ಜಗಳೂರು: ಪ್ರಗತಿಪರ ಕೃಷಿಕರಿಗೆ ಧರ್ಮಸ್ಥಳ ಸಂಸ್ಥೆಯಿಂದ ಗೊಡಂಬಿ ಸಸಿ ವಿತರಣೆ

Suddivijaya
Suddivijaya November 4, 2023
Updated 2023/11/04 at 11:30 AM

ಸುದ್ದಿವಿಜಯ, ಜಗಳೂರು: ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪರ್ಯಾಯ ಪೇಜಾವರ ಮಠ, ಕರ್ನಾಟಕ ಗೇರು ಉತ್ಪಾದಕರ ಒಕ್ಕೂಟ ಮತ್ತು ಮೂಡಬಿದ್ರೆಯ ವಿಜಯಲಕ್ಷ್ಮೀ ಪ್ರತಿಷ್ಠಾನ ವತಿಯಿಂದ ಕೃಷಿ ವಿಸ್ತರಣೆ ಕಾರ್ಯಕ್ರಮದ ಅಡಿಯಲ್ಲಿ ಸ್ವಸಹಾಯ ಹಾಗೂ ಪ್ರಗತಿ ಬಂಧು ಸದ್ಯರಿಗೆ ಶನಿವಾರ ಗೋಡಂಬಿ ಕೃಷಿ ಕುರಿತು ರೈತರಿಗೆ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗದ ಪ್ರದೇಶಿಕ ನಿರ್ದೇಶಕಿ ಗೀತಾ, ಬರ ಪೀಡಿತ ತಾಲೂಕಿನಲ್ಲಿ ಉತ್ತಮವಾದ ಇಳುವರಿ ಎಂದರೆ ಅದು ಗೊಡಂಬಿ. ಈಗಾಗಲೇ ಸಾಕಷ್ಟು ಬೆಳೆ ಹಾನಿಯಾಗಿದೆ. ಕಡಿಮೆ ನೀರಿನಲ್ಲಿ ಅಧಿಕ ಲಾಭ ಪಡೆಯಬಹುದು.  ಜಗಳೂರಿನ ಪ್ರೇರಣಾ ಟ್ರಸ್ಟ್ ಆವರಣದಲ್ಲಿ ಪ್ರಗತಿಪರ ಕೃಷಿಕರಿಗೆ ಗೋಡಂಬಿಜಗಳೂರಿನ ಪ್ರೇರಣಾ ಟ್ರಸ್ಟ್ ಆವರಣದಲ್ಲಿ ಪ್ರಗತಿಪರ ಕೃಷಿಕರಿಗೆ ಗೋಡಂಬಿ

ಎರಡು ವರ್ಷದಲ್ಲೇ ಈ ಗಿಡ ಫಸಲು ನೀಡುತ್ತದೆ. ಕಚ್ಚಾ ಗೋಡಂಬಿಗೆ ಕೆಜಿಗೆ 100 ರೂ ಇದೆ. ಒಂದು ಗಿಡ 10 ಕೆಜಿ ಗೋಡಂಬಿ ಬೆಳೆಯುತ್ತದೆ. ರೈತರು ಬದುವಿನ ಸುತ್ತ ಹಾಕಿದರೆ ಪರಿಸರ ವೃದ್ಧಿಯ ಜೊತೆಗೆ ಲಾಭಾಂಶವನ್ನು ಕಾಣಬಹುದು. ಅತಿಯಾದ ನೆರಳು ಇರುವುದರಿಂದ ಮರದ ಕೆಳಗೆ ಕಳೆ ಬೆಳೆಯುವುದಿಲ್ಲ. ಕೀಟ ನಾಶಕ ಸಿಂಪಡಣೆಯು ತಪ್ಪುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಒಂದು ವಿದೇಶಿ ವಿನಿಮಯ ಗಳಿಸುವ ವಿಶೇಷ ವಾಣಿಜ್ಯ ಬೆಳೆಯಾಗಿ ಗೋಡಂಬಿಯನ್ನು ಗುರುತಿಸಲ್ಪಡುತ್ತದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ, ಒರಿಶಾ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ.ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಪ್ರಮಾಣದ ಸಕ್ಕೆರೆ ಹೊಂದಿರುವ ಗೋಡಂಬಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆ ಅವರು ಕರ್ನಾಟಕ ರಾಜ್ಯದ ರೈತರು ಗೋಡಂಬಿ ಕೃಷಿ ಬೆಳೆಯಲು ಉತ್ತೇಜನ ನೀಡುತ್ತಿದ್ದಾರೆ. ತಾಲ್ಲೂಕಿನ 99 ರೈತ ಕುಟುಂಬಗಳಿಗೆ ಸುಮಾರು 8500 ಸಸಿಗಳನ್ನು ವಿತರಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಪ್ರೇರಣಾ ಚರ್ಚ್ ಫಾದರ್ ಸಿಲ್ವೆಸ್ಟರ್ ಪೆರೇರ, ಜಿಲ್ಲಾ ಜನ ಜಾಗತಿ ವೇದಿಕೆ ಅಧ್ಯಕ್ಷ ಡಾ. ಪಿ.ಎಸ್ ಅರವಿಂದ್, ಜಿಲ್ಲಾ ನಿರ್ದೇಶಕ ಜನಾರ್ದನ್, ತಾಲೂಕು ಯೋಜನಾಧಿಕಾರಿ ಗಣೇಶ ನಾಯಕ್, ಮೇಲ್ವಿಚಾರಕ ಮಂಜುನಾಥ್, ಸಿದ್ದೇಶ್ ಸೇರಿದಂತೆ ಮತ್ತಿತರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!