ಸುದ್ದಿವಿಜಯ, ಜಗಳೂರು: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಪರವಾಗಿ ಮತಯಾಚನೆಗೆ ಆಗಮಿಸಿದ ನಟ ಕಿಚ್ಚ ಸುದೀಪ್ ರಾಮಚಂದ್ರ ಪರವಾಗಿ ಬುಧವಾರ ರೋಡ್ ಶೋ ನಡೆಸಿದರು.
ಸುದೀಪ್ ಆಗಮನ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಸಂತೋಷ ತಂದಿದೆ. ‘ಕೋಟಿಗೊಬ್ಬ’ ಮಾತು ಆರಂಭಿಸುತ್ತಿದ್ದಂತೆ ‘ಹೆಬ್ಬುಲಿ’ಯ ಒಂದೊಂದು ಮಾತುಗಳು ಅಭಿಮಾನಿಗಳಲ್ಲಿ ಸಂತೋಷ ಉಂಟುಮಾಡಿತು.
ಅಂದಾಜು 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ‘ಮಾಣಿಕ್ಯ’ನ ದರ್ಶನ ಪಡೆದು ಪುನೀತರಾದರು. ಎಲ್ಲೆಲ್ಲೂ ಸುದೀಪ್ ಭಾವ ಚಿತ್ರಗಳೇ ಪಟ್ಟಣದ ತುಂಬೆಲ್ಲಾ ರಾರಾಜಿಸಿದವು. ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿಗೆ ಫ್ಯಾನ್‍ಗಳ ದಂಡೇ ಇದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ‘ಬಿಗ್‍ಬಾಸ್’ ಅತ್ಯಂತ ಹೆಚ್ಚು ಅಭಿಮಾನಿಗಳನ್ನೊಂದಿದ್ದಾರೆ.
ಅತ್ಯಂತ ಹಿಂದುಳಿದ ಜಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ‘ಕಿಚ್ಚ’ ಆಗಮನ ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿತು. ತಮ್ಮ ನೆಚ್ಚಿನ ನಟನ ಪಾದಗಳು ಜಗಳೂರಿನ ನೆಲಕ್ಕೆ ‘ಸ್ಪರ್ಶ’ವಾಗುತ್ತಿದ್ದಂತೆ ‘ನಂದಿ’ ನೋಡಿ ಪುಳಕಿತರಾದರು. ಅಶ್ವಿನಿ ಮಳೆಯ ಆರಂಭದ ಕಾಲದಲ್ಲಿ ‘ಸ್ವಾತಿಮುತ್ತು’ ಹೊರಬಂದಷ್ಟು ಫ್ಯಾನಗಳಲ್ಲಿ ‘ವೀರಮದಕರಿ’ ಎಂಟ್ರಿಗೆ ಫೀದಾ ಆಗಿ ಸಂಭ್ರಮಿಸಿದರು.
ಜಗಳೂರು ಜನತೆಗೆ ಸುದೀಪ್ ಆಗಮನದಿಂದ ‘ನಂ 73 ಶಾಂತಿನಿವಾಸ’ಕ್ಕೆ ಬಂದಂತಾಯಿತು. ‘ಜೆಸ್ಟ್ ಮಾತ್ ಮಾತಲ್ಲಿ’ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ರು. ಅಭಿಮಾನಿಗಳನ್ನು ನೋಡಿ ‘ಕೆಂಪೇಗೌಡ’ರ ಮುಖದಲ್ಲಿ ಸಂತೋಷ ಮನೆ ಮಾಡಿತ್ತು. ಬಿಸಿಲನ್ನೂ ಲೆಕ್ಕಿಸದೇ ‘ಮುಸ್ಸಂಜೆ ಮಾತು’ನಂತೆ ‘ವಿಷ್ಣುವರ್ಧನ’ ಅಭಿಮಾನಿಗಳಲ್ಲಿ ಪ್ರಚಾರದ ‘ಆಟೋಗ್ರಾಫ್’ ಹಾಕಿದರು. ನಟ ಸುದೀಪ್ ಆಗಮನದಿಂದ ಫೀದ ಆದ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು.