ಜನವರಿ ಅಂತ್ಯಕ್ಕೆ ತಾಲೂಕಿನ 20 ಕೆರೆಗಳು ಭರ್ತಿ: ಶಾಸಕ ಎಸ್.ವಿ.ರಾಮಚಂದ್ರ

Suddivijaya
Suddivijaya December 25, 2022
Updated 2022/12/25 at 1:39 PM

ಸುದ್ದಿವಿಜಯ, ಜಗಳೂರು: ಬರದ ತಾಲೂಕಿನ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ 57 ಕೆರೆಗಳನ್ನು ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು 20 ಕೆರೆಗಳಿಗೆ ಜನವರಲ್ಲಿ ನೀರು ಸೇರಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಭಾನುವಾರ ಮಾತನಾಡಿದ ಅವರು, ಎರಡು ದಶಕಗಳಿಂದ ಶಿಥಿಲಾವಸ್ತೆಯ ಹಳೇ ಕಟ್ಟಡದಲ್ಲಿ ನಡೆಯುತ್ತಿತ್ತು. ಇದೀಗ ಸುಸಜ್ಜಿತವಾದ ಸುಂದರ ವಿನ್ಯಾಸದೊಂದಿಗೆ ಹೊಸ ಕಟ್ಟಡ ಭಾಗ್ಯ ದೊರೆತಿರುವುದು ಸಂತಸದ ಸಂಗತಿ ಸರ್ವರೂ ಕೈಜೋಡಿಸಬೇಕು. ಸರಕಾರದ ಅನುದಾನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಯೋಜನೆಯಡಿ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆ ಗ್ರಾಮದ ಪಕ್ಕದಲ್ಲಿನ ಹಳ್ಳ ಮೈದುಂಬಿ ಹರಿಯುತ್ತಿದೆ. ಜನೆವರಿಯಲ್ಲಿ ಕೆರೆಗಳಿಗೆ ಪೂಜೆ ಹಾಗೂ ಭದ್ರಾಮೇಲ್ದಂಡೆ ಯೋಜನೆ ಸಕಾರಗೊಂಡಿದ್ದು ಕಾಮಗಾರಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ. ತಾಲೂಕಿನಲ್ಲಿ 45 ಸಾವಿರ ಎಕರೆ ಪ್ರದೇಶ ನೀರಾವರಿ ಪ್ರದೇಶವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಶಾಂತಿಕಾಪಾಡಿರುವೆ: ನನ್ನ ಆಡಳಿತಾವಧಿಯಲ್ಲಿ ಯಾವುದೇ ಅಶಾಂತಿ ಸೃಷ್ಠಿಸದೆ ಪೆÇಲೀಸ್ ಠಾಣೆ ಮೆಟ್ಟಿಲೇರದಂತೆ ಶಾಂತಿ ಸಾಮರಸ್ಯದ ಬದುಕಿಗೆ ಸ್ಪೂರ್ತಿಯಾಗಿದೆ. ಇದನ್ನು ಮನಗಂಡು ಸಂವಿಧಾನ ಬದ್ದ ಮತದಾನದ ಹಕ್ಕನ್ನು ಸೂಕ್ತ ವ್ಯಕ್ತಿಗೆ ಆಯ್ಕೆ ಮಾಡಬೇಕು ಎಂದು ಮನವಿಮಾಡಿದರು.

ತಾ.ಪಂ ಇಓ ಚಂದ್ರಶೇಖರ್ ಮಾತನಾಡಿ, ಮನರೇಗಾ ಯೋಜನೆಯಡಿ ದನದಕೊಟ್ಟಿಗೆ ನಿರ್ಮಾಣಕ್ಕೆ 57 ಸಾವಿರ ಅನುದಾನ ಲಭ್ಯವಿದೆ ಇತರೆ ವೈಯಕ್ತಿಕ ಕಾಮಗಾರಿಗಳನ್ನು ಸದುಪಯೋಗಪಡೆಯಬೇಕು ಎಂದರು. ಇದೇ ವೇಳೆ ಉದ್ದಬೋರನಹಳ್ಳಿ ಗ್ರಾಮದ 8 ಜನರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಸಂದರ್ಭದಲ್ಲಿ ಅಧ್ಯಕ್ಷೆ ಮಂಜಮ್ಮ ಭೀಮಪ್ಪ ಪೂಜಾರ್, ಉಪಾಧ್ಯಕ್ಷೆ ಯಲ್ಲಮ್ಮ ,ಸದಸ್ಯರಾದ ಶರಣಪ್ಪ, ಬಿ.ಟಿ ಬಸವರಾಜ್, ದೇವರಾಜ್, ಜ್ಯೋತೆಪ್ಪ, ನಗೀನಬಾನು, ಸುನಿತಾಸಿದ್ದೇಶ್, ರೇಖಾ, ಸುಂದರಪ್ಪ, ಎಸ್.ಕೆ.ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!