ಸುದ್ದಿವಿಜಯ, ಜಗಳೂರು: ತಾಲೂಕಿನ 57 ಕೆರೆ ತುಂಬಿಸುವ ತುಂಗಭದ್ರಾ ನದಿಯಿಂದ ನೀರೆತ್ತು ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಸಭಾಂಗಣದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಎಂಜಿಯನಿಯರ್ ಗಳಿಗೆ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ತುಸು ಖಾರವಾಗಿಯೆ ಪ್ರಶ್ನಿಸಿದರು.
ನಮ್ಮ ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿದ್ದವರು ಒಂದು ತಿಂಗಳಲ್ಲಿ ನೀರು ಬರುತ್ತದೆ. ವಾರದಲ್ಲಿ ನೀರು ಹರಿಯುತ್ತದೆ ಎಂದು ಜನರಿಗೆ ಭರವಸೆ ನೀಡಿ ಹೋದರು. ಈಗ ಶಾಸಕನಾಗಿರುವ ನನಗೆ ಜನ ನೀರು ಯಾವಾಗ ಹರಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಉತ್ತರ ಕೊಡುವುದು ಕಷ್ಟವಾಗುತ್ತಿದೆ.
ಜುಲೈ ಅಂತ್ಯಕ್ಕೆ 11 ಕೆರೆಗಳನ್ನು ತುಂಬಿಸುತ್ತೇವೆ ಎಂದು ಹೇಳಿದ್ದೀರಿ. ಮಳೆಯಿಲ್ಲದ ಕಾರಣ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಯೋಜನೆ ಆರಂಭವಾಗಿ ಐದು ವರ್ಷ ಪೂರ್ಣಗೊಂಡಿದ್ದರೂ ಕೇವಲ ತುಪ್ಪದಹಳ್ಳಿ ಕೆರೆ ನೀರು ಹರಿದಿದ್ದು ಬಿಟ್ಟರೆ ಯಾವುದೇ ಕೆರೆಗಳಿಗೆ ನೀರು ಬಂದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಎಕ್ಸಿಕಿಟಿವ್ ಎಂಜಿನಿಯರ್ ಮಂಜುನಾಥ್, ಗ್ಯಾಸ್ ಪೈಪ್‍ಲೈನ್ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ನೆಲದಲ್ಲಿ ಹಾಕಿರುವ ಬಿಎಸ್‍ಎನ್‍ಎಲ್ ಕೇಬಲ್‍ಗಳ ಕಂಪನಿಗಳ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಕೆಲ ರೈತರು ಪರಿಹಾರಕ್ಕಾಗಿ ಅಡ್ಡಿಪಡಿಸುತ್ತಿದ್ದಾರೆ.
ಅಲ್ಲದೇ ಏಳು ಕಿಮೀ ದೂರ 1.6 ಡಯಾ ಪೈಪ್‍ಗಳ ಕೊರತೆಯಿದ್ದು ಮುಂದಿನ ವಾರ ಬಳ್ಳಾರಿಯ ಜಿಂದಾಲ್‍ನಿಂದ ಬರುತ್ತಿವೆ. ಆ ಕಾಮಗಾರಿ ಮುಕ್ತಾಯವಾದರೆ ಕನಿಷ್ಠ 30 ಕೆರೆಗಳಿಗೆ ನೀರು ಹರಿಸುತ್ತೇವೆ. ಇದೇ ಮಳೆಗಾಲ ಮುಗಿಯುವುದರೊಳಗೆ ಕೆರೆಗಳಿಗೆ ನೀರು ಹರಿಸಲು ಶತಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಸಾಸ್ವೇಹಳ್ಳಿ, ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಗಳ ಪಂಪ್‍ಹೌಸ್, ಡಿಲೆವರಿ ಛೇಂಬರ್, ಪೈಪ್‍ಲೈನ್ ಕಾಮಗಾರಿ, ವಿದ್ಯುತ್‍ಕಂಬಳ ಅಳವಡಿಕೆ, ಎಂಜಿಯರ್‍ಗಳು ಕಾಮಗಾರಿ ಪ್ರಗತಿ ಬಗ್ಗೆ ಪಿಪಿಟಿಯಲ್ಲಿ ಸಮಗ್ರ ಮಾಹಿತಿ ನೀಡಿದರು.
ವರದಿ ತಯಾರಿಸಿ ತನ್ನಿ:ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಮಂದಗತಿಯಲ್ಲಿ ಸಾಗುತ್ತಿದ್ದು ಅದಕ್ಕಾಗಿ ಪ್ರತ್ಯೇಕ ಸಭೆ ಕಡೆಯಲು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೀರಾವರಿ ನಿಗದಮ ಎಂಡಿ ಮಲ್ಲಿಕಾರ್ಜುನ ಗುಂಗೆ ಅವರಿಗೆ ಹೇಳಿದರು.
ಕಾಮಗಾರಿಗಳ ಎಲ್ಲೆಲ್ಲಿ ನಡೆಯುತ್ತಿವೆ ಮತ್ತು ನಿಧಾನಗತಿ ಕಾಮಗಾರಿಗೆ ಕಾರಣವೇನು? ಎಂಬುದರ ಕುರಿತು ಜುಲೈ4 ರ ಒಳಗೆ ವರದಿ ತಯಾರಿಸಿ ತನ್ನಿ. ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡೋಣ ಎಂದು ಎಂಜಿನಿಯರ್‍ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಚೀಫ್ ಎಂಜಿನಿಯರ್ ಶಿವಾನಂದ್ ಬಣಕಾರ್, ಸೂಪರಿಂಡೆಂಟ್ ಎಂಜಿನಿಯರ್ ಪ್ರಶಾಂತ್, ಎಇಇ ಮನೋಜ್, ಶ್ರೀಧರ್, ಕೆರೆ ಸಮಿತಿ ಅಧ್ಯಕ್ಷ ಶಶಿಧರ್ ಪಾಟೀಲ್, ಜಿ.ಶಂಕರ್ ಕಂಪನಿಯ ಮೇನೇಜರ್ ದಯಾನಂದ್, ಎಕ್ಸಿಕಿಟಿವ್ ಎಂಜಿನಿಯರ್ ಸುರೇಶ್, ಎಇಇ ತಿಪ್ಪಾನಾಯ್ಕ್,
ದಾವಣಗೆರೆ ನೀರಾವರಿ ನಿಗಮದ ಎಕ್ಸಿಕಿಟ್ಯೂವ್ ಎಂಜಿನಿಯರ್ ಮಂಜುನಾಥ್. ಎಇ ಜಗದೀಶ್, ಕಲ್ಲೇಶ್‍ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ, ರಮೇಶ್‍ರೆಡ್ಡಿ ಸೇರಿದಂತೆ ಅನೇಕರು ಇದ್ದರು.