ಸುದ್ದಿವಿಜಯ, ಜಗಳೂರು: ತಾಲೂಕಿನ ದೊಣೆಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಸುಮಾರಿಗೆ ಕ್ಯಾಂಟರ್ ಟ್ರ್ಯಾಕ್ಟರ್‍ಗೆ ಗುದ್ದಿದ ನಂತರ ಕಿರಣ್‍ರೆಡ್ಡಿ ಡಾಬಾದ ಬೋರ್ಡ್‍ಗೆ ಗುದ್ದಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪ್ರಕಣ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಘಟನೆಯ ವಿವರ:
ಜಮೀನು ಉಳಿಮೆ ಮಾಡಿ ಟ್ರ್ಯಾಕ್ಟರ್ ಮೂಲಕ ಮನೆಗೆ ಹಿಂದಿರುಗುತ್ತಿದ್ದ ದೊಣೆಹಳ್ಳಿ ಗ್ರಾಮದ ವಿನಯ್ (17), ಶಿವು (19) ರಾಷ್ಟ್ರೀಯ ಹೆದ್ದಾರಿ ಮೂಲಕ ಮನೆಗೆ ಹಿಂದಿರುಗುತ್ತಿದ್ದಾಗ ಸದ್ಗುರು ಪೆಟ್ರೋಲ್ ಬಂಕ್ ಬಳಿ ಹೊಸಪೇಟೆ ಕಡೆಯಿಂದ ಬಂದ ಕ್ಯಂಟರ್ ವಾಹನವೊಂದು ಹಿಂಬದಿಯಿಂದ ಟ್ರ್ಯಾಕ್ಟರ್‍ಗೆ ಗುದ್ದಿದೆ.
ಟ್ರ್ಯಾಕ್ಟರ್ ಮುಗುಚಿ ಬಿದ್ದು ಸಂಪೂರ್ಣ ನುಜ್ಜಗುಜ್ಜಾಗಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್‍ನಲ್ಲಿದ್ದ ವಿನಯ್ ಮತ್ತು ಶಿವು ಅವರಿಗೆ ಮೊಣಕೈ, ಬೆನ್ನು, ಕೈಗಳಿಗೆ ಸಣ್ಣಪುಟ್ಟಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಕ್ಯಾಂಟರ್ ಚಾಲಕನ ನಿಯಂತ್ರಣಕ್ಕೆ ಬಾರದೇ ಕಿರಣ್‍ರೆಡ್ಡಿ ಡಾಬಾದ ಬೋರ್ಡ್‍ಗೆ ಗುದ್ದಿ ಎದುರಿಗೆ ಇದ್ದ ಮಾರುತಿ ಕಾರೋಂದಕ್ಕೆ ಅಪ್ಪಳಿಸಿದ ಪರಿಣಾಮ ಕಾರ್ ಸಂಪೂರ್ಣ ಜಖಂ ಆಗಿದೆ. ಸ್ಥಳೀಯರು ತಕ್ಷಣ ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಜಗಳೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಯಾಂಟರ್ ಚಾಲಕನನ್ನು ಚಿತ್ರಲಿಂಗಪ್ಪ ಎಂದು ಗುರುತಿಸಲಾಗಿದ್ದು ಚಾಲಕನ ಮೇಲೆ ಅಜಾಗರೂಕ ಚಾಲನೆ, ಅತಿವೇಗದ ಚಾಲನೆ ಕೇಸ್ ದಾಖಲಾಗಿದೆ.