ಜಗಳೂರು: ಭೋವಿ ಸಮಾಜದ ಪದಾಧಿಕಾರಿಗಳ ಅವಿರೋಧ ಆಯ್ಕೆ

Suddivijaya
Suddivijaya August 28, 2023
Updated 2023/08/28 at 4:06 PM

ಸುದ್ದಿವಿಜಯ, ಜಗಳೂರು: ತಾಲೂಕು ಬೋವಿ ಸಮಾಜದ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅರ್ಜುನ್ ಪಲ್ಲಾಗಟ್ಟೆ, ಕಾರ್ಯದರ್ಶಿಯಾಗಿ ಎಂ.ವಿ.ಶ್ರೀನಿವಾಸ್ ಮೆದಗಿನಕೆರೆ ಅವಿರೋಧವಾಗಿ ಆಯ್ಕೆಯಾದರು.

ಭೋವಿ ವಿದ್ಯಾರ್ಥಿನಿಲಯದಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಹಕಾರ್ಯದರ್ಶಿಯಾಗಿ ಮುಸ್ಟೂರು ವಿರುಪಾಕ್ಷಿ, ಉಪಾಧ್ಯಕ್ಷರಾಗಿ ಗೋವಿಂದಪ್ಪ, ಖಜಾಂಚಿಯಾಗಿ ಮಾಳಮ್ಮನಹಳ್ಳಿ ಗ್ರಾಮದ ವಕೀಲ ಎ.ರಂಗನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಂಚಿಕಟ್ಟೆ ಗಂಗಾಧರ್, ಮರಿಕಟ್ಟೆ ಪರಶುರಾಮ,ಜಗಳೂರು ತಾಲೂಕಿನ ಭೋವಿ ಸಮಾಜದ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು.ಜಗಳೂರು ತಾಲೂಕಿನ ಭೋವಿ ಸಮಾಜದ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು.

ಬಿದರಕೆರೆ ಗೊಲ್ಲರಹಟ್ಟಿ ವೀರೇಶ್, ಯರ್ಲಕಟ್ಟೆ ಸಂದೀಪ್, ಬಂಗಾರಕ್ಕನಗುಡ್ಡ ವೆಂಕಟೇಶ್, ಜಗಳೂರು ಪಟ್ಟಣದ ಸಿ.ನಾಗರಾಜ್, ಚಿಕ್ಕಬನ್ನಿಹಟ್ಟಿ ನಾಗರಾಜ್, ಹುಚಂಗಿಪುರ ವಿರೇಶ್ ಅವಿರೋಧವಾಗಿ ಆಯ್ಕೆಯಾದರು.

ಸಭೆಯಲ್ಲಿ ಸಮಾಜದ ಮುಖಂಡರಾದ ತಾಪಂ ಮಾಜಿ ಅಧ್ಯಕ್ಷ ಬೆಂಚಿಕಟ್ಟೆ ಅಂಜಿನಪ್ಪ, ವಕೀಲರಾದ ಡಿ.ಶ್ರೀನಿವಾಸ್, ಎಸ್.ವಿ.ಈರಪ್ಪ, ಪಲ್ಲಾಗಟ್ಟೆ ಎ.ವೆಂಕಟೇಶ್, ತುಪ್ಪದಹಳ್ಳಿ ದಾಸಪ್ಪ, ರಾಮಾಜನೇಯ, ತಿರುಮಲೇಶ್ ಸೇರಿದಂತೆ ಅನೇಕರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!