ಸುದ್ದಿವಿಜಯ, ಜಗಳೂರು: ಕೋವಿಡ್ ಸಮಯದಲ್ಲಿ ಮನುಷ್ಯನ ಮೇಲೆ ಪ್ರಕೃತಿಯ ಮುನಿಸು ನಾವೆಲ್ಲ ಕಂಡಿದ್ದೇವೆ. ಹೆಚ್ಚುತ್ತಿರುವ ಜನ ಸಂಖ್ಯೆಯಿಂದ ಶುದ್ಧಗಾಳಿ ಕಲುಶಿತವಾಗುತ್ತಿದೆ.
ಜೀವನದಲ್ಲಿ ಹಣ, ಅಂತಸ್ತು ಕಳೆದುಕೊಂಡರೇ ಹೇಗಾದರೂ ಸಂಪಾಧಿಸಬಹುವುದು ಆದರೆ ಪ್ರಕೃತಿ ಮುನಿಸು ಹಾಗೂ ಆರೋಗ್ಯ ಕಳೆದುಕೊಂಡರೆ ಮರಳಿ ಪಡೆಯುವುದು ಅಸಾಧ್ಯ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಬಯಲು ರಂಗಮಂದಿರಲ್ಲಿ ಭಾನುವಾರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪ್ರಕೃತಿ ದಿನಾಚರಣೆ, ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶ ಎಷ್ಟು ಮುಖ್ಯನೋ ಪ್ರಕೃತಿ ಅಷ್ಟೆ ಮುಖ್ಯವಾಗಿರುತ್ತದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ವೃಕ್ಷವನ್ನು ರಕ್ಷಣೆ ಮಾಡಿದರೆ ಅದು ಉಸಿರಿರುವರೆಗೂ ನಮ್ಮನ್ನು ರಕ್ಷಣೆ ಮಾಡುತ್ತದೆ. ಒಂದು ಬಾಟಲಿ ನೀರು ಖರೀದಿಸಿದರು ಬೆಲೆ ಕೊಡಬೇಕು.
ಆದರೆ ಭೂಮಿಯ ಕೋಟ್ಯಾಂತರ ಜನರಿಗೆ ಉಚಿತವಾಗಿ ನೀಡುವ ಪ್ರಕೃತಿಗೆ ಯಾವ ಬೆಲೆ ಕಟ್ಟುವುದಿಲ್ಲ, ಆದರೆ ಅದನ್ನು ರಕ್ಷಣೆ ಮಾಡುವುದನ್ನು ಮರೆತು ಅದನ್ನು ಹಾಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕ್ಷೇತ್ರದ ಮತದಾರರು ಶಾಸಕನಾಗಿ ಮಾಡಿದ್ದಾರೆ ಅವರ ಋಣ ತೀರಿಸುವುದು ನನ್ನ ಕರ್ತವ್ಯ, ತಾಲೂಕಿನ ಅಭಿವೃದ್ದಿಗೆ ಒತ್ತು ನೀಡುತ್ತೇನೆ. ಐದು ವರ್ಷಗಳಾದ ಮೇಲೆ ಮಾಡಿದ ಅಭಿವೃದ್ದಿ ಕೆಲಸಗಳು ಉತ್ತರ ನೀಡುವಂತೆ ಮಾಡುತ್ತೇನೆ. ಪೌರಕಾರ್ಮಿಕರ ಜೊತೆಯಾಗಿದ್ದು ಪಟ್ಟಣದ ಸ್ವಚ್ಛತೆಗೊಳಿಸಲಾಗುವುದು, ನನಗೆ ಪ್ರಚಾರಕ್ಕಿಂತ ಜನರ ಸೇವೆ ಮುಖ್ಯವಾಗಿದೆ ಎಂದರು.
ಎನ್‍ಎಂಕೆ ಶಾಲೆಯ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಮಾತನಾಡಿ, ಪ್ರಕೃತಿಯನ್ನು ಉಳಿಸಿಕೊಳ್ಳದಿದ್ದರೆ ಮನುಷ್ಯನಿಗೆ ಉಳಿಗಾಲವಿಲ್ಲ. ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದ ಭೂಮಿಯ ಪರಿಸರ ಆಳಾಗುತ್ತಿದೆ. ಮಾರಕ ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಿದರೆ ಮಾತ್ರ ಕಡಿವಾಣ ಬೀಳುತ್ತದೆ ಎಂದರು.
ಈವೇಳೆ ಎನ್‍ಎಂಕೆ ಮತ್ತು ನಾಲಂದ ಪಿಯು ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ಅಂಗವಾಗಿ ಬಯಲು ರಂಗ ಮಂದಿರವನ್ನು ಪೌರಕಾರ್ಮಿಕರ ಜೊತೆಗೂಡಿ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಲೋಕ್ಯಾನಾಯ್ಕ. ಪ.ಪಂಸದಸ್ಯರಾದ ರಮೇಶ್, ರವಿಕುಮಾರ್, ಮಂಜುನಾಥ್, ಎನ್‍ಎಂಕೆ ಲೋಕೇಶ್. ಉಪನ್ಯಾಸಕ ನಾಗೇಶ್. ತಿಪ್ಪೇಸ್ವಾಮಿ. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡ ಮಹಮದ್ ಗೌಸ್,
ನಿವೃತ್ತ ಉಪನ್ಯಾಸಕ ಷಂಷೀರ್ ಅಹಮದ್, ಪ್ರಬಾರ ಬಿಇಒ ಸುರೇಶ್ ರೆಡ್ಡಿ, ಪ.ಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್, ಗ್ರಾ.ಪಂ ಕಾರ್ಯದರ್ಶಿ ಭರಮಗೌಡ, ನಾಗರಾಜ್ ಸೇರಿದಂತೆ ಮತ್ತಿತರಿದ್ದರು.