ಸುದ್ದಿವಿಜಯ, ಜಗಳೂರು: ಕ್ಷೇತ್ರದ ಅಭಿವೃದ್ಧಿಬಗ್ಗೆ ಸಂಕಲ್ಪ ಮಾಡಬೇಕಿದ್ದ ಶಾಸಕ ಎಸ್.ವಿ.ರಾಮಚಂದ್ರ ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ಮಾಡುವ ಮೂಲಕ ಸರಕಾರಿ ಹಣವನ್ನ ಪಕ್ಷದ ಕಾರ್ಯಕ್ರಮಕ್ಕೆ ಬಳಸಿಕೊಂಡು ಕ್ಷೇತ್ರದ ಮತದಾರರ ಸಂಕಷ್ಟಯಾತ್ರೆ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್
ಆರೋಪಿಸಿದರು. ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕುವರೆ ವರ್ಷಗಳಲ್ಲಿ ಕ್ಷೇತ್ರಕ್ಕೆ ಮತ್ತು ಹಳ್ಳಿಗಳಿಗೆ ಯಾವುದೇ ಅನುದಾನ ನೀಡದೆ ಅಭಿವೃದ್ದಿ ಕಾರ್ಯಗಳನ್ನ ಮಾಡದೆ ಬರೀ ಸುಳ್ಳು ಹೇಳಿಕೊಂಡು ತಿರುಗಾಡುವ ಶಾಸಕರು ಚುನಾವಣೆ ಹತ್ತಿರ ಬಂದಾಗ ವೈಯುಕ್ತಿಕ ಪ್ರಚಾರಕ್ಕಾಗಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿ ಅಭಿವೃದ್ದಿ ಕಾರ್ಯಕ್ರಮಗಳ ಬದಿಗೊತ್ತಿದ್ದಾರೆ ಸರಕಾರದ ವಿವಿಧ ಇಲಾಖೆ ಅಧಿಕಾರಿಗಳು ಹಾಗು ಸ್ಥಳೀಯ ಗ್ರಾ.ಪಂ.ಅನುದಾನವನ್ನ ದುರ್ಬಳಕೆ ಮಾಡಿಕೊಂಡು ಪಕ್ಷದ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆರಂಭದಲ್ಲಿ ನೀರು ಸೂರು ನನ್ನ ಮೊದಲ ಆದ್ಯತೆ ಎಂದು ಹೇಳಿದ ಶಾಸಕ ರಾಮಚಂದ್ರ ಜನತೆಗೆ ನಾಲ್ಕು ವರೆ ವರ್ಷ ಕಳೆದರೂ ನೀರು ಸೂರು ಇಲ್ಲ ಈ ವೈಫಲ್ಯ ಮುಚ್ಚಿಕೊಳ್ಳಲು ಜನಸಂಕಲ್ಪ ಯಾತ್ರೆಯಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿ ಜನರಿಗೆ ಮಂಕುಬೂದಿ ಎರಚಲು ಹೊರಟಿದ್ದಾರೆ ಎಂದರು. ಒಂದುಬಾರಿ ಶಾಸಕನಾಗಿ 3300 ಕೋಟಿ ಅನುದಾನ ತಂದು ಪ್ರತಿ ಗ್ರಾಮಕ್ಕೂ ಕನಿಷ್ಟ 30 ಲಕ್ಷದಿಂದ ಒಂದು ಕೋಟಿ ವರಿಗೂ ಅನುದಾನ ತಂದು ಅಬಿವೃದ್ದಿ ಮಾಡಿದ್ದೇವೆ ನಾನು. ಈ ಬಗ್ಗೆ ಮಾಹಿತಿ ಕಿರುಹೊತ್ತಿಗೆ ಪುಸ್ತಕ ಜೊತೆಗೆ ಪ್ರತಿ ಗ್ರಾಮದಲ್ಲಿ ಪ್ಲೆಕ್ಸ್ ಹಾಕಿದ್ದೇನೆ ಹಾಲಿ ಶಾಸಕರು ತಾವು ಮೂರು ಬಾರಿ ಶಾಸಕರಾಗಿ ಏನು ಮಾಡಿದ್ದಾರೆ ಎಂಬುದನ್ನ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.
ಜನ ಸಂಕಲ್ಪ ಯಾತ್ರೆ ಯಾವ ಪುರುಷಾರ್ಥಕ್ಕೆ?
ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿತವಾಗಿದೆ ಪ್ರಮುಖ ಇಲಾಖೆಗಳಲ್ಲಿ ಅಧಿಕಾರಿಗಳೇ ಇಲ್ಲ. ಎಲ್ಲಾ ಪ್ರಭಾರ ಆಧಿಕಾರಿಗಳೇ ಇದ್ದಾರೆ ಪೊಲೀಸ್ ಅಧಿಕಾರಿಗಳು ಇಲ್ಲದೆ ಆರು ತಿಂಗಳಾಯಿತು ಶಾಸಕರು ಏನು ಮಾಡಿತ್ತಿದ್ದಾರೆ ಎಂದು ಪ್ರೆಶ್ನಿಸಿದ ಅವರು ಇದೇ 23 ರಂದು ಭಾರತೀಯ ಜನತಾಪಾರ್ಟಿ ವತಿಯಿಂದ ಆಯೋಜಿಸಿರುವ ಜನ ಸಂಕಲ್ಪ ಯಾತ್ರೆ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ.
ನಾಲ್ಕು ವರೆ ವರ್ಷವಾದರು ಒಂದು ವಸತಿ ನೀಡಲಾಗಿಲ್ಲ ಅರ್ಹರಿಗೆ ನಿವೇಶನ ಕೊಟ್ಟಿಲ್ಲ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿಲ್ಲ. ಕೃಷಿ ,ತೋಟಗಾರಿಕೆ , ಅರಣ್ಯ , ಸಮಾಜ ಕಲ್ಯಾಣ , ಪರಿಶಿಷ್ಠ ಕಲ್ಯಾಣ ಇಲಾಖೆಯಲ್ಲಿ ಒಂದಾದರೂ ಸೌಲಭ್ಯ ಕೊಟ್ಟಿಲ್ಲ. ಯಾವುದೇ ಯೋಜನೆ ಜನಸಾಮಾನ್ಯರಿಗೆ ನೀಡಿಲ್ಲ ಶಾಸಕರು ಮಾಡುತ್ತಿರುವ ಯಾತ್ರೆ ನಿಜಕ್ಕೂ ಜನರ ಸಂಕಷ್ಟದ ಯಾತ್ರೆಯಾಗಿದೆ. ಮುಖ್ಯ ಮಂತ್ರಿಗಳು ಇನ್ನಾದರು ಕ್ಷೇತ್ರದ ಕಡೆ ಗಮನ ಹರಿಸಿ ಅಭಿವೃದ್ದಿ ಪಡಿಸಲಿ ಎಂದು ಟೀಕಿಸಿದರು.
ಪಕ್ಷದ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸೇರಿದಂತೆ ಸರ್ಕಾರಿ ನೌಕರರು ಆಶಾ, ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೀರುಗಂಟಿಗಳನ್ನ ಬಳಸಿಕೊಳ್ಳುವ ಮಾಹಿತಿ ಇದೆ. ಶಾಸಕರು ಮೊದಲು ಅವರಿಗೆ ಸಂಬಳ ಕೊಡಿಸುವ ಕಡೆ ಗಮನ ಹರಿಸಲಿ. ಸಂಬಳವಿಲ್ಲದೆ ಆರೇಳು ತಿಂಗಳು ಜೀವನ ಸಾಗಿಸುತ್ತಿದ್ದಾರೆ. ಮೊದಲು ಅವರ ಸಂಕಷ್ಟಗಳನ್ನ ದೂರ ಮಾಡಿ ನಂತರ ಸಂಕಲ್ಪ ಯಾತ್ರೆ ಮಾಡಲಿ ಎಂದು ಹರಿಹಾಯ್ದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ನಮ್ಮ ಸರಕಾರದ ಅವಧಿಯಲ್ಲಿ ನಾವು ಕ್ಷೇತ್ರದ ಜನತೆಗೆ ಕೊಟ್ಟ ಕೊಡುಗೆ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ಆದರೆ ಶಾಸಕರು ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ದಿ ಮಾಡದೇ ಇರುವುದರಿಂದ ಜನಸಂಕಲ್ಪ ಯಾತ್ರೆ ನೆಪದಲ್ಲಿ ಸಂಗೀತ ರಸ ಮಂಜರಿ ಕಾರ್ಯಕ್ರಮ ಆಯೋಜಿಸಿ ಅಭಿವೃದ್ದಿ ಮರೆ ಮಾಚಿದ್ದಾರೆ ಇದು ಸರಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ ಎಂಬುದರ ಬಗ್ಗೆ ಜನ ಗೊಂದಲ್ಲಿದ್ದಾರೆ ಎಂದರು.
ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಗೌಡ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ ಮಾತನಾಡಿದರು. ಸಂದರ್ಭದಲ್ಲಿ ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಾಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಜಿಲ್ಲಾ ಎಸ್ಸಿ ಘಟಕ ಉಪಾಧ್ಯಕ್ಷ ಜಿ.ಎಚ್.ಶಂಭುಲಿಂಗಪ್ಪ, ರಾಜ್ಯ ಎಸ್ಸಿ ಘಟಕ ಸದಸ್ಯ ಸಿ.ತಿಪ್ಪೇಸ್ವಾಮಿ, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಬಿಳಿಚೋಡು ಎಲ್.ಬಿ.ಬೈರೇಶ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ್ರು, ಮುಖಂಡರಾದ ಕುಬೇಂದ್ರಪ್ಪ, ಬಸವಾಪುರ ರವಿಚಂದ್ರ, ಗಿರೀಶ್ ಒಡೆಯರ್, ಬಿಳಿಚೋಡು ವೆಂಕಟೇಶ್, ಸೇರಿದಂತೆ ವಿವಿದ ಘಟಕದ ಅಧ್ಯಕ್ಷರು ಕಾರ್ಯಕರ್ತರು ಇದ್ದರು.