ಜಗಳೂರು:ರಾಮಕೃಷ್ಣನ ಸಾವು ನಿಸ್ಪಕ್ಷಪಾತ ತನಿಖೆಯಾಗಲಿ-ಮಾಜಿ ಶಾಸಕ ಹೆಚ್.ಪಿ.ರಾಜೇಶ್

Suddivijaya
Suddivijaya January 14, 2023
Updated 2023/01/14 at 1:09 PM

ಸುದ್ದಿವಿಜಯ, ಜಗಳೂರು: ಸಮಾಜದ ನ್ಯಾಯಕ್ಕಾಗಿ ಹೋರಾಟ ಮಾಡಿದ ಮೃತ ರಾಮಕೃಷ್ಣ ಅವರ ಸಾವು ಅನಿರೀಕ್ಷಿತ ಕುಟುಂಬದ ನೋವಿಗೆ ಸ್ಪಂದಿಸಿ ನಿಮ್ಮ ಜೊತೆ ಇಡೀ ತಾಲ್ಲೂಕು ಜನತೆ ಇದೆ. ನಿಷ್ಪಕ್ಷವಾದ ತನಿಖೆ ನೆಡೆಸಿ ತಪ್ಪಿತ್ತಸ್ಥರಿಗೆ ಕಠಿಣ ಕಾನೂನು ಶಿಕ್ಷಯಾಗಲಿದೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ವಿಶ್ವಾಸ ವ್ಯಕ್ತಪಡಿಸಿದರು

ತಾಲ್ಲೂಕಿನ ಗೌರಿಪುರ ಗ್ರಾಮದ ಮೃತ ರಾಮಕೃಷ್ಣ ಅವರ ನಿವಾಸಕ್ಕೆ ಶನಿವಾರ ತೆರಳಿ ಕುಟುಂಬಸ್ಥರಿಗೆ ಸ್ವಾಂತಾನ ಹೇಳಿ ಮಾತನಾಡಿದರು. ತಾಲ್ಲೂಕಿನಲ್ಲಿ ಇಂತಹ ಘಟನೆ ನೆಡೆಯಬಾರದಿತ್ತು. ಇದಕ್ಕೆ ನಮ್ಮ ವಿಷಾದವಿದೆ. ಯಾವುದೇ ಪಕ್ಷ ಜಾತಿ ಬೇದ ಎನ್ನದೇ ಎಲ್ಲರೂ ಸೇರಿ ಈ ಕೃತ್ಯವನ್ನ ಖಂಡಿಸಿ ಹೋರಾಟ ಮಾಡಿರಿವುದು ರಾಮಕೃಷ್ಣ ಸಾವಿಗೆ ನ್ಯಾಯ ಸಿಗಲಿದೆ ಎಂದರು.

ಈಗಾಗಲೇ ಪ್ರಮುಖ ಆರೋಪಿಗಳು ಶರಣಾಗತಿ ಯಾಗಿದ್ದು ಇನ್ನು ಕೆಲವರನ್ನ ಶೀಘ್ರವೇ ಬಂದಿಸುತ್ತೇವೆ ಎಂದು ಪೆÇೀಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ಹಂತದಲ್ಲಿ ಇರುವುದರಿಂದ ಗ್ರಾಮದ ಜನತೆ ಹಾಗು ಸರ್ವ ಸಮಾಜಗಳು ಶಾಂತಿ ಕಾಪಾಡಬೇಕು ಎಂದು ಮನವಿಮಾಡಿದರು.

ಮೃತ ರಾಮಕೃಷ್ಷ ಅವರ ತಂದೆ ಪ್ರಕಾಶ್ ಮಾತನಾಡಿ, ನನ್ನ ಮಗನ ಹತ್ಯೆಗೆ ಭ್ರಷ್ಟಾಚಾರವೇ ಪ್ರಮುಖ ಕಾರಣ. ಜನಸಾಮಾನ್ಯರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ. ನನ್ನ ಮಗ ಇಂದು ಹುತಾತ್ಮನಾಗಿದ್ದಾರೆ.

ಅಕ್ರಮ ಸಂಪಾದನೆ ಮಾಡುವವರ ವಿರುದ್ಧ ಕಾನೂನು ಕ್ರಮವಾಗಬೇಕು. ಮತ್ತು ಹತ್ಯೆ ಗೈದವರಿಗೆ ತಕ್ಕ ಶಿಕ್ಷೆಯಾಗಬೇಕು.ಪಿಡಿಓ ನಾಗರಾಜ್ ಸೇವೆಯಿಂದ ವಜಾಗೊಂಡು ಅಕ್ರಮ ವಾಗಿ ಸಂಪಾದಿಸಿದ ಹಣ ಆಸ್ತಿ ಸರಕಾರಕ್ಕೆ ವಾಪಾಸಾದಾಗ ಮಾತ್ರ ನನ್ನ ಮಗನ ಸಾವಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಆಕ್ರಂದನ ವ್ಯಕ್ತ ಪಡಿಸಿದರು.

ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಸಮಾಜಗಳು ಸಹೋದರರಂತೆ ಬದುಕುತ್ತಿದ್ದಾರೆ. ಇಂತಹ ಹೇಯ ಕೃತ್ಯಗಳು ಖಂಡನೀಯ ಮುಂದಿನ ದಿನಗಳಲ್ಲಿ ಸೂಕ್ತ ನ್ಯಾಯಕ್ಕೆ ನಾವು ಸದಾ ಕುಟುಂಬದ ಜೊತೆ ಇರುತ್ತೇವೆ. ಆತ್ಮ ವಿಶ್ವಾಸ ಕಳೆದು ಕೊಳ್ಳದಿರಿ ಎಂದು ಸಂತೈಸಿದರು.

  ಜಗಳೂರು ತಾಲೂಕಿನ ಗೌರಿಪುರದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ನಿವಾಸಕ್ಕೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
  ಜಗಳೂರು ತಾಲೂಕಿನ ಗೌರಿಪುರದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ನಿವಾಸಕ್ಕೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರು ಸೂರಲಿಂಗಪ್ಪ , ಎಸ್.ಬಿ.ಕುಬೇಂದ್ರಪ್ಪ, ಡಿ.ಆರ್. ಹನುಮಂತಪ್ಪ, ಸಿ.ಡಿ. ಹನುಮಂತಪ್ಪ, ವಿವಿದ ಸಮಾಜದ ಮುಖಂಡರು ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಮಾಳಮ್ಮನಹಳ್ಳಿ ವೆಂಕಟೇಶ್, ಷಣ್ಮುಖ ಸ್ವಾಮಿ, ಗೋಡೆ ಪ್ರಕಾಶ್, ಮರೇನಹಳ್ಳಿ ಶೇಖರಪ್ಪ, ಸಿದ್ದಣ್ಣ, ಬುಳ್ಳನಹಳ್ಳಿ ನಾಗರಾಜ್, ಶಿವಮೂರ್ತಿ ದಾಸಣ್ಣ, ರೇವಣ್ಣ, ಕುಮಾರ ನಾಯ್ಕ ಸೇರಿದಂತೆ ಕ್ಯಾಸೇನಹಳ್ಳಿ ಗೌರಿಪುರ ಕಾಂಗ್ರೆಸ್ ಮುಖಂಡರು ಗ್ರಾಮಸ್ಥರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!