ಸುದ್ದಿವಿಜಯ, ಜಗಳೂರು: ತಮ್ಮ ಜಮೀನಿಗೆ ಟ್ರ್ಯಾಕ್ಟರ್ ಮೂಲಕ ಕೆರೆಯ ಮಣ್ಣು ಸಾಗಿಸುತ್ತಿದ್ದಾಗ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಚಾಲಕನ ಮೇಲೆ ಹರಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ತಾಲೂಕಿನ ಹೊಸಕೆರೆ ಗ್ರಾಮದ ಬಳಿ ನಡೆದಿದೆ.ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದ ಬಳಿಯ ಕೊಟ್ಟೂರು-ಜಗಳೂರು ರಸ್ತೆಯಲ್ಲಿ ಅಪಘಾತಕ್ಕೆ ಕಾರಣವಾಗಿರುವ ಟ್ರ್ಯಾಕ್ಟರ್
ಘಟನೆ ವಿವರ: ಮೂಲತಃ ಗೌರಿಪುರ ಗ್ರಾಮದ ಮಾರುತಿ (35) ತಮ್ಮ ಜಮೀನಿಗೆ ಹೊಸಕೆರೆ ಗ್ರಾಮದ ಕೆರೆಯಿಂದ ಟ್ರ್ಯಾಕ್ಟರ್ ಮೂಲಕ ಮಣ್ಣು ತುಂಬಿಕೊಂಡು ಚಲಾಯಿಸುತ್ತಿದ್ದಾಗ ಇಳಿಜಾರು ಇರುವ ಕೊಟ್ಟೂರು ಜಗಳೂರು ರಸ್ತೆಯಲ್ಲಿ ಟ್ರ್ಯಾಕ್ಟರ್ ನ್ಯೂಟ್ರಲ್ ಮಾಡಿಕೊಂಡಾಗ ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ವೇಗವಾಗಿದ್ದ ಟ್ರ್ಯಾಕ್ಟರ್‍ನ ಟ್ರೈಲರ್ ಚಾಲಕನ ಮೇಲೆ ಹತ್ತಿ ಹೋಗಿದ್ದರಿಂದ ಚಾಲಕ ಮಾರುತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ಜಗಳೂರು ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.