ಜಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಥಮ ಸ್ಥಾನ ನಿರೀಕ್ಷಿಸಬಹುದೇ?

Suddivijaya
Suddivijaya May 8, 2024
Updated 2024/05/08 at 1:55 PM

suddivijayanews8/5/2024
ಸುದ್ದಿವಿಜಯ, ಜಗಳೂರು: ಬರಪೀಡಿತ ಮತ್ತು ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನಲ್ಲಿ ಬುದ್ಧಿವಂತ ವಿದ್ಯಾರ್ಥಿಗಳೇ ಹೆಚ್ಚು. ಹೀಗಾಗಿ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲೇ ಜಗಳೂರು ತಾಲೂಕಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಫಸ್ಟ್ ಅಂಡ್ ಬೆಸ್ಟ್.

ಆದರೆ 2023-24ನೇ ಸಾಲಿತ ಫಲಿತಾಂಶ ನಾಳೆ ಬೆಳಿಗ್ಗೆ (ಗುರುವಾರ, ಮೇ.9) 10.30ಕ್ಕೆ ಪ್ರಕಟವಾಗಲಿದೆ. ಆದರೆ ಈ ಬಾರಿ ಫಲಿತಾಂಶ ಏನಾಗುತ್ತೋ ಏನೋ ಎನ್ನುವ ಕಾತುರ ಎಲ್ಲರ ಮನದಲ್ಲಿ ಕಾಡುತ್ತಿದೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಲ್ಲಿದ್ದಾರೆ. ಕಾರಣ ಈ ಬಾರಿ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಫುಲ್ ಟೈಟ್ ಮಾಡಿತ್ತು. ವೆಬ್ ಕ್ಯಾಮರಾ ಅಳವಡಿಕೆ ಮತ್ತು ಬಿಗಿ ಮಾನಟರಿಂಗ್ ಸಿಸ್ಟಂನಿಂದ ಪರೀಕ್ಷಾ ಕೇಂದ್ರಗಳ ಕಡೆ ಯಾವೋಬ್ಬ ವ್ಯಕ್ತಿಯೂ ಸುಳಿಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ತಾಲೂಕಿನಲ್ಲಿ ಒಟ್ಟು 52 ಹೈಸ್ಕೂಲ್‍ಗಳಿದ್ದು (ಖಾಸಗಿ ಸೇರಿ) ಒಟ್ಟು 2378 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪ್ರತಿವರ್ಷ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದರು.

ಅದರಲ್ಲೂ ವಿದ್ಯಾರ್ಥಿನಿಯರೇ ಫಸ್ಟ್. ಆದರೆ ಈ ಬಾರಿಯ ಫಲಿತಾಂಶ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಆಂತಕ ಮೂಡಿಸಿದೆ. ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದ್ದು, ಮೇ ಮೂರನೇ ವಾರದಲ್ಲೇ ಎರಡನೇ ಪರೀಕ್ಷೆ ಆರಂಭವಾಗಲಿದೆ.

ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಅಂಕಗಳನ್ನು ವೃದ್ಧಿಸಿಕೊಳ್ಳಲು ಉಳಿದ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಗಳು ಬರುತ್ತವೆಯೋ ಅದರ ಅಂಕಪಟ್ಟಿ ಪಡೆಯಬಹುದು.

ವಿದ್ಯಾರ್ಥಿಗಳು ಭಯ ಪಡುವ ಅಗತ್ಯವಿಲ್ಲ :

ಈ ಬಾರಿಯೂ ನಮ್ಮ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ನಿರೀಕ್ಷೆಯಲ್ಲಿದ್ದೇವೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಾರೆ ಎನ್ನುವ ಭರವಸೆ ಇದೆ.

ಈ ಬಾರಿ ನಪಾಸ್ ಆದ ಇಲ್ಲವೇ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮೇ ಮೂರನೇ ವಾರದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಭಯ ಪಡುವ ಅಗತ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಸುದ್ದಿವಿಜಯ ವೆಬ್ ನ್ಯೂಸ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!