ಸುದ್ದಿವಿಜಯ, ಜಗಳೂರು: ಬಿಸಿಲಿನಿಂದ ತತ್ತರಿಸಿರುವ ಬಯಲು ಸೀಮೆಗೆ ಇಂದು ವರುಣ ಪ್ರವೇಶಕ್ಕೆ ಸಿದ್ಧವಾಗಿದ್ದಾನೆ.
ದೇಶಾದ್ಯಂತ ಬಿರು ಬಿಸಿಲಿನಿಂದ ಬಳಲಿರುವ ಜನತೆಗೆ ಇನ್ನು ಮುಂದೆ ರಿಲೀಫ್ ಸಿಗಲಿದೆ. ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆಯ ಸಿಂಚನ ಆರಂಭಗೊಂಡಿದ್ದು, ಇತ್ತ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ನಿನ್ನೆ ಗಾಳಿ ಸಹಿತ ಭರ್ಜರಿ ಮಳೆಯಾಗಿದೆ.
ಮಧ್ಯ ಕರ್ನಾಟಕದಲ್ಲಿ ಮಳೆ ನಿರೀಕ್ಷೆ:
ದೇಶಾದ್ಯಂತ ಹವಾಮಾನವು ನಿರಂತರವಾಗಿ ಬದಲಾಗುತ್ತಿದ್ದು, ಬಿಸಿಲಿನ ತಾಪದ ಜತೆಗೆ ಬಿರುಗಾಳಿ, ಮಳೆಯೂ ಬೀಳುತ್ತದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಿರುವಇತ್ತೀಚಿನ ಹವಾಮಾನ ಅಪ್‍ಡೇಟ್‍ನಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆ ನಿರೀಕ್ಷೆ ಇದ್ದು ಇಂದು ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ರಾತ್ರಿ ಮಳೆ ಮಾಯ:
ಇಂದು ಬೆಳಗಿನ ಜಾವ 1.45 ರ ಸುಮಾರಿಗೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷಯಿತ್ತು. ಅಲ್ಲಲ್ಲಿ ದಟ್ಟನೆಯ ಮೋಡಗಳ ಜೊತೆಗೆ ಮೂರ್ನಾಲ್ಕು ಬಾರಿ ಗುಡುಗಿತು.
ಜಗಳೂರು ಪಟ್ಟಣದಲ್ಲಿ ಅಲ್ಪ ಪ್ರಮಾಣದ ಮಳೆಯಾಯಿತು. ಆದರೆ ಭಾರಿ ಮಳೆ ನೀರೀಕ್ಷೆ ಹುಸಿಯಾಗಿದ್ದು ಇಂದು ಸಂಜೆ ಮಳೆ ಬರುವ ಸಾಧ್ಯತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.