suddivijayanews4/07/2024
ಸುದ್ದಿವಿಜಯ, ಜಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಎನ್.ಸಿ.ಅಜ್ಜಯ್ಯ ನಾಡಿಗಾರ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ನಾಲ್ಕು ಜನರ ಹೆಸರು ಕೇಳಿ ಬಂದಿದ್ದು, ಅಂತಿಮವಾಗಿ ಎನ್.ಸಿ ಅಜ್ಜಯ್ಯ ನಾಡಿಗರ್ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಳೆದ ಹತ್ತುವರ್ಷಗಳಿಂದ ಅಧ್ಯಕ್ಷರಾಗಿದ್ದ ಶಿವನಗೌಡ್ರು ಅವದಿ ಮುಕ್ತಾಯವಾದ ಹಿನ್ನೆಲೆ ಚುನಾವಣೆ ನಿಗದಿಯಾಗಿತ್ತು. ಆದರೆ ಅಜ್ಜಯ್ಯ ನಾಡಿಗಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಹೀಗಾಗಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಿವೃತ್ತ ಪ್ರಾಧ್ಯಾಪಕ ಸುಭಾಷ್ ಚಂದ್ರಬೋಸ್, ಅಜ್ಜಯ್ಯನಾಡಿಗರ್ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಅಜ್ಜಯ್ಯ ನಾಡಿಗರ್, ನನ್ನನ್ನು ಅಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ನಿರ್ದೇಶಕರುಗಳಿಗೆ ಧನ್ಯವಾದಗಳು.
ವೀರಶೈವ ಲಿಂಗಾಯಿತ ಸಮಾಜವನ್ನು ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಈ ಸಮಾಜದ ಏಳಿಗೆಗೆ ನಾನು ನಿಷ್ಟೆಯಿಂದ ಕೆಲಸ ಮಾಡುತ್ತೇನೆ. ವೀರಶೈವ ಲಿಂಗಾಯತ ಸೊಸೈಟಿಯನ್ನು ಮುಂದಿನ ದಿನಗಳಲ್ಲಿ ಆರಂಭ ಮಾಡಲಾಗುವುದು.
ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಶಾಸಕ ದೇವೇಂದ್ರಪ್ಪ ಅವರ ಸಹಕಾರ ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಶಿವನಗೌಡ್ರು ಮಾತನಾಡಿದರು. ಈ ವೇಳೆ ಜಿಲ್ಲಾ ಸಮಿತಿಗೆ ಶಿವನ ಗೌಡ್ರು, ದೇವಿಕೆರೆ ಶಿವಕುಮಾರಸ್ವಾಮಿ, ನಾಗರತ್ನ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಎಂ.ಎಸ್. ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ವೈ.ಎನ್ ಮಂಜುನಾಥ್,
ನಿರ್ದೇಶಕರಾಗಿ ಎಸ್.ಕೆ.ಮಂಜುನಾಥ್, ಎನ್.ಎಸ್.ರಾಜು, ಎನ್.ಎಂ. ಹಾಲಸ್ವಾಮಿ, ಜೆ.ಎಸ್ ಮಲ್ಲಿಕಾರ್ಜುನ್ , ಸಿ.ಟಿ.ಬಸವರಾಜ್, ಗೋಡೆ ಪ್ರಕಾಶ್, ಕರಿಬಸವನ ಗೌಡ, ಬಸವರಾಜ್,
ವೀರೇಂದ್ರ ಪಾಟೀಲ್, ದೀಪಕ್ ಪಟೇಲ್ , ಗೌರಿಪುರ ಶಿವಣ್ಣ, ವೀರೇಶ್, ಗಡಿಮಾಕುಂಟೆ ಸಿದ್ದೇಶ್ ಆಯ್ಕೆಯಾದರು. ಮಹಿಳಾ ನಿರ್ದೇಶಕರಾಗಿ ವೀಣಾ ಗೊಗುದ್ದ ರಾಜು, ರೇಖಾ, ಆಶಾ, ಕುಸುಮ, ವಾಣಿ, ಶೋಭಾ ಆಯ್ಕೆಯಾದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರುಗಳಾದ ಕೆಚೇನಹಳ್ಳಿ ಮುರುಗೇಂದ್ರಪ್ಪ, ಬಿ.ಎಸ್‍ಮಹೇಶ್ ಕಲ್ಲೇದೇಪುರ, ಕುಮಾರ್ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.