ಜಗಳೂರು: ಮಾಜಿ ಮಂತ್ರಿ ಜಿಎಚ್.ಅಶ್ವಥ್‍ರೆಡ್ಡಿ ಪತ್ನಿ ಮೃತ್ಯು

Suddivijaya
Suddivijaya November 9, 2023
Updated 2023/11/09 at 1:29 PM

ಸುದ್ದಿವಿಜಯ, ಜಗಳೂರು: ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ರಾಜ್ಯ ಸರಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ದಿ. ಜಿ.ಎಚ್.ಅಶ್ವಥ್‍ರೆಡ್ಡಿ ಅವರ ಪತ್ನಿ ಜಿ.ಎಚ್.ತಿಪ್ಪಮ್ಮ (84) ಚಿತ್ರದುರ್ಗ ನಗರದಲ್ಲಿ ಗುರುವಾರ ವಿದಿ üವಶರಾಗಿದ್ದಾರೆ.

ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಇಬ್ಬರು ಗಂಡು ಮಕ್ಕಳು, ಒಬ್ಬರು ಪುತ್ರಿಯಿದ್ದಾರೆ. ಚಿತ್ರದುರ್ಗನಗರದಲ್ಲಿ ಶುಕ್ರವಾರ 1 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಬಂಧುಗಳಾದ ಸುಧೀರ್ ರೆಡ್ಡಿ ತಿಳಿಸಿದ್ದಾರೆ.ಕಳೆದ ವಾರ ಚಿತ್ರದುರ್ಗ ನಗರದ ಅವರ ನಿವಾಸಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ತಿಪ್ಪಮ್ಮ ಅವರ ಆರೋಗ್ಯ ವಿಚಾರಿಸಿದ್ದರು. ಮೃತ ತಿಪ್ಪಮ್ಮನವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಶಾಸಕ ಬಿ.ದೇವೇಂದ್ರಪ್ಪ, ಕೆಪಿಸಿಸಿ ಎಸ್‍.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಗವಂತನಲ್ಲಿ ಕೋರಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!