ್ಲ. ನಾವು ಜಮೀನಿನ ಕೆಲಸಕ್ಕೆ ಹೋಗಲು ತೊಂದರೆಯಾಗುತ್ತಿದೆ ಎಂದು ಮಾಜಿ ಸೈನಿಕ ಪಾಲನಾಯಕನ ಕೋಟೆ ತಿಪ್ಪಣ್ಣ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ, ಆರೋಗ್ಯಾಧಿಕಾರಿ ಕಿಫಾಯಾತ್, ರಾಮಚಂದ್ರ ಮತ್ತು 20ಕ್ಕೂ ಹೆಚ್ಚು ನಿವೃತ್ತ ಸೈನಿಕರು ಇದ್ದರು.