ಸುದ್ದಿವಿಜಯ, ಜಗಳೂರು: ನಮ್ಮ ದೇಶವು ಉತ್ತಮ ಪರಿಸರ, ಹವಾಗುಣ ಹೊಂದಿರಲು ಇಲ್ಲಿನ ಮಣ್ಣಿನ ಗುಣ ಮುಖ್ಯವಾಗಿದೆ. ಸ್ವಾತಂತ್ರ್ಯಕ್ಕೆ ಶ್ರಮಿಸಿದ ವೀರರ ಸ್ಮರಣೆ, ನಾಡು , ನುಡಿ, ಜಲ ಸಂರಕ್ಷಣೆಗೆ ಪ್ರತಿಯೊಬ್ಬರೂ ಬದ್ಧವಾಗಿರಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದಲ್ಲಿಗುರುವಾರ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ದಿ ಕೋಶ ದಾವಣಗೆರೆ, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಹರು ಯುವಕೇಂದ್ರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನದಡಿಯಲ್ಲಿ ಅಮೃತ ಕಳಶ ಯಾತ್ರೆ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದರು.
ಅನೇಕ ಮಹಾತ್ಮರ ಹೋರಾಟ ಮತ್ತು ತ್ಯಾಗಬಲಿದಾನದಿಂದಾಗಿ ನಮ್ಮ ದೇಶ ಸ್ವಾತಂತ್ರ್ಯ ಪಡೆದು ಅಭಿವೃದ್ದಿಯತ್ತ ಸಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತಿಯಿಂದ ಮಣ್ಣು ಸಂಗ್ರಹಿಸುವ ಮೂಲಕ ಜನರಲ್ಲಿ ಮಣ್ಣು ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣು ನಮ್ಮ ಪ್ರಾಣ ಮತ್ತು ಶರೀರವಾಗಿದೆ. ಮಣ್ಣಿನಲ್ಲಿ ಆಹಾರ ದವಸ, ಧಾನ್ಯಗಳನ್ನು ಬೆಳೆಯುತ್ತೇವೆ. ಅವುಗಳನ್ನು ಸ್ತಿ-ಪುರುಷರಿಬ್ಬರು ಉಪಯೋಗಿಸಿದಾಗ ಅದರ ಶಕ್ತಿಯಿಂದ ತಾಯಿ ಗರ್ಭದಲ್ಲಿ ಮಗು ಭ್ರೂಣವಾಗಿ ಬೆಳೆಯುತ್ತದೆ. ಹಾಗಾಗಿಯೇ ಮಣ್ಣಿನಂದಲೆ ಹುಟ್ಟಿ, ಮಣ್ಣಿಗೆ ಸೇರುತ್ತದೆ ಮನುಷ್ಯನ ದೇಹ ಎಂದರು.
ರೈತ ದೇಶಕ್ಕೆ ಅನ್ನ ಬೆಳೆದು ಹಸಿವು ನೀಗಿಸಿದರೆ, ಯೋಧ ತನ್ನ ರಕ್ತವನ್ನು ಸುರಿಸಿ ದೇಶ ರಕ್ಷಣೆ ಮಾಡುತ್ತಾನೆ. ಈ ಇಬ್ಬರು ಎರಡು ಕಣ್ಣುಗಳಿದ್ದಂತೆ ಇವರ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ತಹಸೀಲ್ದಾರ್ ಸೈಯದ್ ಕಲಿಂ ಉಲ್ಲಾ ಮಾತನಾಡಿ, ದೇಶದ ಚುಕ್ಕಾಣಿ ಹಿಡಿಯುವ ಯುವ ಸಮೂಹ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕೀರ್ತಿ ತರಬೇಕು ಎಂದರು.
ಇದೇ ವೇಳೆ ಪಂಚಪ್ರಾಣ ಶಪಥ ಬೋಧಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಕರಿಬಸಪ್ಪ, ಜಿ.ಪಂ ಎಇಇ ಶಿವಮೂರ್ತಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಅರಣ್ಯಾಧಿಕಾರಿ ಶ್ರೀನಿವಾಸ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಜೇಶ್ವರಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ರೆಡ್ಡಿ, ರೇಷ್ಮೆ ಇಲಾಖೆ ಅಧಿಕಾರಿ ಬಾಲಸುಬ್ರಹ್ಮಣ್ಯ ಜೋಯಿಸಿ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ,ಪ.ಪಂ ಸದಸ್ಯ ಸಣ್ಣ ತಾನಾಜಿ ಗೋಸಾಯಿ, ಆರೋಗ್ಯ ನಿರೀಕ್ಷಕ ಕಿಫಾಯಿತ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಶಾಸಕರ ಪತ್ನಿ ತಿಪ್ಪಮ್ಮ ಸೇರಿದಂತೆ ಮತ್ತಿತರರಿದ್ದರು.