ಕೆರೆ ತುಂಬಿಸುವ ಯೋಜನೆಯಿಂದ ಭರಮಸಮುದ್ರ ಕೆರೆ ಕೈಬಿಟ್ಟ ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧ ಆಕ್ರೋಶ!

Suddivijaya
Suddivijaya May 1, 2023
Updated 2023/05/01 at 2:23 PM

ಸುದ್ದಿವಿಜಯ, ಜಗಳೂರು: ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ತಾಲೂಕಿನ 57 ಕೆರೆ ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆಯಲ್ಲಿ ಭರಮಸಮುದ್ರ ಕೆರೆಗೆ ನೀರು ತುಂಬುವ ಕಾರ್ಯವನ್ನು ಶಾಸಕ ಎಸ್.ವಿ.ರಾಮಚಂದ್ರ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬೇರೆ ಗ್ರಾಮದ ಕೆರೆಗಳಿಗೆ ಭರಮಸಮುದ್ರ ಗ್ರಾಮದ ಗೇಟ್‍ನಲ್ಲಿ ಹಾದು ಹೋಗುತ್ತಿರುವ ಪೈಪ್‍ಲೈನ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ಮಾಡಿದರು. ಇದೇ ಮಾರ್ಗದಲ್ಲಿ ಮುಂದಿನ ಕೆರೆಗಳಿಗೆ ನೀರು ಹೋಗುತ್ತಿದೆ ಆದರೆ ನಮ್ಮ ಗ್ರಾಮದ ಕೆರೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ.

ಅಷ್ಟೇ ಅಲ್ಲದೇ 16 ನೇ ಸ್ಥಾನದಲ್ಲಿದ್ದ ಭರಮಸಮುದ್ರ ಕೆರೆಯ ಹೆಸರನ್ನು ತೆಗೆಸಿ ನಂದಿಕಂಬ ಎಂಬ ಗ್ರಾಮದ ಕೆರೆಯನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಭರಮಸಮುದ್ರ ಉದ್ದಗಟ್ಟ, ತಿಮ್ಮಲಾಪುರ, ಕಾಮಗೇತನಹಳ್ಳಿ ಸೇರಿದಂತೆ ಏಳು ಹಳ್ಳಿಗಳ ಸಾವಿರಾರು ರೈತರ ಕನಸು ನುಚ್ಚುನೂರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ, ತಾಪಂ ಸೇರಿ ಯಾವುದೇ ಚುನಾವಣೆಗಳು ನಡೆದರೂ ಬಿಜೆಪಿಗೆ ಮತಹಾಕುವುದಿಲ್ಲ. ಶಾಸಕ ಎಸ್.ವಿ.ರಾಮಚಂದ್ರ ರವರು ರೈತರಿಗೆ ಅನ್ಯಾಯ ಮಾಡಿದ್ದಾರೆ. 57 ಕೆರೆ ತುಂಬಿಸುವ ಯೋಜನೆಯಲ್ಲಿ ಭರಮಸಮುದ್ರ ಕೆರೆಯ ಹೆಸರಿತ್ತು. ಆದರೆ ಅದನ್ನು ತೆಗೆದುಹಾಕಿ ಬೇರೆ ಗ್ರಾಮದ ಹೆಸರನ್ನು ಸೇರಿಸಿರುವುದು ದುರಾದೃಷ್ಟಕರ ಎಂದು ಹೋರಾಟಗಾರ ನಾಗಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಮಾತನಾಡಿ, ಕಳೆದ 1 ವರ್ಷದಿಂದ 57 ಕೆರೆಯ ಪಟ್ಟಿಯಲ್ಲಿ ಭರಮಸಮುದ್ರ ಕೆರೆಯ ಹೆಸರನ್ನು ಸೇರ್ಪಡೆ ಮಾಡಲು ಶಾಸಕ ಎಸ್.ವಿ.ರಾಮಚಂದ್ರ ರವರಿಗೆ ಮನವಿ ಕೊಟ್ಟಿದ್ದೆವು. ಆದರೆ ಅವರು ಅನ್ನದಾತ ರೈತರ ಮನವಿಗೆ ಸ್ಪಂದನೆ ಮಾಡಿಲ್ಲ. ಆದ್ದರಿಂದ ರೈತರು ಅವರ ವಿರುದ್ಧ ಜನರು ಆಕ್ರೋಶ ಭರಿತರಾಗಿದ್ದಾರೆ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆರೆ ಸಂರಕ್ಷಣೆ ಸಮಿತಿ ಸದಸ್ಯ ಪೆÇೀರಣ್ಣ, ರೈತ ಹೋರಾಟಗಾರ ಗುರುಸಿದ್ದಪ್ಪ, ಗ್ರಾಪಂ ಸದಸ್ಯ ಮಲ್ಲೇಶ್ ತಿಮ್ಮಲಾಪುರ, ಶಿವಲಿಂಗಪ್ಪ, ಈರಣ್ಣ ಗ್ರಾಮಸ್ಥರಾದ ವಿಕ್ರಮ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಪೆದ್ದಣ್ಣ, ಸೂರಲಿಂಗಪ್ಪ ಕಾಮಗೇತನಹಳ್ಳಿ, ಎ.ಕೆ.ಚಂದ್ರಪ್ಪ, ಮಂಜುನಾಥ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!