ಅನಾಥ ನಿಧಿ ಸಂಗ್ರಹಕ್ಕೆ ಜೋಳಿಗೆ ಹಾಕಲು ಸಿದ್ಧ : ಶಾಸಕ ದೇವೇಂದ್ರಪ್ಪ

Suddivijaya
Suddivijaya June 13, 2023
Updated 2023/06/13 at 3:09 PM

ಸುದ್ದಿವಿಜಯ,ಜಗಳೂರು: ಅನಾಥರ, ನಿರ್ಗತಿಕರ, ಬಡವರ ಅಭ್ಯುದಯಕ್ಕೆ ನನ್ನ ವೇತನದಲ್ಲಿ 50 ಸಾವಿರ ಹಾಕುವ ಮೂಲಕ

ಅನಾಥ ನಿಧಿ  ಸ್ಥಾಪಿಸಿ  ಅದರಲ್ಲಿ ಸಂಗ್ರಹವಾದ ಹಣವನ್ನು ಅನಾಥ ಮಕ್ಕಳಿಗೆ, ಅಶಕ್ತರಿಗೆ ನೆರವು ನೀಡಲು ಚಿಂತನೆ ಮಾಡಿದ್ದು ಸುದೀರ್ಘ ಚರ್ಚೆ ಮಾಡಿ ಅನುಷ್ಠಾನ ಮಾಡುವುದಾಗಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಅಣಬೂರು, ಕ್ಯಾಸೇನಹಳ್ಳಿ, ಹನುಮಂತಾಪುರ ಮತ್ತು ಕೆಚ್ಚೇನಹಳ್ಳಿ ಗ್ರಾಪಂ ಗಳಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಶುಕ್ರವಾರ ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಗಳಿಗೆ 5 ಲಕ್ಷ ರೂ ಚಕ್ ನೀಡಿ  ಮಾತನಾಡಿದರು.

ತಿಂಗಳಿಗೊಮ್ಮೆ ಜೋಳಿಗೆ ಹಾಕಿಕೊಂಡು ಅನಾಥ ನಿಧಿ ಸಂಗ್ರಹಿಸಲಾಗುವುದು‌.ನನ್ನ ಸಂಬಳದಲ್ಲಿ 50ರೂ ಹಾಕಿ ಸಮಾನ ವಯಸ್ಕರಿಂದ ನಿಧಿ ಕ್ರೂಢೀಕರಿಸಲಾಗುವುದು ಎಂದರು.

ಗ್ರಾಮಸ್ಥರ ಬೇಡಿಕೆಯಂತೆ  ಗ್ರಾಮದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಅಣಬೂರು ಗ್ರಾಮದ ಜಮೀನೊಂದರಲ್ಲಿ ಬಿತ್ತನೆ ಹೊಗಿದ್ದ ರೈತರಿಬ್ಬರು ಸಿಡಿಲು ಬಡಿದು ಶುಕ್ರವಾರ ಸಂಜೆ ಮೃತಪಟ್ಟಿದ್ದ ಕಾಟಪ್ಪ, ರಾಜಪ್ಪ ಅವರಿಗೆ ಶಾಸಕರು ಸಂತಾಪ ಸೂಚಿಸಿದರು.‌

ಸರಕಾರದ ಐದು ಗ್ಯಾರಂಟಿಗಳಿಗೆ ಸರಕಾರವೆಂಬ  ದೇವರು ವರ ಕೊಟ್ಟಿದೆ.  ಪೂಜಾರಿಗಳಾದ  ನಾವುಗಳು ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಬೇಕು.

ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂದು ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ  ಶಾಸಕರು ಎಚ್ಚರಿಕೆ ನೀಡಿದರು.

ಮನಸೆಳೆದ ಉಪ್ಪು, ತೆಂಗಿನ ಕಾಯಿ ಕಥೆ;

ಇಬ್ಬರು ವ್ಯಾಪಾರಿ ಗಳಲ್ಲಿ ಒಬ್ಬ ತೆಂಗಿನಕಾಯಿ ವ್ಯಾಪಾರಿ. ಮತ್ತೊಬ್ಬ ಉಪ್ಪಿನ ಕಾಯಿ ಮಾರುತ್ತಿದ್ದ. ಮಳೆಯಲ್ಲಿ ಉಪ್ಪು ಕರಗಿ ಹೋಯ್ತು. ಆದರೆ ಉಪ್ಪು ವ್ಯಾಪಾರಿ ತಾಳ್ಮೆಯಿಂದ ಮನೆಗೆ ಹೋದ.

ಆದರೆ ತೆಂಗಿನ ಜುಟ್ಟು ನೆನೆದು ಹೋಗಿದ್ದಕ್ಕೆ ಕಣ್ಣೀರು ಹಾಕದ ಎಂದು ಟಿಕೆಟ್ ವಂಚಿತ ಕೆ.ಪಿ.ಪಾಲಯ್ಯ ಮತ್ತು ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರಿಗೆ ಶಾಸಕ ದೇವೇಂದ್ರಪ್ಪ ಕ್ಯಾಸೇನಹಳ್ಳಿ ಗ್ರಾಪಂ ನಲ್ಲಿ ಟಾಂಗ್ ಕೊಟ್ಟರು. ಆಗ ಕಾಂಗ್ರೆಸ್ ಕಾರ್ಯಕರ್ತರು ಕೇಕೆ ಹಾಕಿ, ಚಪ್ಪಾಳೆ ತಟ್ಟಿದರು.

ಕಾಂಗ್ರೆಸ್ ಮುಖಂಡ ಪ್ರಭು ಮಾತನಾಡಿ, ನರೇಗಾ ಯೋಜನೆ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು. ಕೂಲಿಕಾರರಿಗೆ ಕೆಲಸ ನೀಡಬೇಕು, ಗ್ರಾಮಗಳ  ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಚಾರಕ್ಕೆ  ಇತಿಶ್ರಿ ಹಾಡಬೇಕು. ಪಿಡಿಒ ಮತ್ತು ಸಿಬ್ಬಂದಿಗಳಿಗೆ ಕೆಲಸ ತೆಗೆದುಕೊಳ್ಳಬೇಕು. ಅಧಿಕಾರಿಗಳ ತಂಡದೊಂದಿಗೆ  ಗ್ರಾಮದಲ್ಲಿ ಸಂವಾದ ಮಾಡಿ‌ ಜನರ ಸಮಸ್ಯೆಗಳಿಗೆ  ಸ್ಪಂದಿಸಿ ಪರಿಹರಿಸಬೇಕು ಎಂದರು

ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ನಲುಗುತ್ತಿದ್ದಾಗ ಬಡವರಿಗೆ, ನಿರುದ್ಯೋಗಿಗಳಿಗೆ ವರ್ಷದಲ್ಲಿ‌ ನೂರು ದಿನಗಳ ಕಾಲ ಕೂಲಿ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆಯಡಿ ಜಾರಿಗೆ ತರಲಾಗಿತ್ತು. ಇದಕ್ಕೆ 60ಸಾವಿರ ಕೋಟಿ ಮೀಸಲಿಡಬೇಕು.

ಆದರೆ ಕೇಂದ್ರ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ  ಎಂಟು ವರ್ಷಗಳಲ್ಲಿ  ಹಂತ ಹಂತವಾಗಿ  ಕೆಲವು ಷರತ್ತುಗಳನ್ನು ಹಾಕಿ ಕೆಲಸಕ್ಕೆ ಬ್ರೇಕ್ ಹಾಕಿ ಬಡ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ ಆರೋಪಿಸಿದರು.

ತಾಲೂಕಿನ ಗಡಿಯ  ಅಣಬೂರು ಗ್ರಾಮ ಪಂಚಾಯಿತಿಯಲ್ಲಿ ಹತ್ತಾರು ಸಮಸ್ಯೆಗಳಿವೆ ಅವುಗಳಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ.

ಸರ್ಕಾರಿ ಬಸ್ ವ್ಯವಸ್ಥೆ  ಸಂಚಾರ ಕಡಿಮೆ ಇದ್ದು ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ ಓಡಾಡಲು ತೊಂದರೆಯಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿದ್ದು,
ಕರಡಿ, ಚಿರತೆ ಹಾವಳಿ ಇದೆ. ಅನೇಕ ಬಾರಿ ಜನರ ಮೇಲೆ ದಾಳಿಯಾಗಿ ಗಾಯಗೊಂಡು ಸಾವಿನಂಚಿನಿಂದ ತಪ್ಪಿಸಿಕೊಂಡಿದ್ದಾರೆ.

ಹಾಗಾಗಿ ರಾತ್ರಿ ವೇಳೆ ಜಮೀನುಗಳಲ್ಲಿ ನೀರಾಯಿಸಲು ಸಾಧ್ಯವಾಗುತ್ತಿಲ್ಲ. ಹಗಲಿನಲ್ಲಿ  ಏಳು ತಾಸು ವಿದ್ಯುತ್ ಪೂರೈಕೆ ಮಾಡಬೇಕು,ಕುಡಿಯುವ ನೀರಿನ ಘಟಕ ದುರಸ್ಥಿಪಡಿಸಬೇಕು.

ಕುಡಿಯುವ ನೀರು, ಚರಂಡಿ ಮೂಲಭೂತ ಸೌಕರ್ಯ ಕಲ್ಪಿಸಬೇಕು,ಗುರುಸಿದ್ದನಗೌಡ ನಗರದಲ್ಲಿ 80ಕುಟುಂಬಗಳು ವಾಸವಿದ್ದು,ಜಾಲಿ ಗಿಡಗಳಿಂದ ತುಂಬಿದೆ  ತೆರವುಗೊಳಿಸಬೇಕು ಎಂದು ಗ್ರಾಮದ ಮುಖಂಡ ಮಂಜುನಾಥ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಕವಿತಾ ರೇಣುಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಮಹದ್, ಗ್ರಾ.ಪಂ ಉಪಾದ್ಯಕ್ಷೆ ಸಣ್ಣ ನಾಗಮ್ಮ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ.ಶೇಖರಪ್ಪ, ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್, ಸಿ.ತಿಪ್ಪೇಸ್ವಾಮಿ, ಕಾನನಕಟ್ಟೆ ಪ್ರಭು, ನಾಗರಾಜನಾಯಕ, ಗುರುಮೂರ್ತಿ, ವಿಜಯಕೆಂಚೋಳ್, ಬರ್ಕತ್ ಅಲಿ, ಅಹಮದ್ ಅಲಿ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!